April 2026

ಪಿಯುಸಿ ವಿಜ್ಞಾನ ವಿಭಾಗದಲ್ಲಿ‌ ಸಮನ್ಯು ಶೆಟ್ಟಿ ದ.ಕ ಜಿಲ್ಲೆಗೆ ಪ್ರಥಮ

ಮಂಗಳೂರಿನ ಎಕ್ಸ್ ಪರ್ಟ್ ಪಿ.ಯು. ಕಾಲೇಜಿನ ವಿಜ್ಞಾನ ವಿದ್ಯಾರ್ಥಿ, ಸುಳ್ಯದ ಸುದೇಶ್ ಶೆಟ್ಟಿ ಮತ್ತು ಶ್ರೀಮತಿ ಅಕ್ಷತಾ ಎಸ್‌. ಶೆಟ್ಟಿ ದಂಪತಿಯ ಪುತ್ರ ಸಮನ್ಯು ಎಸ್.ಶೆಟ್ಟಿ ವಿಜ್ಞಾನ ವಿಭಾಗದಲ್ಲಿ 598 ಅಂಕ ಗಳಿಸಿ ದ.ಕ. ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

ಪಿಯುಸಿ ವಿಜ್ಞಾನ ವಿಭಾಗದಲ್ಲಿ‌ ಸಮನ್ಯು ಶೆಟ್ಟಿ ದ.ಕ ಜಿಲ್ಲೆಗೆ ಪ್ರಥಮ Read More »

ದ್ವಿತೀಯ ಪಿ ಯು ಸಿ ಫಲಿತಾಂಶ : ಹನಾ ಫಾತಿಮಾ ಅರಂತೋಡು ಡಿಸ್ಟಿಂಕ್ಷನ್

ಅರಂತೋಡು ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿ ಕೆ ಎಂ ಉಸ್ಮಾನ್ ಮತ್ತು ಅನೀಸ ದಂಪತಿಗಳ ಪುತ್ರಿ ಹನಾ ಫಾತಿಮಾ ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗದಲ್ಲಿ 555 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೆರ್ಗಡೆ ಹೊಂದಿದ್ದಾರೆ

ದ್ವಿತೀಯ ಪಿ ಯು ಸಿ ಫಲಿತಾಂಶ : ಹನಾ ಫಾತಿಮಾ ಅರಂತೋಡು ಡಿಸ್ಟಿಂಕ್ಷನ್ Read More »

ಕೆ.ಎಲ್ ಯಶ್ ಅವರಿಗೆ ದ್ವಿತೀಯ ಪಿ.ಯು.ಸಿಯಲ್ಲಿ ಶೇ. 96.67 ಅಂಕ

ಪೆರಾಜೆ ಗ್ರಾಮದ ಕೆ. ಎಲ್. ಯಶ್ ಅವರು ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ 96.67 ಶೇಕಡ ಅಂಕಗಳಿಸಿ ಉತ್ತಿರ್ಣರಾಗಿದ್ದಾರೆ. ಇವರು ರೇವಾ ಇಂಡಿ ಪೆಂಡೆಂಟ್ ಪಿಯು ಕಾಲೇಜು ಬೆಂಗಳೂರು ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪೆರಾಜೆ ಗ್ರಾಮದ ಮಾಜಿ ಸೈನಿಕ ಕೊಳಂಗಾಯ ಲೋಲಜಾಕ್ಷ ಅವರ ಪುತ್ರ.

ಕೆ.ಎಲ್ ಯಶ್ ಅವರಿಗೆ ದ್ವಿತೀಯ ಪಿ.ಯು.ಸಿಯಲ್ಲಿ ಶೇ. 96.67 ಅಂಕ Read More »

ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಜಾಲ್ಸೂರಿಗೆ ಆಗಮನ

ಸುಳ್ಯ ಪದವು ಈಶ್ವರ ಮಂಗಳ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ಎ.೯ ರಿಂದ ಎ.೧೨ ವರೆಗೆ ನಡೆಯಲಿದ್ದು ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆಯು ಏ.8ರಂದು ಜಾಲ್ಸೂರಿಗೆ ಆಗಮಿಸಿತು.ಗೋಳಿಕಟ್ಟೆಯಿಂದ ಜಾಲ್ಸೂರು ಪೇಟೆಯವರೆಗೆ ಶ್ರೀ ವರಮಹಾಲಕ್ಷ್ಮಿ ಸ್ತ್ರೀಶಕ್ತಿ ಗೊಂಚಲು ಸಮಿತಿ ವತಿಯಿಂದ ಪೂರ್ಣಕುಂಭ ಸ್ವಾಗತಿಲಾಯಿತು.ಪೇಟೆಯಲ್ಲಿ ಜಾಲ್ಸೂರು ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಶ್ರೀರಾಮ ಹನುಮ ಜ್ಯೋತಿ ಹಸ್ತಾಂತರಿಸಲಾಯಿತು.ಭಜನಾ ಮಂದಿರದ ಗೌರವಾಧ್ಯಕ್ಷ ಮೋಹನ್ ನಂಗಾರು, ಅಧ್ಯಕ್ಷ ಜಯರಾಮ ರೈ ಜಾಲ್ಸೂರು ಕನಕಮಜಲು ಸಹಕಾರಿ ಸಂಘದ

ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಜಾಲ್ಸೂರಿಗೆ ಆಗಮನ Read More »

ನರ್ಸ್ ನದಿಗೆ ಹಾರಿ ಆತ್ಮಹತ್ಯೆ

ಶಿವಮೊಗ್ಗ ದ ಖಾಸಗಿ ಆಸ್ಪತ್ರೆಯ ನರ್ಸ್ ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಎನ್.ಆ‌ರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ನಿವಾಸಿ ರನ್ಯಾ ಬೇಸಿಲ್ (30) ಮೃತರು.ಸೋಮವಾರ ಸಂಜೆ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ರನ್ಯಾ, ಕೆಲವೇ ಕ್ಷಣಗಳಲ್ಲಿ ಮತ್ತೆ ಹೊರಗೆ ತೆರಳಿದ್ದು, ಮುಡುಬ ಸಮೀಪದ ಸೇತುವೆ ಬಳಿ ತಮ್ಮ ಸ್ಕೂಟರ್ ನಿಲ್ಲಿಸಿ ಅಚಾನಕ್ ನದಿಗೆ ಜಿಗಿದಿದ್ದಾರೆ. ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನರ್ಸ್ ನದಿಗೆ ಹಾರಿ ಆತ್ಮಹತ್ಯೆ Read More »

ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ತೊಡಿಕಾನ ದೇವಳಕ್ಕೆ 2100 ಕೆ.ಜಿ.ಅಕ್ಕಿ, 200ಕೆ.ಜಿ ಬೆಲ್ಲ ಕೊಡುಗೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಜಾತ್ರೋತ್ಸವದ ಸಮಾರಾಧನೆಗೆ ಏ.8ರಂದು ಶ್ರೀ ಹಿಮಕರ ಕಲ್ಲಗದ್ದೆ ಬೆಂಗಳೂರು ಇವರ ನೇತೃತ್ವದಲ್ಲಿ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ವಿದ್ಯಾರಣ್ಯಪುರ ಬೆಂಗಳೂರು ಇಲ್ಲಿಂದ ಸುಮಾರು 2100 ಕೆ.ಜಿ.ಅಕ್ಕಿ, 200ಕೆ.ಜಿ.ಬೆಲ್ಲವನ್ನು ಸಮರ್ಪಿಸಿದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀ ಸಂತೋಷ್ ಕುತ್ತಮೊಟ್ಟೆಯವರು ಶಾಲು ಹೊದಿಸಿ, ಶ್ರೀ ದೇವರ ಪ್ರಸಾದ ಕೊಡಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಯು.ಯಂ.ಕಿಶೋರ್ ಕುಮಾರ್, ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ನೌಕರರಾದ ಶ್ರೀ

ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ತೊಡಿಕಾನ ದೇವಳಕ್ಕೆ 2100 ಕೆ.ಜಿ.ಅಕ್ಕಿ, 200ಕೆ.ಜಿ ಬೆಲ್ಲ ಕೊಡುಗೆ Read More »

ಮಡಪ್ಪಾಡಿ : ಜೋಡು ಪಾಷಾಣಮೂರ್ತಿ ದೈವದ ಹರಕೆ ಕೋಲ

ಮಡಪ್ಪಾಡಿ ಪುಂಡರಿಕ ಗೌಡ ಅವರ ಮನೆಯಲ್ಲಿ ಏಪ್ರಿಲ್.5ರಂದು ಜೋಡು ಪಾಷಾಣ ಮೂರ್ತಿ ದೈವದ ಹರಕೆ ಕೊಲ ನಡೆಯಿತು.ಈ ಸಂದರ್ಭದಲ್ಲಿ ಕುಟುಂಬಸ್ಥರು ನೆಂಟರಿಷ್ಟರು,ಊರಿನವರು ಉಪಸ್ಥಿತರಿದ್ದರು.

