May 2026

ಪಂಜ : ಗರಡಿ ಬೈಲ್ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಸ್ಥಾನ ದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ವಿವಿಧ ವೈದಿಕ ಕಾರ್ಯಕ್ರಮಗಳು

ಪಂಜ ಸೀಮಾ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಗರಡಿ ಬೈಲ್ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಸ್ಥಾನ ದಲ್ಲಿ ಕಳೆದ ತಿಂಗಳು ನಡೆದ ಸ್ವರ್ಣ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ದಿನಾಂಕ 15-5-26 ಶುಕ್ರವಾರ ಬೆಳಗ್ಗೆ 8.30ಕ್ಕೆ ದೇಗುಲದ ಎದುರು ಇರುವ ಚಾವಡಿಯಿಂದ ಶ್ರೀ ಉಳ್ಳಾಕ್ಳು ದೈವ ಹಾಗೂ ಶ್ರೀ ಕಾಚು ಕುಜುಂಬ ದೈವಗಳ ಭoಡಾರಗಳನ್ನು ಗರಡಿ ಬೈಲ್ ದೈವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆಗೊಂಡು ಹೋಗಿ ಅಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಸ್ವಸ್ತಿ ಪುಣ್ಯಾಹ […]

ಪಂಜ : ಗರಡಿ ಬೈಲ್ ಶ್ರೀ ಉಳ್ಳಾಕ್ಳು, ಶ್ರೀ ಕಾಚು ಕುಜುಂಬ ದೈವಸ್ಥಾನ ದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ವಿವಿಧ ವೈದಿಕ ಕಾರ್ಯಕ್ರಮಗಳು Read More »

ಪೆರಾಜೆ : ಸ್ಕೂಟಿ ಕಾರು ಅಪಘಾದಲ್ಲಿ ಸ್ಕೂಟಿ ಸವಾರ ಗಂಭೀರ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪೆರಾಜೆ ಸಮೀಪ ಕಾರು ಮತ್ತು ಸ್ಕೂಟಿ ನಡುವೆ ಅಪಘಾತವಾಗಿ ಸ್ಕೂಟಿ ಸವಾರನಿಗೆ ಗಂಭೀರ ಗಾಯವಾದ ಘಟನೆ ಮೇ 15ರಂದು ವರದಿಯಾಗಿದೆ.ಗಾಯಗೊಂಡ ವ್ಯಕ್ತಿಯ ಸ್ಥಳೀಯ ಬಿಳಿಯಾರು ನಿವಾಸಿಯಾಗಿದ್ದು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ತಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆಯೊಯ್ಯಲಾಗಿದೆ ಎಂದು ತಿಳಿದುಬಂದಿದೆ.ಮಂಡ್ಯ ಮೂಲದವರ ಕಾರು ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಪೆರಾಜೆ : ಸ್ಕೂಟಿ ಕಾರು ಅಪಘಾದಲ್ಲಿ ಸ್ಕೂಟಿ ಸವಾರ ಗಂಭೀರ Read More »

ಮೇ.17ಕ್ಕೆ ಅರಮನೆಗಯ ನೂತನ ಸೇತುವೆ ಉದ್ಘಾಟನೆ

ಬಹು ವರ್ಷಗಳ ಬೇಡಿಕೆಯಾದ ಅರಂತೋಡು ಸಮೀಪದಅರಮನೆಗಯ ಬಲ್ನಾಡ್ ಹೊಳೆಗೆ ಶಾಸಕರ ಅನುಮೋದನೆಯಿಂದ ರಾಜ್ಯ ಸರ್ಕಾರದ ವಿಪತ್ತು ಸಂಚಯನ ನಿಧಿಯಿಂದ (SDMF) ಅನುದಾನದಿಂದ ನಿರ್ಮಾಣವಾದ ನೂತನ ಸೇತುವೆಯ ಉದ್ಘಾಟನಾ ಕಾರ್ಯಕ್ರಮ ಮೇ.17ರಂದು ನಡೆಯಲಿದೆ ಎಂದು ಅರಂತೋಡು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೇಶವ ಅಡ್ತಲೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸುಳ್ಯ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದಕು. ಭಾಗೀರಥಿ ಮುರುಳ್ಯ ಅವರು ಸೇತುವೆಯನ್ನು ಉದ್ಘಾಟಿಸಲಿದ್ದು ಈ ಕಾರ್ಯಕ್ರಮದಲ್ಲಿ ವಿವಿಧ ಪಕ್ಷ ದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಮೇ.17ಕ್ಕೆ ಅರಮನೆಗಯ ನೂತನ ಸೇತುವೆ ಉದ್ಘಾಟನೆ Read More »

