July 2026

ಭಾರತದ ಜಂದು ಕುಮಾರ್‌ಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತನ್ನ ಖಾತೆ ತೆರೆದಿದೆ. ಪೋಲಿಯೊ ಪೀಡಿತ ಝಂದು ಕುಮಾರ್ (28) ಅವರು ಪುರುಷರ ಹೆವಿವೇಯ್ಡ್ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಶುಕ್ರವಾರ (ಜುಲೈ 24) ಆರಂಭವಾದ ಕೂಟದಲ್ಲಿ 181 ಕೆ.ಜಿ ಮತ್ತು 190 ಕೆ.ಜಿ ತೂಕವನ್ನು ಯಶಸ್ವಿಯಾಗಿ ಎತ್ತಿದ ಅವರು, 196 ಕೆ.ಜಿ ಎತ್ತುವಲ್ಲಿ ವಿಫಲರಾದರು. ಒಟ್ಟು 130.9 ಪಾಯಿಂಟ್‌ಗಳೊಂದಿಗೆ 3ನೇ ಸ್ಥಾನ ಪಡೆದು, ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಪ್ಯಾರಾ ಪವರ್‌ಲಿಪ್ಟರ್‌ ಅಶೋಕ್‌ ಮಲಿಕ್ ಅವರು 4ನೇ ಸ್ಥಾನ ಪಡೆಯುವ […]

ಭಾರತದ ಜಂದು ಕುಮಾರ್‌ಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ Read More »

ತೆಂಗಿನ ಕಾಯಿ ಕಳ್ಳಿ ಎಂದು ಆರೋಪಿಸಿ,ಮಹಿಳೆಯ ಮೇಲೆ ಭೀಕರ ಹಲ್ಲೆ

ತೆಂಗಿನಕಾಯಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಗಂಡಸರು ಮಹಿಳೆಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಕಡೂರು ತಾಲೂಕಿನ ಯಗಟಿ ಸಮೀಪದ ಪಾತೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪಾತೇನಹಳ್ಳಿ ಗ್ರಾಮದ ಶಿವಮ್ಮ (32) ಎಂಬುವರು ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡ ಮಹಿಳೆಯಾಗಿದ್ದಾರೆ‌.ಅವರನ್ನು ತಕ್ಷಣವೇ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಶಿವಮ್ಮ ಅವರು ಗ್ರಾಮದ ಪಾಳುಬಿದ್ದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದರು. ಬಳಿಕ ತೋಟದ ಮಾರ್ಗವಾಗಿ ಬೇರೆ ಜಾಗಕ್ಕೆ ತೆರಳುತ್ತಿದ್ದಾಗ, ಕೈಯಲ್ಲಿದ್ದ ತೆಂಗಿನಕಾಯಿಯನ್ನು ಕಂಡ ತೋಟದ ಮಾಲೀಕ ನವೀನ್ ಎಂಬಾತ

ತೆಂಗಿನ ಕಾಯಿ ಕಳ್ಳಿ ಎಂದು ಆರೋಪಿಸಿ,ಮಹಿಳೆಯ ಮೇಲೆ ಭೀಕರ ಹಲ್ಲೆ Read More »

SIR ಕರ್ತವ್ಯದಲ್ಲಿದ್ದ ಶಿಕ್ಷಕಿ ಹೃದಯಾಘಾತದಿಂದ ಸಾವು

ಬೆಂಗಳೂರಿನ ಕುರುಬರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಶಮಂತಾ ಕುಮಾರಿ (44) SIR ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇತ್ತೀಚೆಗೆ ಬಿಎಲ್‌ಒ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಇವರಿಗೆ ಶುಗ‌ರ್, ಬಿಪಿ ಹೆಚ್ಚಾಗಿ ತೀವ್ರ ಜ್ವರ ಬಂದಿತ್ತು. ಗುರುವಾರ (ಜು.23) ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೇಲಾಧಿಕಾರಿಗಳು ಎಸ್‌ಐಆ‌ರ್ ಪ್ರಕ್ರಿಯೆ ಬೇಗ ಮುಗಿಸುವಂತೆ ಒತ್ತಡ ಹಾಕುತ್ತಿದ್ದರು ಮತ್ತು ಈ ಕೆಲಸದಿಂದ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರು. ಮೇಲಾಧಿಕಾರಿಗಳ ಒತ್ತಡದಿಂದ ಹೃದಯಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಶಿಕ್ಷಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ.ಒಂದು ಕಡೆ ಶಿಕ್ಷಕರು SIR ಪ್ರಕಿಯೆಯಲ್ಲಿ ತೊಡಗಿಸಿಕೊಂಡಿರುವ ಹಿನ್ನಲೆಯಲ್ಲಿ

