ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘ (ನಿ.) ಪುತ್ತೂರು ಇವರ ಸಹಭಾಗಿತ್ವದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕ ವತಿಯಿಂದ ಜೇನು ಕೃಷಿ ತರಬೇತಿ ಕಾರ್ಯಗಾರ ಮೇ.14ರಂದು ಸುಳ್ಯದ ಬಂಗ್ಲೆಗುಡ್ಡೆಯಲ್ಲಿರುವ ಆಧುನಿಕ ಜೇನು ಸಂಸ್ಕರಣಾ ಘಟಕದಲ್ಲಿ ನಡೆಯಿತು. ಮಂಗಳೂರು ನಬಾರ್ಡ್ ನ ತರಬೇತಿ ಸಂಸ್ಥೆಯಾದ ಬಿ.ಐ.ಆರ್.ಡಿ ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಯೋಗೀಶ್ ಕಾರ್ಯಗಾರ ನಡೆಸಿಕೊಟ್ಟರು.ಜೇನು ಸೊಸೈಟಿಯ ಅಧ್ಯಕ್ಷರಾದ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ರವರು ಜೇನು ಸಾಕಾಣಿಕೆ ವಿಧಾನ, ಸಂಗ್ರಹಣೆ, ಆದಾಯ ಗಳಿಕೆಯ ಅವಕಾಶಗಳು, ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಕೃಷಿಯಲ್ಲಿ ಜೇನು ಸಾಕಾಣಿಕೆಯ ಪಾತ್ರ ಹಾಗೂ ಸಂಸ್ಕರಣಾ ಘಟಕದಲ್ಲಿ ಉತ್ಪಾದನೆಯಾಗುವ ವಿವಿಧ ಜೇನು ಉತ್ಪನ್ನಗಳ ಬಗ್ಗೆ ಪೂರ್ಣ ಮಾಹಿತಿ ನೀಡಿದರು.ವೇದಿಕೆಯಲ್ಲಿ
ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಜೆ.ಎಪ್.ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ,
ನಬಾರ್ಡ್ ನ ಮುಂಬಾಯಿ ಬ್ರಾಂಚ್ ನ ಜನರಲ್ ಮ್ಯಾನೇಜರ್ ರಾಜರಾಂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೇನು ಸೊಸೈಟಿ ಸಿಬ್ಬಂದಿಗಳು ಪೂರ್ಣ ಪ್ರಮಾಣದ ಸಹಕಾರವನ್ನು ನೀಡಿದರು.
ಜೇಸಿ. ಪ್ರಶಾಂತ್ ಅಂಬೆಕಲ್ಲು ಹಾಗೂ ಜೇಸಿ. ಸತ್ಯ ಶಾಂತಿ ತ್ಯಾಗ ಮೂರ್ತಿ ಸಹಕರಿಸಿದರು ಸುಮಾರು 30 ಮಂದಿ ತರಬೇತಿಯಲ್ಲಿ ಭಾಗವಹಿಸಿದರು ಈ ಸಂದರ್ಭದಲ್ಲಿ ಜೇನು ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು
ಜೇಸಿಐ ಸುಳ್ಯ ಪಯಸ್ವಿನಿ – ಜೇನು ಕೃಷಿ ತರಬೇತಿ ಕಾರ್ಯಗಾರ





















































