April 2026

ಕಲ್ಚೆರ್ಪೆ :ಬಾವಿಗೆ ಬಿದ್ದ ಕಾಡಾನೆ

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಚೆರ್ಪೆಯಲ್ಲಿ ಕಾಡಾನೆಯೊಂದು ಏ.12ರಂದು ಬಾವಿಗೆ ಬಿದ್ದ ಘಟನೆ ವರದಿಯಾಗಿದೆ.ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿದ್ದು ಆನೆಯನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ‌.

ಕಲ್ಚೆರ್ಪೆ :ಬಾವಿಗೆ ಬಿದ್ದ ಕಾಡಾನೆ Read More »

ಮೂಡಬಿದಿರೆಯಲ್ಲಿ ಇಂದು ದಕ್ಷಿಣಕನ್ನಡ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ 2026, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ನ ಎರಡು ತಂಡಗಳು ಭಾಗಿ

ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೆಶನ್ (ರಿ) ಮಂಗಳೂರು ಮತ್ತು ಮೂಡಬಿದಿರೆ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ಇಂದು ಮೂಡಬಿದಿರೆ ಸ್ವರಾಜ್ ಮೈದಾನದಲ್ಲಿ ನಡೆಯಲಿರುವ ದ ಕ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ 2026 ಪಂದ್ಯಾವಳಿಗೆ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ (ರಿ) ಇದರ ಪುರುಷರ ಒಂದು ತಂಡ ಮತ್ತು ಮಹಿಳೆಯರ ಒಂದು ತಂಡ ಭಾಗವಹಿಸಲಿದ್ದು, ಎರಡೂ ತಂಡಗಳಿಗೆ ಇಂದು ಕಲರ್ಸ್ ಹಸ್ತಾಂತರ ಮತ್ತು ಬೀಳ್ಕೊಡುಗೆ ಕಾರ್ಯಕ್ರಮ ಸುಳ್ಯದ ಕೆವಿಜಿ ಸುಳ್ಯ ಹಬ್ಬ ಕಚೇರಿಯಲ್ಲಿ ನಡೆಯಿತು.ಸುಳ್ಯ

ಮೂಡಬಿದಿರೆಯಲ್ಲಿ ಇಂದು ದಕ್ಷಿಣಕನ್ನಡ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ 2026, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ನ ಎರಡು ತಂಡಗಳು ಭಾಗಿ Read More »

ಚಿನ್ನರ ಕಲರವ – ಸಮಾರೋಪ ಸಮಾರಂಭ

ಸುಳ್ಯ ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ನಡೆದ ಚಿನ್ನರ ಕಲರವ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಅತ್ಯಂತ ಸಂತೋಷ ಮತ್ತು ಸಂಭ್ರಮದೊಂದಿಗೆ ನೆರವೇರಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುಳ್ಯ ಬಿಇಒ ಶ್ರೀ ವೈ. ಎಸ್. ಹರಗಿ ಅವರು ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು.ಈ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತರಾದ ಮುಖ್ಯೋಪಾಧ್ಯಾಯರು ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶ್ರೀ ಶ್ರೀಧರ್ ಕೆರೆಮೂಲೆ ಅವರನ್ನು ಗೌರವಿಸಲಾಯಿತು. ಅವರ ಶಿಕ್ಷಣ ಕ್ಷೇತ್ರದ ಅಮೂಲ್ಯ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮವು ಪೂರ್ಣ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.

ಚಿನ್ನರ ಕಲರವ – ಸಮಾರೋಪ ಸಮಾರಂಭ Read More »

ಪಾತಿಮಾತ್ ಆಫೀಯಗೆ ದ್ವಿತೀಯ puc ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

ಕಡೆಪಾಲ ಕೆ.ಎಸ್ ಹನೀಫ್ ಮತ್ತು ಪೌಸಿಯ ದಂಪತಿ ಮಗಳಾದ ಪಾತಿಮಾತ್ ಆಫೀಯ ದ್ವಿತೀಯ puc ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 528 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ.ಇವರು ಸರಕಾರಿ pu ಕಾಲೇಜ್ ಕೂಡಿಗೆ ಕುಶಾಲನಗರದ ವಿದ್ಯಾರ್ಥಿನಿ.

