July 2026

ಕಾಂತಮಂಗಲದ ಯುವಕ ಮೈಸೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವು

ಮೈಸೂರಿನಲ್ಲಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ಅಜ್ಜಾವರ ಗ್ರಾಮದ ಕಾಂತಮಂಗಲದ ಯುವಜನೋರ್ವ ಮ್ರತಪಟ್ಟ ಘಟನೆ ವರದಿಯಾಗಿದೆ.ಮ್ರತಪಟ್ಟ ಯುವಕನನ್ನು ನಿಕೇಶ್ ಎಂದು ಗುರುತಿಸಲಾಗಿದೆ.ಜು.24ರಂದು ಮೈಸೂರಿನಲ್ಲಿ ಬೈಕ್ ಅಪಘಾತಕ್ಕೊಳಗಾಗಿದ್ದು ಗಂಭೀರ ಗಾಯಗೊಂಡ ನಿಕೇಶ್ ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಜು.26ರಂದು ಮುಂಜಾನೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ನಿಕೇಶ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಕಾಂತಮಂಗಲದ ಮನೆಗೆ ಬರುತ್ತಿರುವ ವೇಳೆ ಈ ಘಟನೆ ನಡೆದಿದೆ‌ಮೃತರು ತಂದೆ ಜಗದೀಶ್, ತಾಯಿ ಉಷಾ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕಾಂತಮಂಗಲದ ಯುವಕ ಮೈಸೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವು Read More »

ಉಬರಡ್ಕ ಗ್ರಾಮದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ

ಸುಳ್ಯ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಉಬರಡ್ಕ ಗ್ರಾಮದಲ್ಲಿ ಕ್ರಷಿಕರ ತೋಟಗಳಿಗೆ ಜು.25ರಂದು ರಾತ್ರಿ ಕಾಡಾನೆಗಳು ದಾಳಿ ಮಾಡಿ ಬೆಳೆ ನಾಶ ಮಾಡಿದ ಘಟನೆ ವರದಿಯಾಗಿದೆ.ಇಲ್ಲಿಯ ಪದ್ಮಯ್ಯ ನಾರ್ಕೋಡು ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ ಅಡಿಕೆ ಗಿಡಗಳನ್ನು ನಾಶ ಮಾಡಿವೆ.ಅಲ್ಲದೆ ಪಕ್ಕದ ರೈತರ ತೋಟಗಳಿಗೂ ಕಾಡಾನೆಗಳು‌ ನುಗ್ಗಿ ಕ್ರಷಿ ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉಬರಡ್ಕ ಗ್ರಾಮದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ Read More »

ಸಂಪಾಜೆ : ಆಸ್ಪತ್ರೆ ಬಳಿಯ ಆವರಣ ಗೋಡೆ ಕುಸಿತ

ಸಂಪಾಜೆ ಗ್ರಾಮದ ಆಸ್ಪತ್ರೆ ಬಳಿಯ ಕಂಪೌಂಡ್ ಮಳೆಯಿಂದ ಕುಸಿದು ಹಾನಿಯಾಗಿದೆ. ಇದರ ಬಳಿ ಇರುವ ವಿದ್ಯುತ್ ಕಂಬ ಬೀಳುವ ಸಾಧ್ಯತೆ ಇದ್ದು, ಇದನ್ನು ಕೂಡಲೇ ಸರಿ ಪಡಿಸದೆ ಇದ್ದರೆ ಅಪಾಯ ಸಂಭವಿಸಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಂಪಾಜೆ : ಆಸ್ಪತ್ರೆ ಬಳಿಯ ಆವರಣ ಗೋಡೆ ಕುಸಿತ Read More »

