ಸುಳ್ಯ ಎನ್ನೆoಸಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ವಿಶಿಷ್ಟ ಕೆಸರುಗದ್ದೆ ಕ್ರೀಡಾಕೂಟ – ಅರೆಭಾಷೆ ಸಂಸ್ಕೃತಿ ಮತ್ತು ಗ್ರಾಮೀಣ ಬದುಕಿನ ಅನಾವರಣ
ಸುಳ್ಯ, ಆ. 18: ಗ್ರಾಮೀಣ ಬದುಕಿನ ಸೊಗಡು, ಕೃಷಿ ಸಂಸ್ಕೃತಿಯ ವೈಶಿಷ್ಟ್ಯ, ಮಣ್ಣಿನೊಂದಿಗಿನ ಮನುಷ್ಯನ ಅವಿನಾಭಾವ ಸಂಬಂಧ ಹಾಗೂ ಸಾಂಪ್ರದಾಯಿಕ ಕ್ರೀಡೆಗಳ ಸಂಭ್ರಮವನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ (ರಿ.) ವತಿಯಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ‘ಗದ್ದೆಗಿಳಿವ ಗಮ್ಮತ್ತ್’ ಎಂಬ ವಿಶಿಷ್ಟ ಕೆಸರುಗದ್ದೆ ಕ್ರೀಡಾಕೂಟವು ಅಗಸ್ಟ್ 19ರಂದು ಮಂಗಳವಾರ ಅಜ್ಜಾವರದ ಕೊರಂಗುಬೈಲು ಗದ್ದೆಯಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ










