October 2026

ಸುಳ್ಯ ಬಿಇಒ ಕಚೇರಿ ಅಧೀಕ್ಷಕ ಶಿವಪ್ರಸಾದ್ ಹೃದಯಾಘಾತದಿಂದ ನಿಧನ

ಸುಳ್ಯ: ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ರಸಾದ್ ಜಿ.ಎಸ್. (54) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಜ್ವರದಿಂದ ಬಳಲುತ್ತಿದ್ದ ಅವರು ಅ.14ರಂದು ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಅ.15ರ ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಮನೆಯವರು ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಸುಳ್ಯ ತಾಲೂಕಿನ ಉಬರಡ್ಕದ ಹುಳಿಯಡ್ಕ ನಿವಾಸಿ ಶಿವರಾಮ ನಾಯಕ್ ಅವರ ಪುತ್ರರಾಗಿದ್ದ ಶಿವಪ್ರಸಾದ್, ಪ್ರಸ್ತುತ ಪುತ್ತೂರಿನ ನೆಹರೂನಗರ ಸಮೀಪ

ಸುಳ್ಯ ಬಿಇಒ ಕಚೇರಿ ಅಧೀಕ್ಷಕ ಶಿವಪ್ರಸಾದ್ ಹೃದಯಾಘಾತದಿಂದ ನಿಧನ Read More »

ಗುರುವಿಲ್ಲದೆ ಜೀವನದಲ್ಲಿ ಗುರಿ ಇಲ್ಲ: ನ್ಯಾಯವಾದಿ ಸವಿತಾ

ಅಜ್ಜಾವರ: ಜೀವನದಲ್ಲಿ ಗುರು ಮತ್ತು ಗುರಿ ಬಹಳ ಮುಖ್ಯ. ಗುರಿಯಿಲ್ಲದೆ ಸಾಧನೆ ಮಾಡಲು ಅಸಾಧ್ಯ. ಜೀವನದಲ್ಲಿ ಸರಿಯಾದ ಮಾರ್ಗದರ್ಶನ ನೀಡುವ ಗುರುವಿನ ಪಾತ್ರ ಮಹತ್ವದ್ದಾಗಿದೆ ಎಂದು ನ್ಯಾಯವಾದಿ ಸವಿತಾ ಹೇಳಿದರು.ಅವರು ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ಪುಸ್ತಕ ಬಿಡುಗಡೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಚೈತನ್ಯ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದರು ಅದ್ಭುತ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದಾರೆ. ಯಾವುದೇ ಪ್ರತಿಫಲವನ್ನು ಬಯಸದೆ ಸಮಾಜಕ್ಕೆ ಅವರು ಸಲ್ಲಿಸುತ್ತಿರುವ

ಗುರುವಿಲ್ಲದೆ ಜೀವನದಲ್ಲಿ ಗುರಿ ಇಲ್ಲ: ನ್ಯಾಯವಾದಿ ಸವಿತಾ Read More »

ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ: ಭರತನಾಟ್ಯ ಕಲಾ ಸೇವೆ

ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನಡೆಯುತ್ತಿರುವ ನವರಾತ್ರಿ ಪೂಜಾ ಮಹೋತ್ಸವ ಭಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂದುವರಿಯುತ್ತಿದೆ. ಅ.11ರಂದು ಆರಂಭಗೊಂಡಿರುವ ನವರಾತ್ರಿ ಪೂಜೆಯು ಅ.20ರವರೆಗೆ ನಡೆಯಲಿದ್ದು, ಪ್ರತಿದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆಯುತ್ತಿವೆ.ಅ.14ರಂದು ಬೀದಿಗುಡ್ಡೆ ಸಂಪ್ಯಾಡಿ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಕು. ಸ್ತುತಿ ರೈ ಐಗಿರಿ ಅಡ್ಡಬೈಲು, ಕು. ಮನಸ್ವಿ ರೈ ಪಲ್ಲತ್ತಡ್ಕ

ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ: ಭರತನಾಟ್ಯ ಕಲಾ ಸೇವೆ Read More »

ಸುಳ್ಯದಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಸೇವಾಸೇತು ಅಭಿಯಾನಕ್ಕೆ ಚಾಲನೆ

ಸುಳ್ಯ: ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಅಂಗವಾಗಿ ಸುಳ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ಸೇವಾಸೇತು ಅಭಿಯಾನಕ್ಕೆ ಅ.14ರಂದು ಚಾಲನೆ ನೀಡಲಾಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ದೀಪ ಬೆಳಗಿಸುವ ಮೂಲಕ ಅಭಿಯಾನವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ನಾಯ್ಕ್, ಸೆಲ್ಕೋ ಸೋಲಾರ್ ಸಂಸ್ಥೆಯ ಮ್ಯಾನೇಜರ್ ಅಶಿಕ್ ಹಾಗೂ ಮೆಸ್ಕಾಂ ಸಿಬ್ಬಂದಿ ಉಪಸ್ಥಿತರಿದ್ದರು.ಅ.14ರಿಂದ 16ರವರೆಗೆ ನೋಂದಣಿಗೆ ಅವಕಾಶಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಕುರಿತು ವಿದ್ಯುತ್ ಗ್ರಾಹಕರಿಗೆ ಮಾಹಿತಿ ನೀಡುವುದು ಹಾಗೂ ಸ್ಥಳದಲ್ಲೇ ಅರ್ಜಿ