ಬಿಎಂಎಸ್ ಕುಕ್ಕುಜಡ್ಕ ಘಟಕ ದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ  ಆಯ್ಕೆ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ )ಬಿಎಂಎಸ್ ಸಂಯೋಜಿತ ಸುಳ್ಯ ದ.ಕ ಇದರ ಕುಕ್ಕುಜಡ್ಕ ಘಟಕ, ಶ್ರೀ ಮಹಾವಿಷ್ಣು ಆಟೋ ಚಾಲಕರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಜು.25 ರಂದು ಗ್ರಾಮ ಪಂಚಾಯತ್ ಸಬಾಭವನ ಕುಕ್ಕುಜಡ್ಕದಲ್ಲಿ ನಡೆಯಿತು  ಕಾರ್ಯಕ್ರಮಕ್ಕೆ ಸುರೇಶ್ ಪದವು ಚಾಲನ ನೀಡಿದರು.   ಸತೀಶ್ ಪಿಲಿಕಜೆ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಪ್ರಕಾಶ್ ಯಂ ಎಸ್ ಅಧ್ಯಕ್ಷರು ಬಿಎಂಎಸ್ ಸುಳ್ಯ,ನಾರಾಯಣ ಎಸ್ ಎಂ ಪ್ರಧಾನ ಕಾರ್ಯದರ್ಶಿ ಗಳು ಬಿಎಂಎಸ್ ಸುಳ್ಯ,ರವಿ

ಬಿಎಂಎಸ್ ಕುಕ್ಕುಜಡ್ಕ ಘಟಕ ದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ  ಆಯ್ಕೆ Read More »

ಜು-26- ಮಂಗಳೂರಿನ ಕದ್ರಿಯಲ್ಲಿ ಎಂ.ಎ.ಮುಸ್ತಫಾ ಬೆಳ್ಳಾರೆ ಚುಟುಕು ವಾಚನ

ರಾಷ್ಟ್ರೀಯ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಬೆಂಗಳೂರು ಇದರ ಸಹಕಾರದೊಂದಿಗೆ ಮಂಗಳೂರಿನ ಕದ್ರಿ ಬಾಲಭವನದಲ್ಲಿ ಸಂಸ್ಕೃತಿ ಸಂಭ್ರಮವು ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜು 26 ರಂದು ಜರುಗಲಿದೆ.ಚುಟುಕು ಕವಿಗೋಷ್ಠಿಯಲ್ಲಿ ಯುವಕವಿ‌ ಎಂ.ಎ.ಮುಸ್ತಫಾ ಬೆಳ್ಳಾರೆ ಸ್ವರಚಿತ 2 ಚುಟುಕುಗಳನ್ನು ವಾಚಿಸಲಿದ್ದಾರೆ.ಇವರು ಮಂಗಳೂರು ಮಹಾನಗರದಲ್ಲಿ ಎಂಟನೇ ಬಾರಿಗೆ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಜು-26- ಮಂಗಳೂರಿನ ಕದ್ರಿಯಲ್ಲಿ ಎಂ.ಎ.ಮುಸ್ತಫಾ ಬೆಳ್ಳಾರೆ ಚುಟುಕು ವಾಚನ Read More »

ಮಿಸ್ ಪೈರ್ ಮಗು ಗಂಭೀರ

ಕೂಲಿ‌ ವಿಚಾರವಾಗಿ ಕಾರ್ಮಿಕರನ್ನು ಹೆದರಿಸಲು ಜಮೀನಿನ ಮಾಲೀಕ ಹಾರಿಸಿದ ಗುಂಡು ,ಮಗುವಿನ ತಲೆಗೆ ತಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ನಡೆದಿದೆ.ಜಗದೀಶ್ ಗೌಡ ಗುಂಡು ಹಾರಿಸಿದ ತೋಟದ ಮಾಲೀಕನಾಗಿದ್ದು ಗೌಡನ ಮನೆಗೆ ಅಸ್ಸಾಂ ಕಾರ್ಮಿಕರು ಕೆಲಸಕ್ಕೆ ಬಂದಿದ್ದರು. ಕಾರ್ಮಿಕರು 400 ರೂ. ಕೂಲಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು‌. ಆದರೆ ಜಗದೀಶ್ ಗೌಡ ಈಗ 350 ರೂ. ಕೊಡ್ತೀನಿ, ಉಳಿದದ್ದು 50 ರೂ. ಆಮೇಲೆ ಕೊಡ್ತೀನಿ ಎಂದು ತಿಳಿಸಿದ್ದ. ಇದೇ ವಿಚಾರಕ್ಕೆ