ಜೇಸಿಐ ಸುಳ್ಯ ಪಯಸ್ವಿನಿ – ಜೇನು ಕೃಷಿ ತರಬೇತಿ ಕಾರ್ಯಗಾರ

ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘ (ನಿ.) ಪುತ್ತೂರು ಇವರ ಸಹಭಾಗಿತ್ವದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕ ವತಿಯಿಂದ ಜೇನು ಕೃಷಿ ತರಬೇತಿ ಕಾರ್ಯಗಾರ ಮೇ.14ರಂದು ಸುಳ್ಯದ ಬಂಗ್ಲೆಗುಡ್ಡೆಯಲ್ಲಿರುವ ಆಧುನಿಕ ಜೇನು ಸಂಸ್ಕರಣಾ ಘಟಕದಲ್ಲಿ ನಡೆಯಿತು. ಮಂಗಳೂರು ನಬಾರ್ಡ್ ನ ತರಬೇತಿ ಸಂಸ್ಥೆಯಾದ ಬಿ.ಐ.ಆರ್.ಡಿ ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಯೋಗೀಶ್ ಕಾರ್ಯಗಾರ ನಡೆಸಿಕೊಟ್ಟರು.ಜೇನು ಸೊಸೈಟಿಯ ಅಧ್ಯಕ್ಷರಾದ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ರವರು ಜೇನು ಸಾಕಾಣಿಕೆ ವಿಧಾನ, ಸಂಗ್ರಹಣೆ, ಆದಾಯ ಗಳಿಕೆಯ ಅವಕಾಶಗಳು, ಗ್ರಾಮೀಣಾಭಿವೃದ್ಧಿ

ಜೇಸಿಐ ಸುಳ್ಯ ಪಯಸ್ವಿನಿ – ಜೇನು ಕೃಷಿ ತರಬೇತಿ ಕಾರ್ಯಗಾರ Read More »

ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ

ಬೆಂಗಳೂರು: ದೇಶಾದ್ಯಂತ ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ದರ ಪರಿಷ್ಕರಣೆ ಮಾಡಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 3 ರೊ. ಹೆಚ್ಚಿಸಿರುವುದು ಶುಕ್ರವಾರ ಬೆಳಗ್ಗಿನಿಂದಲೇ ಅನ್ವಯವಾಗಿದೆ. ದೇಶದೆಲ್ಲೆಡೆ ಬೆಳಗ್ಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಅನ್ವಯವಾಗಿದ್ದು ಬಂಕ್ ಗಳಿಗೆ ಬಂದ ವಾಹನ ಸವಾರರಿಗೆ ಶಾಕ್ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.77 . 97.77 ರೂ.ಗೆ ಏರಿಕೆಯಾಗಿದೆ. ಕೈಗಾರಿಕಾ ಮೂಲಗಳ ಪ್ರಕಾರ, ಡೀಸೆಲ್ ಬೆಲೆ 89.67 . 90.67 ರೂ.ಗೆ ಏರಿಕೆಯಾಗಿದೆ.

ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ Read More »

ಜೀವನದ ಸಂಸ್ಕಾರಕ್ಕೆ ದೊಡ್ಡ ಕೊಡುಗೆ ಶ್ರೀ ಕ್ಷೇತ್ರ ಧರ್ಮಸ್ಥಳ ; ಶ್ರೀ ಕೇಶವ ಪ್ರಸಾದ್ ಮುಳಿಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ವಲಯ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಜಾಲ್ಸೂರು ವಲಯ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಅಡ್ಕಾರು ದೇವಾಲಯ ಸಂವರ್ಧನಾ ಸಮಿತಿ, ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಡ್ಕಾರು ನಲ್ಲಿ ದಿನಾಂಕ 14.05.2026ರಂದು ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್

ಜೀವನದ ಸಂಸ್ಕಾರಕ್ಕೆ ದೊಡ್ಡ ಕೊಡುಗೆ ಶ್ರೀ ಕ್ಷೇತ್ರ ಧರ್ಮಸ್ಥಳ ; ಶ್ರೀ ಕೇಶವ ಪ್ರಸಾದ್ ಮುಳಿಯ Read More »

ಮೇ.23ರಂದು ಗೌಡರ ಯುವ ಸೇವಾ ಸಂಘದಿಂದ ಸತ್ಯನಾರಾಯಣ ಪೂಜೆ ಸಹಿತ ವಿವಿಧ ಕಾರ್ಯಕ್ರಮ – ಪೂರ್ವಭಾವಿ ಸಭೆ

ಗೌಡ ಯುವ ಸೇವಾ ಸಂಘ ವತಿಯಿಂದ ಗೌಡ ಸಮುದಾಯಭವನ ನಲ್ಲಿ ಮೇ.23ರ ಶನಿವಾರ ನಡೆಯಲಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಇಂದು ವೆಂಕಟರಮಣ ಸೊಸೈಟಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯುಸಂಘದ ಅಧ್ಯಕ್ಷರಾದ ಪಿ. ಎಸ್. ಗಂಗಾಧರ್ ಅವರ ನೇತೃತ್ವದಲ್ಲಿ ನಡೆಯಿತು. ಶ್ರೀ ಲಕ್ಷ್ಮೀಸಹಿತ ಸತ್ಯನಾರಾಯಣ ದೇವರ ಪೂಜೆ, ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಕುಟುಂಬದವರಿಂದ ಕೊಡುಗೆಯಾಗಿ ನೀಡಲಾದ ವಧು-ವರರ ನವೀಕೃತ ಗೃಹಪ್ರವೇಶ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಪಿ.ಸಿ. ಜಯರಾಮರಿಗೆ ಸನ್ಮಾನ, 50 ವರ್ಷದ