ಮಡಪ್ಪಾಡಿ : ಜೋಡು ಪಾಷಾಣಮೂರ್ತಿ ದೈವದ ಹರಕೆ ಕೋಲ Read More »

ಅಜ್ಜಾವರ : ಇಂದು ಜಾತ್ರೋತ್ಸವ ಪ್ರಯುಕ್ತ ಯಕ್ಷಗಾನ ಬಯಲಾಟ

ಶ್ರೀ ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಕಾಲಾವಧಿ ಜಾತ್ರೋತ್ಸವ ಪ್ರಯುಕ್ತ ಎ.8 ರಂದು ರಾತ್ರಿ ಗಂಟೆ 8 ರಿಂದ “ತೊಡಓಲ್” ನಂತರ ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ಗಂಟೆ 8.30 ರಿಂದ ಶ್ರೀ ಭುವನೇಶ್ವರಿ ಯಕ್ಷಗಾನ ಕಲಾಮಂಡಳಿ ಸುಳ್ಯ ಇದರ ಹಿರಿಯ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಕದಂಬ ಕೌಶಿಕೆ ನಡೆಯಲಿದೆ.ನಾಳೆ ದಿನ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯಲಿದೆ.

ಅಜ್ಜಾವರ : ಇಂದು ಜಾತ್ರೋತ್ಸವ ಪ್ರಯುಕ್ತ ಯಕ್ಷಗಾನ ಬಯಲಾಟ Read More »

ಏ.9ಕ್ಕೆ ಪಿ.ಯು.ಸಿ ಫಲಿತಾಂಶ

ರಾಜ್ಯ ವಿಧಾನಸಭಾ ಉಪಚುನಾವಣೆಗಳ ನೀತಿಸಂಹಿತೆ ಹಾಗೂ ಕೊನೆ ಕ್ಷಣದಲ್ಲಿ ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಇಂದು(ಏ.07) ಪ್ರಕಟವಾಗಬೇಕಿದ್ದ ದ್ವಿತೀಯ ಪಿ.ಯು.ಸಿ ಪರೀಕ್ಷಾ ಫಲಿತಾಂಶವನ್ನು ಏಪ್ರಿಲ್ 09ರಂದು ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ ದ್ವಿತೀಯ ಪಿ.ಯು.ಸಿ ಫಲಿತಾಂಶವನ್ನು ಆನ್‌ಲೈನ್ ನಲ್ಲಿ ವೀಕ್ಷಿಸಲು ಅಧಿಕ್ರತ ವೆಬ್ ಸೈಟ್ karresults.nic.in ಭೇಟಿ ನೀಡಿ ಮುಖಪುಟದಲ್ಲಿರುವ ‘Karnataka 2nd PUC Result 2026’ ಲಿಂಕ್ ಕ್ಲಿಕ್ ಮಾಡಿ ರಿಜಿಸ್ಟ್ರೇಷನ್‌ ನಂಬ‌ರ್ ಹಾಗೂ ಜನ್ಮದಿನಾಂಕ ನಮೂದಿಸಿ ‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ

ಏ.9ಕ್ಕೆ ಪಿ.ಯು.ಸಿ ಫಲಿತಾಂಶ Read More »

48 ಗಂಟೆ ಎಚ್ಚರದಿಂದ ಇರಲು ಸೂಚನೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಭಾರತದ ರಾಯಭಾರ ಕಚೇರಿಯು 48 ಗಂಟೆಗಳ ಕಾಲ ಜಾಗರೂಕತೆಯಿಂದಿರಲು ಮತ್ತು ಮನೆಯಿಂದ ಹೊರಬರದಂತೆ ತುರ್ತು ಸೂಚನೆ ನೀಡಿದೆ.ಜೊತೆಗೆ ಭಾರತದ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿ ಇರುವಂತೆ ತಿಳಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇರಾನ್ ಮೇಲೆ ಶೀಘ್ರದಲ್ಲಿ ದಾಳಿ ನಡೆಸುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಈ ಮುನ್ನೆಚ್ಚರಿಕೆ ಸೂಚನೆಯನ್ನು ಅಲ್ಲಿನ ಭಾರತೀಯರಿಗೆ ನೀಡಲಾಗಿದೆ.

48 ಗಂಟೆ ಎಚ್ಚರದಿಂದ ಇರಲು ಸೂಚನೆ Read More »

error: Content is protected !!
Scroll to Top