SIR ಕರ್ತವ್ಯದಲ್ಲಿದ್ದ ಶಿಕ್ಷಕಿ ಹೃದಯಾಘಾತದಿಂದ ಸಾವು Read More »

ಭಾರೀ ಮಳೆ ಹಿನ್ನಲೆ,ನಾಳೆ ಶಾಲಾ ಕಾಲೇಜುಗಳಿಗೆ ರಜೆ

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ,ಶಾಲೆಗಳು,ಪದವಿ ಪೂರ್ವ ಕಾಲೇಜು,ಐಟಿಐ,ಡಿಪ್ಲೋಮ ಕಾಲೇಜುಗಳಿಗೆ ಜು.25ರಂದು ದ.ಕ ಜಿಲ್ಲಾಧಿಕಾರಿಯವರು ರಜೆ ಘೋಷಣೆ ಮಾಡಿ ಆದೇಶ ಮಾಡಿದ್ದಾರೆ.

ಭಾರೀ ಮಳೆ ಹಿನ್ನಲೆ,ನಾಳೆ ಶಾಲಾ ಕಾಲೇಜುಗಳಿಗೆ ರಜೆ Read More »

ನೀಟ್ ಅಕ್ರಮ: ಎನ್‌ಟಿಎಯ 47 ಅಧಿಕಾರಿಗಳ ವಜಾ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಮತ್ತು ತೀವ್ರ ಸಾರ್ವಜನಿಕ ಆಕ್ರೋಶದ ಬೆನ್ನಲ್ಲೇ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (NTA) ಅತಿದೊಡ್ಡ ಸಾಂಸ್ಥಿಕ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸ್ಥೆಯ 47 ಸಿಬ್ಬಂದಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ದೇಶದ 15-20 ಪ್ರಮುಖ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು ನಡೆಸುವ ಎನ್‌ಟಿಎ, ತನ್ನ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಮುಂದಿನ ಒಂದು ತಿಂಗಳಿನಲ್ಲಿ ಸಮಗ್ರ ವೈಫಲ್ಯ ತಡೆ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜನೆ ರೂಪಿಸಿದೆ.

ನೀಟ್ ಅಕ್ರಮ: ಎನ್‌ಟಿಎಯ 47 ಅಧಿಕಾರಿಗಳ ವಜಾ Read More »

ನೀಟ್ ಪರೀಕ್ಷೆಯ ಹೊಣೆಗಾರರಾದ ಸಚಿವ ಧರ್ಮೆಂದ್ರ ಸಿಂಗ್ ಪ್ರದಾನ್ ತಕ್ಷಣ ರಾಜೀನಾಮೆ ನೀಡಲಿ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಒತ್ತಾಯ

2026ರ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನೇರವಾಗಿ ಗುಂಡಿಗೆ ಹಾಕಿದ ಕ್ರಿಮಿನಲ್ ಕೃತ್ಯವಾಗಿದೆ. ಈ ಭಾರೀ ದಂಧೆಗೆ ಸರ್ಕಾರ ಮತ್ತು ಪರೀಕ್ಷಾ ವ್ಯವಸ್ಥೆ ನಡೆಸಿದ ನಿರ್ಲಕ್ಷ್ಯವಾಗಿದೆ. ನೀಟ್ ಪರೀಕ್ಷೆಯ ಹೊಣೆಗಾರರಾದ ಸಚಿವ ಧರ್ಮೆಂದ್ರ ಸಿಂಗ್ ಪ್ರದಾನ್ ತಕ್ಷಣ ರಾಜೀನಾಮೆ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಘಟಕ ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಅಧ್ಯಕ್ಷ ವೇಣು ಗೋಪಾಲ ಒತ್ತಾಯಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವರ್ಷಪೂರ್ತಿ ಚಡಪಡಿಸಿ ಓದಿ, ಕುಟುಂಬದ

ನೀಟ್ ಪರೀಕ್ಷೆಯ ಹೊಣೆಗಾರರಾದ ಸಚಿವ ಧರ್ಮೆಂದ್ರ ಸಿಂಗ್ ಪ್ರದಾನ್ ತಕ್ಷಣ ರಾಜೀನಾಮೆ ನೀಡಲಿ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಒತ್ತಾಯ Read More »

ಮುಖ್ಯ ಮಂತ್ರಿ ಡಿ.ಕೆ.ಶಿಯವರನ್ನು ಭೇಟಿಯಾಗಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ

ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಡಿ.ಕೆ ಶಿವಕುಮಾರ್ ಅವರನ್ನು ಜುಲೈ 23ರಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯವಿಧಾನಸೌಧದಲ್ಲಿ ಭೇಟಿಯಾಗಿ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಅನುದಾನವನ್ನು ಬಿಡುಗಡೆಗೊಳಿಸುವಂತೆ ಮನವಿಮಾಡಿದರು.