ಸುಳ್ಯದಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಸೇವಾಸೇತು ಅಭಿಯಾನಕ್ಕೆ ಚಾಲನೆ Read More »

ಎನ್ ಎಸ್ ಎಸ್ ಶಿಬಿರದ ಅನುಭವ ಬದುಕಿನ ಯಶಸ್ಸಿಗೆ ಮೆಟ್ಟಿಲಾಗಲಿ- ಕೆ.ಆರ್.ಗಂಗಾಧರ್

ತೊಡಿಕಾನ: ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಶಿಬಿರದಲ್ಲಿ ಪಡೆದ ಅನುಭವಗಳನ್ನು ಭವಿಷ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್ ಹೇಳಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ), ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ತೊಡಿಕಾನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 18ನೇ ವರ್ಷದ ವಾರ್ಷಿಕ

ಎನ್ ಎಸ್ ಎಸ್ ಶಿಬಿರದ ಅನುಭವ ಬದುಕಿನ ಯಶಸ್ಸಿಗೆ ಮೆಟ್ಟಿಲಾಗಲಿ- ಕೆ.ಆರ್.ಗಂಗಾಧರ್ Read More »

ಮಹಿಳಾ ಕಿಸಾನ್ ದಿವಸ್: ಉತ್ತಮ ಕೃಷಿ ಮಹಿಳೆಯಾಗಿ ಲೀಲಾವತಿ ರುಕ್ಮಯ ದಾಸ್ ಆಯ್ಕೆ

ಸುಳ್ಯ: ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಅಕ್ಟೋಬರ್ 15ರಂದು ನಡೆಯಲಿರುವ ‘ಮಹಿಳಾ ಕಿಸಾನ್ ದಿವಸ್’ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಶ್ರೀಮತಿ ಲೀಲಾವತಿ ರುಕ್ಮಯ ದಾಸ್ ಅವರು ಉತ್ತಮ ಕೃಷಿ ಮಹಿಳೆಯಾಗಿ ಸನ್ಮಾನ ಸ್ವೀಕರಿಸಲಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಮತ್ತು ಸಾಧನೆಯನ್ನು ಗುರುತಿಸಿ ಗೌರವಿಸುವ ಈ ಕಾರ್ಯಕ್ರಮದಲ್ಲಿ ಲೀಲಾವತಿ ಅವರು ಸನ್ಮಾನಕ್ಕೆ ಆಯ್ಕೆಯಾಗಿರುವುದು ಸುಳ್ಯ ತಾಲೂಕು ಹಾಗೂ ಸಂಪಾಜೆ ಗ್ರಾಮದ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪರಿಶ್ರಮ, ಬದ್ಧತೆ ಹಾಗೂ ಸಾಧನೆಗೆ

ಮಹಿಳಾ ಕಿಸಾನ್ ದಿವಸ್: ಉತ್ತಮ ಕೃಷಿ ಮಹಿಳೆಯಾಗಿ ಲೀಲಾವತಿ ರುಕ್ಮಯ ದಾಸ್ ಆಯ್ಕೆ Read More »

ಎನ್ನೆಂಸಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿಜ್ಞಾನ ಸಂಘ ಇದರ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಸರಕಾರಿ ಪದವಿ ಕಾಲೇಜು ಸುಳ್ಯ ಇಲ್ಲಿನ ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಮೋನಿಷಾ ಕೆ, ದೀಪ ಬೆಳಗಿ, ವೈಜ್ಞಾನಿಕವಾಗಿ ರಾಸಾಯನಿಕ ವಸ್ತುಗಳನ್ನು ಬಳಸಿ ಕಾಮನ ಬಿಲ್ಲಿನ ಬಣ್ಣಗಳನ್ನು ಉತ್ಪಾದಿಸಿ ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ “ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳ ಸಾಧನೆ” ವಿಷಯದ ಕುರಿತಾಗಿ ಬಹಳ ಉತ್ತಮವಾಗಿ

ಎನ್ನೆಂಸಿ ವಿಜ್ಞಾನ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ Read More »

