ಅರಂತೋಡು ಮಸೀದಿಯಲ್ಲಿ ವಿಜೃಂಭಣೆಯಿಂದ ನಡೆದ ವಾರ್ಷಿಕ ದಿಕ್ರ್ ಸ್ವಲಾತ್ ಮಜಲಿಸ್ ಹಾಗೂ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ ಅವರ ಅನುಸ್ಮರಣೆ
ಬದ್ರಿಯಾ ಜುಮಾ ಮಸೀದಿ ಅರಂತೋಡು ಇದರ ಆಶ್ರಯದಲ್ಲಿ 22ನೇ ವಾರ್ಷಿಕ ದಿಕ್ರ್ ಸ್ವಲಾತ್ ಮಜಲಿಸ್ ಮತ್ತು ಮರ್‌ಹೂಮ್ ಡಾ ಕೆ.ಎಂ ಶಾಹ್ ಮುಸ್ಲಿಯಾರ್ ಅವರ 7ನೇ ವರ್ಷದ ಅನುಸ್ಮರಣೆಯು ವಿಜೃಂಭಣೆಯಿಂದ ಎ.30ರಂದು ನಡೆಯಿತು. ದಿಕ್ರ್ ಸ್ವಲಾತ್‌ನ ನೇತೃತ್ವವನ್ನು ಅಸೈಯದ್ ಅಲ್ ಹಾಜ್ ಎನ್ ಪಿ ಯಂ ಝೈನುಲ್ ಆಬಿದ್ದೀನ್ ತಂಙಳ್ ವಹಿಸಿ ದುವಾಃ ಆರ್ಶೀವಚನ ಮಾಡಿದರು. ಅರಂತೋಡು ಬದ್ರಿಯಾ ಜುಮಾ ಮಸೀದಿ ಖತೀಬರಾದ ಆಸೀಫ್ ಆಝ್‌ಹರಿ ಸಮಾರಂಭವನ್ನು ಉದ್ಘಾಟಿಸಿದರು. ಪೇರಡ್ಕ ಮುಹೀದ್ಧೀನ್ ಜಮಾ ಮಸೀದಿ ಖತೀಬರಾದ ಅಹಮ್ಮದ್ […]