ಪಾತಿಮಾತ್ ಆಫೀಯಗೆ ದ್ವಿತೀಯ puc ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ Read More »

ಬಳ್ಳಾರಿ ಜೈಲಿನಲ್ಲಿರುವ ಶಿಕ್ಷಾ ಬಂಧಿಯೋರ್ವ ಪಿ.ಯು.ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ!

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಳ್ಳಾರಿ ಜೈಲಿನಲ್ಲಿರುವ ಶಿಕ್ಷಾ ಬಂಧಿಯೋರ್ವ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದ ಘಟನೆ ವರದಿಯಾಗಿದೆ.ಜೀವಾವಧಿ ಶಿಕ್ಷೆಗೊಳಗಾಗಿರುವ ಅಶೋಕ್ ಕುಮಾರ್ ಎಂಬ ಶಿಕ್ಷಾ ಬಂಧಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು 600 ಅಂಕಗಳಿಗೆ 481 ಅಂಕಗಳನ್ನು ಪಡೆದು ಶೇಕಡಾ 81% ರಷ್ಟು ಫಲಿತಾಂಶದೊಂದಿಗೆ ಪಾಸಾಗಿದ್ದಾನೆ.ಜೈಲಿನಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದ ಬಂಧಿ ಅಶೋಕ್ ಕುಮಾರ್ ಕನ್ನಡದಲ್ಲಿ 82, ಇಂಗ್ಲಿಷ್ ನಲ್ಲಿ 69, ಇತಿಹಾಸದಲ್ಲಿ 94, ಅರ್ಥಶಾಸ್ತ್ರದಲ್ಲಿ 84, ಸಮಾಜಶಾಸ್ತ್ರದಲ್ಲಿ 77 ಮತ್ತು ರಾಜ್ಯಶಾಸ್ತ್ರದಲ್ಲಿ

ಬಳ್ಳಾರಿ ಜೈಲಿನಲ್ಲಿರುವ ಶಿಕ್ಷಾ ಬಂಧಿಯೋರ್ವ ಪಿ.ಯು.ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ! Read More »

ಕಾಂಗ್ರೆಸ್ ಮುಖಂಡ ಪಿ.ಎಸ್ ಗಂಗಾಧರ ಅವರ ತೋಟಕ್ಕೆ ಕಾಡಾನೆ ದಾಳಿ

ಉಬರಡ್ಕ ಮಿತ್ತೂರು ಗ್ರಾಮದ ಪಟ್ರಕೋಡಿ ಪಿ. ಎಸ್. ಗಂಗಾಧರರವರ ಕೃಷಿ ತೋಟಕ್ಕೆ ಎಪ್ರಿಲ್ 9 ರ ರಾತ್ರಿ ಒಂಟಿ ಆನೆ ದಾಳಿ ನಡಿಸಿ ಕೃಷಿ ನಾಶ ಮಾಡಿದೆ.ಅಡಿಕೆ ಮರ ಬಾಳೆ ಇತರ ಬೆಳೆಗಳನ್ನು ನಾಶ ಮಾಡಿರುತ್ತದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಮುಖಂಡ ಪಿ.ಎಸ್ ಗಂಗಾಧರ ಅವರ ತೋಟಕ್ಕೆ ಕಾಡಾನೆ ದಾಳಿ Read More »

