ಸುಳ್ಯ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಉಬರಡ್ಕ ಗ್ರಾಮದಲ್ಲಿ ಕ್ರಷಿಕರ ತೋಟಗಳಿಗೆ ಜು.25ರಂದು ರಾತ್ರಿ ಕಾಡಾನೆಗಳು ದಾಳಿ ಮಾಡಿ ಬೆಳೆ ನಾಶ ಮಾಡಿದ ಘಟನೆ ವರದಿಯಾಗಿದೆ.
ಇಲ್ಲಿಯ ಪದ್ಮಯ್ಯ ನಾರ್ಕೋಡು ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ ಅಡಿಕೆ ಗಿಡಗಳನ್ನು ನಾಶ ಮಾಡಿವೆ.ಅಲ್ಲದೆ ಪಕ್ಕದ ರೈತರ ತೋಟಗಳಿಗೂ ಕಾಡಾನೆಗಳು ನುಗ್ಗಿ ಕ್ರಷಿ ನಾಶ ಮಾಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಉಬರಡ್ಕ ಗ್ರಾಮದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ





















