ಪಂಜದಲ್ಲಿ ನವರಾತ್ರಿ ಸಂಭ್ರಮ; ಭರತನಾಟ್ಯದಿಂದ ಕಲಾ ವೈಭವ
ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವವು ಭಕ್ತಿ, ಶ್ರದ್ಧೆ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನಡೆಯುತ್ತಿದ್ದು, ಅ.11ರಂದು ಆರಂಭಗೊಂಡಿರುವ ಪೂಜಾ ಕಾರ್ಯಕ್ರಮಗಳು ಅ.20ರವರೆಗೆ ಮುಂದುವರಿಯಲಿವೆ.ಅ.17ರಂದು ಶಿವಳ್ಳಿ ಸಂಪದ ಪಂಜ ವಲಯದ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಭಕ್ತಿಗೀತೆಗಳ ಮಧುರ ಗಾಯನವು ದೇವಿಯ ಸನ್ನಿಧಿಯಲ್ಲಿ ಭಕ್ತಿಭಾವವನ್ನು ಇಮ್ಮಡಿಗೊಳಿಸಿತು. ಬಳಿಕ ಮಾಸ್ಟರ್ ತನ್ಮಯ್ ಕಿನ್ನಿಕುಮ್ಮಿ ಅವರು ಭರತನಾಟ್ಯ ಪ್ರದರ್ಶನ ನೀಡಿ ಕಲಾ ಸೊಬಗನ್ನು ಮೆರೆದರು. ಕರ್ನಾಟಕ ಕಲಾಶ್ರೀ ವಿದುಷಿ ನಯನ
ಪಂಜದಲ್ಲಿ ನವರಾತ್ರಿ ಸಂಭ್ರಮ; ಭರತನಾಟ್ಯದಿಂದ ಕಲಾ ವೈಭವ Read More »