ಕಿರ್ಲಾಯದಲ್ಲಿ ಒಂಟಿ ಸಲಗದಿಂದ ಅಪಾರ ಬೆಳೆ ನಾಶ

ಏ.9ರಂದು ರಾತ್ರಿ ಅರಂತೋಡು ಗ್ರಾಮದ ಕಿರ್ಲಾಯ ಅನಂತ ಕೃಷ್ಣನವರ ತೋಟಕ್ಕೆ ಒಂಟಿ ಆನೆ ಬಂದು ಸುಮಾರು 50ರಿಂದ 60 ನೇಂದ್ರ ಬಾಳೆ ಗಿಡಗಳನ್ನು ನಾಶ ಮಾಡಿರುತ್ತದೆ .ಕಾಡಾನೆಗಳು ಮತ್ತೆ ಬಲ್ನಾಡು ಹೊಳೆ ದಾಟಿ ಪೂಮಲೆ ಪರಿಸರದ ಕಳುಬೈಲು ಕಾಡಿಗೆ ಬಂದಿರುತ್ತದೆ ಎಂದು ಅವರು ಮಾಹಿತಿ ಲಭ್ಯವಾಗಿದೆ. ಆದುದರಿಂದ ಈ ಭಾಗದ ಜನರು ಇದರ ಬಗ್ಗೆ ಜಾಗೃತರಾಗಿರಲು ತಿಳಿಸಲಾಗಿದೆ.

ಕಿರ್ಲಾಯದಲ್ಲಿ ಒಂಟಿ ಸಲಗದಿಂದ ಅಪಾರ ಬೆಳೆ ನಾಶ Read More »

ನಾಳೆ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಕೊನೆಯ ಹಂತದ ತಯಾರಿಗಾಗಿ ಸಮಾಲೋಚನಾ ಸಭೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಏ.13ರಿಂದ ಏ.20ರ ತನಕ ನಡೆಯಲಿದ್ದು ಕೊನೆ ಹಂತದ ತಯಾರಿಗಾಗಿ ಸಮಾಲೋಚಿಸಲು‌ ನಾಳೆ ದಿನಾಂಕ 10-04-2026 ನೇ ಶುಕ್ರವಾರ ಪೂ 10:00ಕ್ಕೆ ವ್ಯವಸ್ಥಾಪನ ಸಮಿತಿ, ಜೀರ್ಣೋದ್ಧಾರ ಸಮಿತಿ ಮತ್ತು ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳ ತುರ್ತು ಸಭೆ ದೇವಳದ ಅಕ್ಷಯ ಮಂದಿರದಲ್ಲಿ ಕರೆಯಲಾಗಿದೆ.ಸಭೆಯಲ್ಲಿ ಎಲ್ಲರೂ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಕೊಳಲುಮೂಲೆ,ಹಾಗೂ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.

ನಾಳೆ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಕೊನೆಯ ಹಂತದ ತಯಾರಿಗಾಗಿ ಸಮಾಲೋಚನಾ ಸಭೆ Read More »

ಚೈತನ್ಯ ಎಂ.ಎಸ್ 563 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕೊಕ್ಕಡದ ಸೈಂಟ್ ಫ್ರಾನ್ಸಿಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚೈತನ್ಯ ಎಂ.ಎಸ್ 563 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಇವರು ಕೊಕ್ಕಡದ ಶೇಖರ್ ಗೌಡ ಹಾಗೂ ಸುಜಾತ ದಂಪತಿಯ ಪುತ್ರಿ.

ಚೈತನ್ಯ ಎಂ.ಎಸ್ 563 ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ Read More »

ದ್ವಿತೀಯ ಪಿಯುಸಿ ಫಲಿತಾಂಶ : ಉಡುಪಿ ಜಿಲ್ಲೆಗೆ ಮೊದಲ ಸ್ಥಾನ, ದ.ಕ ಜಿಲ್ಲೆ ದ್ವಿತೀಯ

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಂಜೆ ಸುದ್ದಿಗೋಷ್ಠಿ ನಡೆಸಿ ಜಿಲ್ಲಾವಾರು ಫಲಿತಾಂಶದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಾರಿ ಶೇ.86.48ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇನ್ನು ಈ ಬಾರಿಯೂ ಕೂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಪ್ರಥಮ, ಯಾದಗಿರಿ ಕೊನೆ ಸ್ಥಾನದಲ್ಲಿದೆ. ಶೇ. 96.39 ಫಲಿತಾಂಶ ಪಡೆದು

ದ್ವಿತೀಯ ಪಿಯುಸಿ ಫಲಿತಾಂಶ : ಉಡುಪಿ ಜಿಲ್ಲೆಗೆ ಮೊದಲ ಸ್ಥಾನ, ದ.ಕ ಜಿಲ್ಲೆ ದ್ವಿತೀಯ Read More »

error: Content is protected !!
Scroll to Top