ಮಕ್ಕಾ ಮದೀನಾ ಯಾತ್ರೆ ಮುಗಿಸಿ ಊರಿಗೆ ಬರುತ್ತಿದ್ದ ಮಹಿಳೆ ವಿಮಾಣ ನಿಲ್ದಾಣದಲ್ಲಿ ಸಾವು

ಮಕ್ಕಾ ಮದೀನಾ ಯಾತ್ರೆ ಮುಗಿಸಿ ಊರಿಗೆ ಬರುತ್ತಿದ್ದ ಸುಳ್ಯ ತತ್ವತಾಲೂಕಿನ ಅರಂತೋಡಿನ ಮಹಿಳೆ ಹೃದಯಘಾತಕ್ಕೊಳಗಾಗಿ ಜ 24 ರಂದು ರಾತ್ರಿ ಸೌದಿ ಅರೇಬಿಯಾದ ಜಿದ್ದಾ ವಿಮಾನ ನಿಲ್ದಾಣದಲ್ಲಿ ನಿಧನರಾಗಿದ್ದಾರೆ
15 ದಿನಗಳ ಹಿಂದೆ ಐದು ಮಂದಿ ಸದಸ್ಯರೊಂದಿಗೆ ಪವಿತ್ರ ಉಮ್ರಾ ಯಾತ್ರೆ ಮಾಡಲು ಸೌದಿ ಅರೇಬಿಯಾ ಕ್ಕೆ ಹೋಗಿದ್ದರು. ಯಾತ್ರೆ ಮುಗಿಸಿ ಬರುವ ಸಂದರ್ಭಜಿದ್ದಾ ಏರ್ಪೋಟಿ್ರನಲ್ಲಿ ಇವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮೃತರು ಪುತ್ರ ಇರ್ಶಾನ್ ಹಾಗೂ ಪುತ್ರಿ ರುಕ್ಷಾನ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತ ದೇಹ ಜಿದ್ದಾ ಅಲ್ಬಾದ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top