May 2026

ಪಿ.ಬಿ ದಿವಾಕರ ರೈಯವರ ಪತ್ನಿ ವಿದ್ಯಾ ಡಿ.ರೈ ನಿಧನ

ದ.ಕ ಜಿಲ್ಲೆಯ ಹಿರಿಯ ಸಹಕಾರಿ ದುರೀಣ ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸುಳ್ಯ ಸೀಮೆ ತೊಡಿಕಾನ‌ ಶ್ರೀ ಮಲ್ಲಿಕಾರ್ಜುನ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪಿ.ಬಿ.ದಿವಾಕರ ರೈಯವರ ಧರ್ಮಪತ್ನಿ ವಿದ್ಯಾ ಡಿ.ರೈ (55 ವರ್ಷ ) ಅವರು ಮೇ 5ರಂದು ಮಂಗಳೂರಿನ ಖಾಸಗಿ ಆಸ್ಪತ್ರಯಲ್ಲಿ ನಿಧನರಾದರು. ಮ್ರತರು ಪತಿ,ಮಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪಿ.ಬಿ ದಿವಾಕರ ರೈಯವರ ಪತ್ನಿ ವಿದ್ಯಾ ಡಿ.ರೈ ನಿಧನ Read More »

ಚೆಸ್ಕಾಂ ನ ಪ್ರಭಾರ ಸಹಾಯಕ ಇಂಜಿನಿಯರ್ ಪ್ರವೀಣ್ ಕುಮಾರ್ ಪಾನತ್ತಿಲ ನಿಧನ

ಚೆಸ್ಕಾಂ ನ ಮಡಿಕೇರಿ ಶಾಖೆಯಲ್ಲಿ ಪ್ರಭಾರ ಸಹಾಯಕ ಎಂಜಿನಿಯರ್ ಆಗಿದ್ದ ಅರಂತೋಡು ಗ್ರಾಮದ ಬೆದ್ರುಪಣೆ ಪ್ರವೀಣ್ ಕುಮಾ‌ರ್ ಪಾನತ್ತಿಲ ಇಂದು ಮುಂಜಾನೆ (ಮೇ.5)ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ತಾಯಿ ಪೂವಮ್ಮ,, ಪತ್ನಿ ರೇಖಾ, ಪುತ್ರ ಮೌರ್ಯ, ಸಹೋದರಿ ಪ್ರಮೀಳ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.ಮೃತರು ಸ್ಪಂದನ ಗೆಳೆಯರ ಬಳಗ ರಿ ಅಡ್ತಲೆ ಇದರ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದರು

ಚೆಸ್ಕಾಂ ನ ಪ್ರಭಾರ ಸಹಾಯಕ ಇಂಜಿನಿಯರ್ ಪ್ರವೀಣ್ ಕುಮಾರ್ ಪಾನತ್ತಿಲ ನಿಧನ Read More »

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು : ಸುಳ್ಯದಲ್ಲಿ ಬಿಜೆಪಿಯಿಂದ ಸಿಹಿತಿಂಡಿ ಹಂಚಿ ಸಂಭ್ರಮಾಚರಣೆ

ಪಂಚರಾಜ್ಯ ರಾಜ್ಯ ಚುನಾವಣೆಯ ಮೂರು ರಾಜ್ಯಗಳ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಸುಳ್ಯ ಬಿಜೆಪಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ವಿಜಯೋತ್ಸವ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಬಿಜೆಪಿ ಮುಖಂಡ ರಾಕೇಶ್ ರೈ ಕೆಡೆಂಜಿ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾ ಮೇದಪ್ಪ,ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ. ಸುಳ್ಯ ಸಿ‌.ಎ ವಿಕ್ರಂ ಅಡ್ಪಂಗಾಯ,

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು : ಸುಳ್ಯದಲ್ಲಿ ಬಿಜೆಪಿಯಿಂದ ಸಿಹಿತಿಂಡಿ ಹಂಚಿ ಸಂಭ್ರಮಾಚರಣೆ Read More »

ಪ್ರತಿ ಮನೆಯಲ್ಲಿ ಭಜನೆಯ ನಾದ ಮೊಳಗಬೇಕು : ಮಾಧವ ಗೌಡ

ಭಜನೆಯ ಮೂಲಕ ಭಗವಂತನ ನಾಮಸ್ಮರಣೆ ಮಾಡುವುದಿಂದ ಮನಸ್ಸಿಗೆ ಶ್ರೇಷ್ಠ ಸುಖ ಸಿಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸುಳ್ಯ ಯೋಜನಾ ಕಚೇರಿಯ ಯೋಜನಾಧಿಕಾರಿ ಮಾಧವ ಗೌಡ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ ,ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್,ಸುಳ್ಯ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರದ ಉದ್ಘಾಟನಾ

ಪ್ರತಿ ಮನೆಯಲ್ಲಿ ಭಜನೆಯ ನಾದ ಮೊಳಗಬೇಕು : ಮಾಧವ ಗೌಡ Read More »