ಮೇ.23ರಂದು ಗೌಡರ ಯುವ ಸೇವಾ ಸಂಘದಿಂದ ಸತ್ಯನಾರಾಯಣ ಪೂಜೆ ಸಹಿತ ವಿವಿಧ ಕಾರ್ಯಕ್ರಮ – ಪೂರ್ವಭಾವಿ ಸಭೆ Read More »

ಗೌಡರ ಯುವ ಸೇವಾ ಸಂಘದ ಮಾಧ್ಯಮ ಸಂಯೋಜಕರಾಗಿ ಸುಪ್ರೀತ್ ಮೋಂಟಡ್ಕ ಆಯ್ಕೆ

ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಮಾಧ್ಯಮ ಸಂಯೋಜಕರಾಗಿ ಸುಪ್ರೀತ್ ಮೋoಟಡ್ಕರವರನ್ನು ಆಯ್ಕೆ‌ಮಾಡಲಾಗಿದೆ. ಮೇ 14ರಂದು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್ ಇವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾಧ್ಯಮ ಸಂಯೋಜಕರ ಆಯ್ಕೆ ಮಾಡಲಾಗಿದೆ.ಸುಪ್ರೀತ್ ಮೋಂಟಡ್ಕ ಅವರು ಚಿತ್ರರಂಗ,ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಗೌಡರ ಯುವ ಸೇವಾ ಸಂಘದ ಮಾಧ್ಯಮ ಸಂಯೋಜಕರಾಗಿ ಸುಪ್ರೀತ್ ಮೋಂಟಡ್ಕ ಆಯ್ಕೆ Read More »

ಮನುಷ್ಯರು ಪರೋಪಕಾರಿಯಾಗಿ ಬಾಳಬೇಕು : ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು

ಮನುಷ್ಯರು ಪರೋಪಕಾರಿಯಾಗಿ ಬಾಳಬೇಕು,ಹಿಂದು ಧರ್ಮ ಅತ್ಯಂತ ಶ್ರೇಷ್ಠ ಅದನ್ನು ಆಚರಣೆ ಮಾಡಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದುಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು ಹೇಳಿದರು.ಅಜ್ಜಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಸುಮಾರು74 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಾತಾ ಸಭಾಭವನದ ಲೋಕಾರ್ಪಣೆ ಸಮಾರಂಭದಲ್ಲಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಾಚನ ಮಾಡಿದರು.ಈ ಸಂದರ್ಭದಲ್ಲಿ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಕು.ಭಾಗೀರಥಿ ಮುರುಳ್ಯ, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾ‌ರ್ ಪಂಜ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರಿ ಉಮಾದೇವಿ

ಮನುಷ್ಯರು ಪರೋಪಕಾರಿಯಾಗಿ ಬಾಳಬೇಕು : ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು Read More »

ಮೇನಾಲ : ರಾಜಕೀಯ ಧುರೀಣ ನವೀನ್ ರೈ ಸ್ಮರಣಾರ್ಥ ಬಸ್ಸು ತಂಗುದಾಣ ಉದ್ಘಾಟನೆ

ರಾಜಕೀಯ ಧುರೀಣ, ಪಕ್ಷದ ಕಾರ್ಯಕರ್ತ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿ.ನವೀನ್ ರೈ ಮೇನಾಲ ಅವರ ಸ್ಮರಣಾರ್ಥ ಅವರ ಅಭಿಮಾನಿಗಳು ನಿರ್ಮಿಸಿದ ಪ್ರಯಾಣಿಕರ ಬಸ್ಸು ತಂಗುದಾಣವನ್ನು ಮೇ 14ರಂದು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಕ್ಯಾ ಬ್ರಿಜೇಶ್ ಚೌಟ, ಸುಳ್ಯ ಭಾಜಪಾ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪಕ್ಷದ ಹಿರಿಯರು,ಪ್ರಮುಖ ಕಾರ್ಯಕರ್ತರು,ನವೀನ್ ರೈ ಅವರ ಕುಟುಂಬದ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.

ಮೇನಾಲ : ರಾಜಕೀಯ ಧುರೀಣ ನವೀನ್ ರೈ ಸ್ಮರಣಾರ್ಥ ಬಸ್ಸು ತಂಗುದಾಣ ಉದ್ಘಾಟನೆ Read More »

error: Content is protected !!
Scroll to Top