ಮುಖ್ಯ ಮಂತ್ರಿ ಡಿ.ಕೆ.ಶಿಯವರನ್ನು ಭೇಟಿಯಾಗಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ Read More »

ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳ ನೇಮಕ

ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳನ್ನು ನೇಮಕ ಮಾಡಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ(ಗ್ರಾಮಾಂತರ) ಇದರ ಅಧ್ಯಕ್ಷರಾದ ಹೆಚ್. ಮಹಮ್ಮದ್ ಆಲಿಯವರು ಆದೇಶ ಮಾಡಿದ್ದಾರೆ.ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಅಬ್ದುಲ್ ಗಪೂರ್ ಕಲ್ಮಡ್ಕರವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಈಗಾಗಲೇ ನೇಮಕ ಮಾಡಿದ್ದು, ಉಪಾಧ್ಯಕ್ಷರುಗಳನ್ನಾಗಿ ಪರಶುರಾಮ ಚಿಲ್ತಡ್ಕ, ಕರುಣಾಕರ ಅಡ್ಡಂಗಾಯ, ಖಜಾಂಜಿಯಾಗಿ ರಜಿತ್ ಕೆ ಭಟ್ ಪಂಜಬೀಡು, ಬ್ಲಾಕ್ ಸಂಯೋಜಕರುಗಳಾಗಿ ಮುಸ್ತಫಾ ಬೆಳ್ಳಾರೆ, ಪರಮೇಶ್ವರ ಕೆಂಬಾರೆ, ಅಬೂಸಾಲಿ ಗೂನಡ್ಕ, ರಾಧೇಶ್ ಕೆಮ್ಮಿಂಜೆ,

ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳ ನೇಮಕ Read More »

ಭಾರೀ ಮಳೆ ಹಿನ್ನಲೆ ದ.ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ,ಶಾಲೆಗಳು,ಪದವಿ ಪೂರ್ವ ಕಾಲೇಜು,ಐಟಿಐ,ಡಿಪ್ಲೋಮ ಕಾಲೇಜುಗಳಿಗೆ ಜು.24ರಂದು ದ.ಕ ಜಿಲ್ಲಾಧಿಕಾರಿಯವರು ರಜೆ ಘೋಷಣೆ ಮಾಡಿ ಆದೇಶ ಮಾಡಿದ್ದಾರೆ.

ಭಾರೀ ಮಳೆ ಹಿನ್ನಲೆ ದ.ಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ Read More »

ಜಂತ‌ರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ ಕಾಂಗ್ರೆಸ್ ನಾಯಕರನ್ನು ಬಂಧಿಸಿರುವುದು ಖಂಡನೀಯ

ನೀಟ್ ಪರೀಕ್ಷೆಯಲ್ಲಿ ಉಂಟಾಗಿರುವ ಅಕ್ರಮದ ಕುರಿತು ದೆಹಲಿಯ ಜಂತ‌ರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ,ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ಗಣ್ಯರುಗಳನ್ನು ಕೇಂದ್ರ ಬಿಜೆಪಿ ಸರ್ಕಾರವು ಬಂಧಿಸಿ ಅವಮಾನಕಾರಿಯಾಗಿ ನಡೆದುಕೊಂಡಿರುವುದನ್ನು ಸಂಪಾಜೆ ವಲಯ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಕೆ.ಪಿ. ಜಾನಿಯವರು ತಿಳಿಸಿದ್ದಾರೆ.ಜು 22 ರಂದು ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು ‘ಕೇಂದ್ರ ಬಿಜೆಪಿ ಸರಕಾರದವರು ಮಾಡುತ್ತಿರುವ ಅನ್ಯಾಯವನ್ನು

ಜಂತ‌ರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ ಕಾಂಗ್ರೆಸ್ ನಾಯಕರನ್ನು ಬಂಧಿಸಿರುವುದು ಖಂಡನೀಯ Read More »

error: Content is protected !!
Scroll to Top