ಅ.17ರಂದು ಅರಂತೋಡು ಕೊಡಂಕೇರಿಯಲ್ಲಿ ಕೊರಗಜ್ಜ ದೈವಕ್ಕೆ ಅಗೇಲು ಸೇವೆ

ಸೇವೆಅರಂತೋಡು: ಇಲ್ಲಿನ ಕೊಡಂಕೇರಿ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ತುಲಾ ಸಂಕ್ರಮಣದ ಪ್ರಯುಕ್ತ ಅಕ್ಟೋಬರ್ 17ರಂದು ಶನಿವಾರ ರಾತ್ರಿ 7 ಗಂಟೆಗೆ ಕೊರಗಜ್ಜ ದೈವದ ಅಗೇಲು ಸೇವೆ ನಡೆಯಲಿದೆ.ಅಗೇಲು ಸೇವೆಯ ಬಳಿಕ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.ಅಗೇಲು ಸೇವೆ ಮಾಡಿಸಲು ಇಚ್ಛಿಸುವ ಭಕ್ತರು ಒಂದು ದಿನ ಮುಂಚಿತವಾಗಿ ತಿಳಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ 7022077809 ಸಂಖ್ಯೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಅ.17ರಂದು ಅರಂತೋಡು ಕೊಡಂಕೇರಿಯಲ್ಲಿ ಕೊರಗಜ್ಜ ದೈವಕ್ಕೆ ಅಗೇಲು ಸೇವೆ Read More »

ಅರಂತೋಡು : ಪವರ್ ಮ್ಯಾನ್ ಗಳನ್ನು ನೇಮಕ ಮಾಡದಿದ್ದರೆ ಸುಳ್ಯ ಮೆಸ್ಕಾಂ ಕಚೇರಿ ಮುತ್ತಿಗೆ

ಸುಳ್ಯ ಮೆಸ್ಕಾಂ ವ್ಯಾಪ್ತಿಯ ಅರಂತೋಡು ವಲಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅರಂತೋಡು ವಲಯದ ಪವರ್ ಮೆನ್ ಗಳು ವರ್ಗಾವಣೆಗೊಂಡಿದ್ದು, ಹೊಸದಾಗಿ ಯಾವುದೇ ಪವರ್ ಮೆನ್ ಗಳು ನೇಮಕಗೊಂಡಿರುವುದಿಲ್ಲ. ಈಗಾಗಲೇ ಗ್ರಾಮೀಣ ಪ್ರದೇಶವಾದ ಸಂಪಾಜೆ, ಗೂನಡ್ಕ, ಕಲ್ಲುಗುಂಡಿ, ಅರಂತೋಡು, ಮರ್ಕಂಜ ಭಾಗದಲ್ಲಿ ವಿದ್ಯುತ್‌ ಸಮಸ್ಯೆಯಿದ್ದು, ಈ ಸಮಸ್ಯೆಗೆ ಸಂಬಂಧಪಟ್ಟ ಇಲಾಖೆಯವರು ಅ.26ರ ಒಳಗೆ ಸ್ಪಂದಿಸದಿದ್ದಲ್ಲಿ ಅ. 27 ರಂದು ಸುಳ್ಯ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಸಂಪಾಜೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಜಿ ಕೆ ಹಮೀದ್ ರವರು ಪತ್ರಿಕಾ

ಅರಂತೋಡು : ಪವರ್ ಮ್ಯಾನ್ ಗಳನ್ನು ನೇಮಕ ಮಾಡದಿದ್ದರೆ ಸುಳ್ಯ ಮೆಸ್ಕಾಂ ಕಚೇರಿ ಮುತ್ತಿಗೆ Read More »

ಪಂಜ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ, ಭರತನಾಟ್ಯ ಮನರಂಜನೆ

ಪಂಜ: ಇಲ್ಲಿನ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪ್ರಯುಕ್ತ ನಡೆಯುತ್ತಿರುವ ವಿಶೇಷ ಪೂಜಾ ಕಾರ್ಯಕ್ರಮಗಳ ಅಂಗವಾಗಿ ಅ.13ರಂದು ಭಜನಾ ಸಂಕೀರ್ತನೆ ಹಾಗೂ ಭರತನಾಟ್ಯ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು.ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ತಂಡ ನಾಗತೀರ್ಥ ಹಾಗೂ ಪಂಬೆತ್ತಾಡಿಯ ಪಂಚಶ್ರೀ ಭಜನಾ ಮಂಡಳಿಯ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಐವರ್ನಾಡಿನ ಭೈರವಿ ನಾಟ್ಯಾಲಯದ ಕು. ಅದಿತಿ ಲಕ್ಷ್ಮಿ ನಾಯರ್‌ಕೆರೆ ಹಾಗೂ ಕು. ವರ್ಷ ನೆಲ್ಲಿಗದ್ದೆ ಅವರು ಭರತನಾಟ್ಯ ಪ್ರದರ್ಶಿಸಿ

ಪಂಜ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ, ಭರತನಾಟ್ಯ ಮನರಂಜನೆ Read More »

error: Content is protected !!
Scroll to Top