ಮಿಸ್ ಪೈರ್ ಮಗು ಗಂಭೀರ Read More »

ಮಂಗಳೂರಿನಲ್ಲಿ ತಲವಾರು ದಾಳಿ,ಗಂಭೀರ

ಮಂಗಳೂರು ವಿಕ್ಕಿ ಬಪ್ಪಲ್ ಎನ್ನುವ ರೌಡಿ ಶೀಟರ್ ಮೇಲೆಮಾರಕಾಸ್ತ್ರದಿಂದ ದಾಳಿ ನಡೆಸಿರುವ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ ಜು.25ರಂದು ನಡೆದಿದೆ.ಇಂದು ಮಧ್ಯಾಹ್ನ 1:45ರ ಸುಮಾರಿಗೆ ಈ ಘಟನೆ ನಡೆದಿದ್ದುತಲವಾರಿನಿಂದ ದಾಳಿ ಮಾಡಲಾಗಿದೆ.ವಿಕ್ಕಿ ಬಪ್ಪಲ್ ಮಾದಕ ವಸ್ತು ಮಾರಾಟದ ಕಾರಣಕ್ಕೆ ಪೊಲೀಸರು ಅವನನ್ನು ಹಿಂಬಾಲಿಸುತ್ತಿದ್ದರೆನ್ನಲಾಗಿದೆ.ವಿಕ್ಕಿ ಬಪ್ಪಲ್ ಬೈಕಿನಲ್ಲಿ ಹೋಗುತ್ತಿದ್ದಾಗ ವೇಳೆ ಬೇರೊಂದು ಬೈಕಿನಲ್ಲಿ ಆತನನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿ ತಲವಾರಿನಿಂದ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಂಗಳೂರಿನಲ್ಲಿ ತಲವಾರು ದಾಳಿ,ಗಂಭೀರ Read More »

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ

ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಕಾರಣ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜು.25ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಆರಂಭವಾದ ಅಭಿಯಾನದಲ್ಲಿ ಪ್ರಧಾನ್ ಅವರ ರಾಜೀನಾಮೆ ನೀಡಬೇಕೆಂಬ ಕೂಗು ಪ್ರಬಲವಾಗಿ ಕೇಳಿ ಬಂದಿತ್ತು.ಈ ಪರಿಸ್ಥಿತಿಯ ಲಾಭವನ್ನು ಜಂತ‌ರ್ ಮಂತ‌ರ್ ಹಾಗೂ ದೇಶದಾದ್ಯಂತ ಇರುವ ರಾಷ್ಟ್ರವಿರೋಧಿ ಶಕ್ತಿಗಳು ಪಡೆಯದಂತೆ ನೋಡಿಕೊಳ್ಳಲು, ದೇಶದ ಏಕತೆ ಕಾಪಾಡಲು, ಭಾರತದ ವಿದ್ಯಾರ್ಥಿಗಳು ಕಾನೂನು ತೊಡಕುಗಳಲ್ಲಿ ಸಿಲುಕದೆ ತಮ್ಮ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ Read More »

