ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಸುಳ್ಯ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ವಲಯ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಜಾಲ್ಸೂರು ವಲಯ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಅಡ್ಕಾರು ದೇವಾಲಯ ಸಂವರ್ಧನಾ ಸಮಿತಿ, ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಡ್ಕಾರು ನಲ್ಲಿ ದಿನಾಂಕ 14.05.2026ರಂದು ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಅಧ್ಯಕ್ಷರಾದ ಶ್ರೀ ಸೋಮಶೇಖರ ಪೈಕ ಅವರು ಉದ್ಘಾಟಿಸಿ, ಮಕ್ಕಳಿಗೆ ಭಜನಾ ತರಬೇತಿ ಮತ್ತು ಸಂಸ್ಕಾರದ ಬಗ್ಗೆ ತಾಲೂಕಿನಲ್ಲಿ ಉತ್ತಮ ಮಾಹಿತಿ ಮಾರ್ಗದರ್ಶನ ನೀಡಲಾಗುತ್ತಿದೆ. ಈ ತರಬೇತಿಯ ಪ್ರಯೋಜನವನ್ನು ಎಲ್ಲಾ ಮಕ್ಕಳು ಪಡೆಯುವಂತಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಕೂಡ್ತುಗುಳಿ ನಿರ್ದೇಶಕರು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ವಲಯ ವಹಿಸಿದ್ದರು. ಮುಖ್ಯ ಅತಿಥಿಗಳಾದ ಯೋಜನಾಧಿಕಾರಿ ಮಾಧವ ಗೌಡರವರು : ಕಾರ್ತಿಕೇಯ ಸಭಾಭವನ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮೇ 14ರಿಂದ 20 ರ ತನಕ ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ, ಹಾಗೂ ಮಾತಾ-ಪಿತರ ಪಾದಪೂಜೆ ಕಾರ್ಯಕ್ರಮ ನಡೆಯಲಿದ್ದು. ಮಕ್ಕಳಿಗೆ ಭಜನಾ ತರಬೇತಿಯನ್ನು ನೀಡಿ. ಉತ್ತಮ ಸಂಸ್ಕಾರ ನೀಡುವ ಪ್ರೇರಣೆಯನ್ನು ಪೋಷಕರು ಮಾಡಬೇಕು ಹಾಗೂ 91 ಮಕ್ಕಳನ್ನು ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರಕ್ಕೆ ನೋಂದಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾದ ಕೇಶವ ಪ್ರಸಾದ್ ಮುಳಿಯ ಪ್ರಮುಖ್ ದೇವಾಲಯ ಸಂವರ್ಧನಾ ಸಮಿತಿ ಮಂಗಳೂರು ವಿಭಾಗ ಸನಾತನ ಧರ್ಮ ನಾಶ ಹೊಂದದಂತೆ ನಮ್ಮ ಧರ್ಮವನ್ನು ರಕ್ಷಿಸುವ ಅನಿವಾರ್ಯತೆ ಇದೆ, ಜೀವನದ ಸಂಸ್ಕಾರಕ್ಕೆ ದೊಡ್ಡ ಕೊಡುಗೆ ಶ್ರೀ ಕ್ಷೇತ್ರ ಧರ್ಮಸ್ಥಳ ನೀಡಿದೆ ಎಂಬ ಮಾತುಗಳನ್ನು ನುಡಿದರು.
ಶ್ರೀ ವೆಂಕಪ್ಪ ಗೌಡ, ಅಧ್ಯಕರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ತಾಲೂಕು, ಭಗವಂತನನ್ನು ಒಳಿಸಿಕೊಳ್ಳಲು ಎಲ್ಲರಿಗೂ ಮಂತ್ರ ಶ್ಲೋಕಗಳಿಂದ ಸಾಧ್ಯವಿಲ್ಲ ಭಜನೆಯಿಂದ ಭಗವಂತನವನ್ನು ಒಳಿಸಿಕೊಳ್ಳಲು ಸುಲಭ ಮಾರ್ಗ ಎಂದು ತಿಳಿಸಿದರು ಮುಖ್ಯ ಅತಿಥಿಗಳಾಗಿ ಹರಿಪ್ರಕಾಶ್ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಡ್ಕರ್, ಶಿವರಾಮ್ ರೈ ಅಧ್ಯಕ್ಷರು ಶ್ರೀ ಪ್ರಸನ್ನಾoಜನೇಯ ಸ್ವಾಮಿ ಗುಳಿಗರಾಜ ಕ್ಷೇತ್ರ ಅಂಜನಾದ್ರಿ ಅಡ್ಕರ್,ಶ್ರೀ ಗುರುರಾಜ್ ಮೊಕ್ತೇಸರರು ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಡ್ಕರ್, ಭಾಸ್ಕರ್ ಅಡ್ಕರ್, ವಲಯಾಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಾಲ್ಸುರ್, ಈಶ್ವರ ಕೊರಂಭಡ್ಕ ಅಧ್ಯಕ್ಷರು ಆತ್ಮರಾಮ ಭಜನಾ ಮಂಡಳಿ ಕನಕಮಜಲು. ಚಂದ್ರಶೇಖರ್ ಬೆಳ್ಳಿ ಪಾಡಿ ಅಧ್ಯಕ್ಷರು ಶ್ರೀ ಶಾರದಾಂಭಾ ಭಜನಾ ಮಂದಿರ ಬೆಳ್ಳಿ ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ವಲಯ ಮೇಲ್ವಿಚಾರಕರಾದ ಶ್ರೀಮತಿ ಜಯಶ್ರೀ ಸ್ವಾಗತಿಸಿದರು.ಜನಜಾಗೃತಿ ವೇದಿಕೆ ವಲಯಾಧ್ಯಕ್ಷರು ಭಾಸ್ಕರ್ ಅಡ್ಕಾರು ವಂದಿಸಿದರು. ಪೈಲಾರು ಸೇವಾಪ್ರತಿನಿಧಿ ಚಂದ್ರಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು .
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಪದಾಧಿಕಾರಿಗಳು, ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಅಡ್ಕರ್ ವ್ಯವಸ್ಥಾಪನ ಸಮಿತಿಯ ಸದಸ್ಯರು, ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಜೀವನದ ಸಂಸ್ಕಾರಕ್ಕೆ ದೊಡ್ಡ ಕೊಡುಗೆ ಶ್ರೀ ಕ್ಷೇತ್ರ ಧರ್ಮಸ್ಥಳ ; ಶ್ರೀ ಕೇಶವ ಪ್ರಸಾದ್ ಮುಳಿಯ





















