ಸೋಣಂಗೇರಿ ಭಜನಾ ಮಂದಿರಕ್ಕೆ ಚಿತ್ರನಟ ಟೆನ್ನಿಸ್ ಕೃಷ್ಣ ಭೇಟಿ

ಜಾಲ್ಸೂರು ಗ್ರಾಮದ ಸೋಣಂಗೇರಿ ಭಜನಾ ಮಂದಿರಕ್ಕೆ ಚಿತ್ರನಟ ಟೆನ್ನಿಸ್ ಕೃಷ್ಣ ಭೇಟಿ ನೀಡಿದರು.ಮಂದಿರವು ಚೆನ್ನಾಗಿ ಅಭಿವೃದ್ಧಿಯಾಗುತ್ತಿದ್ದು ಅದರ ಮೂಲಕ ಗ್ರಾಮದಲ್ಲಿ ಒಗ್ಗಟ್ಟಿನ ಭಾವನೆ ಮೂಡುತ್ತಿದೆ.ಭಜನಾ ಮಂದಿರಗಳು ಸಾಮಾನ್ಯವಾಗಿ ಭಕ್ತಿಗೆ ಮಾತ್ರ ಸೀಮಿತವಾಗದೆ, ಸಮಾಜದ ಜನರನ್ನು ಒಟ್ಟುಗೂಡಿಸುವ ಕೇಂದ್ರವಾಗುತ್ತವೆ. ಇಲ್ಲಿ ನಡೆಯುವ ಭಜನೆ, ಪೂಜೆ, ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಶಾಂತಿ ಮತ್ತು ಒಗ್ಗಟ್ಟನ್ನು ಹೆಚ್ಚಿಸುತ್ತವೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಪ್ರೇರಣೆಯಾಗಲಿದೆ ಎಂದು ಶುಭ ಹಾರೈಸಿದರು.ಈ ಸಂದರ್ಭ ಭಜನಾ ಮಂದಿರದ

ಸೋಣಂಗೇರಿ ಭಜನಾ ಮಂದಿರಕ್ಕೆ ಚಿತ್ರನಟ ಟೆನ್ನಿಸ್ ಕೃಷ್ಣ ಭೇಟಿ Read More »

ಜೇಸಿಐ ಸುಳ್ಯ ಪಯಸ್ವಿನಿ ಘಟಕ ವತಿಯಿಂದ ವಿಶ್ವ ಕಾರ್ಮಿಕ ದಿನ ಆಚರಣೆ 

ಜೇಸಿಐ ಸುಳ್ಯ ಪಯಸ್ವಿನಿವತಿಯಿಂದ  ವಿಶ್ವ ಕಾರ್ಮಿಕ ದಿನಾಚರಣೆ    ಕಾರ್ಯಕ್ರಮವನ್ನು  ಮೇ 2ರಂದು   ಸಂಚಯ ನಿವಾಸ ಚೂಂತಾರು ಇಲ್ಲಿ ಆಚರಿಸಲಾಯಿತು. ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಜೇಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ  ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾರ್ಮಿಕ ದಿನದ ಪ್ರಯುಕ್ತ ಶ್ರಮಿಕ ವರ್ಗದ ಜನರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಎಲೇಕ್ಟ್ರಿಷನ್ ಆಗಿ ಗುರುತಿಸಿ ಕೊಂಡಿರುವ ಶ್ರೀ. ಹರಿಶ್ಚಂದ್ರ ತಂಟೆಪ್ಪಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ. ವಸಂತ ಶೆಟ್ಟಿ ಬೆಳ್ಳಾರೆ, ಅಧ್ಯಕ್ಷರು ದೆಹಲಿ ತುಳು ಸಿರಿ,

ಜೇಸಿಐ ಸುಳ್ಯ ಪಯಸ್ವಿನಿ ಘಟಕ ವತಿಯಿಂದ ವಿಶ್ವ ಕಾರ್ಮಿಕ ದಿನ ಆಚರಣೆ  Read More »

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಡಾ. ರೇಣುಕಾ ಪ್ರಸಾದ್ ರಿಂದ ಧನಸಹಾಯ ಹಸ್ತಾಂತರ

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕಾಗಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಹಾಗೂ ಎ.ಒ.ಎಲ್.ಇ.ಬಿ ಕಮಿಟಿಯ ಚೆರ್ಮೆನ್ ಡಾ. ರೇಣುಕಾ ಪ್ರಸಾದ್ ಕುರುಂಜಿ ಅವರು ನೀಡಿದ ಧನಸಹಾಯದ ಚೆಕ್ ನ್ನು ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆಯವರು ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡರಿಗೆ ಮೇ. 2 ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎ. ಒ. ಎಲ್. ಇ. ಬಿ ಕಮಿಟಿ ಯ ಉದ್ಯೋಗಿಗಳಾದ ಪ್ರಸನ್ನ ಕಲ್ಲಾಜೆ, ಪದ್ಮನಾಭ ಕಾನಾವುಜಾಲು, ಪ್ರಮುಖರಾದ ಸುಪ್ರೀತ್ ಮೋoಟಡ್ಕ, ಸತ್ಯಶಾಂತಿ ತ್ಯಾಗಮೂರ್ತಿ

ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಡಾ. ರೇಣುಕಾ ಪ್ರಸಾದ್ ರಿಂದ ಧನಸಹಾಯ ಹಸ್ತಾಂತರ Read More »

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮ

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಮೇ. 2ರಂದು ಪೂರ್ವಹ್ನ 8 ರಿಂದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ 12 ಕಾಯಿ ಗಣಪತಿ ಹವನ,ಆಶ್ಲೇಷಾಬಲಿ, ಶತರುದ್ರಾಭಿಷೇಕ, ಕಲಶಅಭಿಷೇಕ ಹಾಗೂ ಪರಿವಾರ ದೈವಗಳಿಗೆ ಹಾಗೂ ನಾಗದೇವರಿಗೆ ಕಲಶ ಅಭಿಷೇಕ,ತಂಬಿಲ ಸೇವೆಗಳು ನಡೆಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರು.ಸದಸ್ಯರಾದ ಸಂತೋಷ ಕುಮಾರ್ ರೈ, ಧರ್ಮಣ್ಣ ನಾಯ್ಕ ಗರಡಿ,ಮಾಯಿಲಪ್ಪ, ಎಣ್ಮೂರು,ಧರ್ಮಪಾಲ ಮರಕಡ,ಪವಿತ್ರ ,ಮಾಲೆಟ್ಟಿ, ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮ Read More »

ಶ್ರದ್ಧಾ ಭಕ್ತಿಯಿಂದ ನಡೆದ ಅಡ್ತಲೆ ಕುಟುಂಬಸ್ಥರ ಧರ್ಮ ನಡಾವಳಿ

ಅರಂತೋಡು ಗ್ರಾಮದ ಅಡ್ತಲೆ ಕುಟುಂಬಸ್ಥರ ಆದಿಮನೆಯಲ್ಲಿ ಧರ್ಮ ನಡಾವಳಿ ಏ.30 ಮತ್ತು ಮೇ.1ರಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.ಏ.3೦ನೇ ಗುರುವಾರ ಪೂರ್ವಾಹ್ನ ಗಂಟೆ 10-೦೦ರಿಂದಶ್ರೀ ವೆಂಕಟ್ರಮಣ ದೇವರ ಹರಿಸೇವೆ ನಡೆಯಿತು.ಸಂಜೆ ಗಂಟೆ 6-00ಕ್ಕೆಶ್ರೀ ದೈವಗಳ ಭಂಡಾರ ತೆಗೆಯಲಾಯಿತು‌. ರಾತ್ರಿ ಗಂಟೆ 8-00ರ ನಂತರ ಉಪದೈವಗಳ ನೇಮ ನಡೆಯಿತು. ಮೇ 1ನೇ ಶುಕ್ರವಾರ ಶ್ರೀ ಧರ್ಮದೈವದ ನಡಾವಳಿ ಮತ್ತು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆರಾತ್ರಿ ಗಂಟೆ 6-00ರಿಂದ ಉಪದೈವಗಳ ನೇಮೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗಿರೀಶ್ ಹೆಚ್,ಕುಟುಂಬದ ಹಿರಿಯರಾದ ಹೊನ್ನಪ್ಪ

ಶ್ರದ್ಧಾ ಭಕ್ತಿಯಿಂದ ನಡೆದ ಅಡ್ತಲೆ ಕುಟುಂಬಸ್ಥರ ಧರ್ಮ ನಡಾವಳಿ Read More »

ನಾಳೆ ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮ

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಮೇ. 2ರಂದು ಪೂರ್ವಹ್ನ 8 ರಿಂದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ 12 ಕಾಯಿ ಗಣಪತಿ ಹವನ,ಆಶ್ಲೇಷಾಬಲಿ, ಶತರುದ್ರಾಭಿಷೇಕ, ಕಲಶಅಭಿಷೇಕ ಹಾಗೂ ಪರಿವಾರ ದೈವಗಳಿಗೆ ಹಾಗೂ ನಾಗದೇವರಿಗೆ ಕಲಶ ಅಭಿಷೇಕ,ತಂಬಿಲ ಸೇವೆಗಳು ನಡೆಯಲಿದೆ .ಎಲ್ಲಾ ಭಕ್ತಭಿಮಾನಿಗಳು ಆಗಮಿಸಿ ಪ್ರಸಾದ ಸ್ವೀಕರಿಸ ಬೇಕಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರು ವಿನಂತಿಸಿಕೊಂಡಿದ್ದಾರೆ.

ನಾಳೆ ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ವಿವಿಧ ವೈಧಿಕ ಕಾರ್ಯಕ್ರಮ Read More »

error: Content is protected !!
Scroll to Top