ಸಭೆಯಲ್ಲಿ ಮಾತನಾಡುತ್ತಿದ್ದಾಗ ಕುಸಿದು ಬಿದ್ದು ಸಾವು

ಚೆಂಬು ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಗೂ ಸಂಪಾಜೆ ಪಯಸ್ವಿನಿ ಪ್ರಾ.ಕೃ.ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಆದಂ ಕುಂಞ(62) ಸಂಟ್ಯಾರ್‌ರವರು ಹೃದಯಾಘಾತದಿಂದ ಜು.25ರಂದು ನಿಧನರಾದರು. ಸಂಪಾಜೆಯಲ್ಲಿ ಪಯಸ್ವಿನಿ ಸಹಕಾರಿ ಬ್ಯಾಂಕ್‌ನ ಮಹಾಸಭೆ ನಡೆಯುತ್ತಿತ್ತು. ಅವರು ಮಹಾಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಅವರಿಗೆ ಹೃದಯಾಘಾತವಾಗಿ ಕುಸಿದು ಕುಳಿತರೆನ್ನಲಾಗಿದೆ. ತಕ್ಷಣವೇ ಅವರನ್ನು ಕಾರಲ್ಲಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.

ಸಭೆಯಲ್ಲಿ ಮಾತನಾಡುತ್ತಿದ್ದಾಗ ಕುಸಿದು ಬಿದ್ದು ಸಾವು Read More »

ಕುಡಿತದ ಮತ್ತಿನಲ್ಲಿ ರಸ್ತೆ ಬದಿ ಅಪಘಾತ ತಪ್ಪಿಸಲು ಇರಿಸಿದ್ದ ಕನ್ನಡಿ ಕಳವು ಮಾಡಿ ಸಿ.ಸಿ ಕೆಮಾರದ ಮೂಲಕ‌ ಸಿಕ್ಕಿ ಬಿದ್ದ ಯುವಕರು

ಸಂಪಾಜೆ ಗ್ರಾಮದ ಚಡಾವಿನಲ್ಲಿ ಹೆದ್ದಾರಿ ಬಳಿ ಅಪಘಾತ ತಪ್ಪಿಸಲು ಇಟ್ಟಿರುವ ಕನ್ನಡಿ ಯನ್ನು ತಡರಾತ್ರಿ ಇಬ್ಬರು ಯುವಕರು ಕಾರಲ್ಲಿ ಬಂದು ಕಳವು ಮಾಡಿ ತಿಳಿದ ಪೊಲೀಸರು ಸಿಸಿ ಟಿವಿ ದೃಶ್ಯ ಆಧರಿಸಿ ಕಳ್ಳರನ್ನು ಪತ್ತೆ ಹಚ್ಚಿದ ಘಟನೆ ವರದಿಯಾಗಿದೆ.ಕಳ್ಳತನ ಮಾಡಿದವರು ಪುತ್ತೂರು ಮೂಲದ ಶ್ರೇಯಸ್ ಕುಮಾ‌ರ್ ಮತ್ತು ಪ್ರೀತಮ್ ರೈ.ಕುಡಿದ ಅಮಲಿನಲ್ಲಿ ಈ ಕೃತ್ಯ ಮಾಡಿದ್ದಾರೆ ಎಂದು ಪೊಲೀಸ್‌ ತನಿಖೆಯ ವೇಳೆ ಅವರು ಬಾಯಿ ಬಿಟ್ಟಿದ್ದಾರೆ.ಇವರಿಬ್ಬರು ಪುತ್ತೂರಿನಿಂದ ಮಡಿಕೇರಿ ಕಡೆಗೆ ಸುತ್ತಾಡಲು ಕಾರಿನಲ್ಲಿ ಹೋಗುತ್ತಿದ್ದಾಗ ರಾತ್ರಿ ಸಮಯ

ಕುಡಿತದ ಮತ್ತಿನಲ್ಲಿ ರಸ್ತೆ ಬದಿ ಅಪಘಾತ ತಪ್ಪಿಸಲು ಇರಿಸಿದ್ದ ಕನ್ನಡಿ ಕಳವು ಮಾಡಿ ಸಿ.ಸಿ ಕೆಮಾರದ ಮೂಲಕ‌ ಸಿಕ್ಕಿ ಬಿದ್ದ ಯುವಕರು Read More »

error: Content is protected !!
Scroll to Top