October 2026

ಪಂಜ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಆರಂಭ

ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜಾ ಮಹೋತ್ಸವ ಅ.11ರಂದು ಆರಂಭಗೊಂಡಿದ್ದು, ಅ.20ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಮಹೋತ್ಸವದ ಮೊದಲ ದಿನವಾದ ಅ.11ರಂದು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ನಾಗತೀರ್ಥ ಹಾಗೂ ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ತಂಡ ನಾಗತೀರ್ಥ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ನೆಕ್ಕಿಲದ ಕು. ಸ್ತುತಿ ಆರ್. ಭಟ್ ಮತ್ತು ಪ್ರಸ್ತುತಿ ಅವರಿಂದ ಭಕ್ತಿಗಾನ ಕಾರ್ಯಕ್ರಮ ನಡೆಯಿತು.ನಂತರ ಮಹಾಪೂಜೆ,

ಪಂಜ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಆರಂಭ Read More »

ಮಕ್ಕಳ ಪ್ರತಿಭೆ, ಸಂಸ್ಕಾರಕ್ಕೆ ವೇದಿಕೆಯಾದ ಸಂಕಲ್ಪ ಮಕ್ಕಳ ಹಬ್ಬ ಅರ್ಥಪೂರ್ಣ ಕಾರ್ಯಕ್ರಮ: ಭಾಗೀರಥಿ ಮುರುಳ್ಯ

ಸುಳ್ಯ: ಆಧುನಿಕ ಕಾಲಘಟ್ಟದಲ್ಲಿ ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಜೀವನ ಕೌಶಲ್ಯ ಗಳನ್ನು ಕಲಿಸುವುದು ಅತ್ಯಗತ್ಯ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಬೆಳೆಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸುಳ್ಯದಲ್ಲಿ ನಡೆದ ಮೂರು ದಿನಗಳ ‘ಸಂಕಲ್ಪ ಮಕ್ಕಳ ಹಬ್ಬ’ ಸುಂದರ ಹಾಗೂ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯಪಟ್ಟರು.ರಂಗ ಮಯೂರಿ ಕಲಾ ಶಾಲೆ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಹಾಗೂ ಸುದ್ದಿ

ಮಕ್ಕಳ ಪ್ರತಿಭೆ, ಸಂಸ್ಕಾರಕ್ಕೆ ವೇದಿಕೆಯಾದ ಸಂಕಲ್ಪ ಮಕ್ಕಳ ಹಬ್ಬ ಅರ್ಥಪೂರ್ಣ ಕಾರ್ಯಕ್ರಮ: ಭಾಗೀರಥಿ ಮುರುಳ್ಯ Read More »

ಸುಳ್ಯ ಬಿಜೆಪಿ ಮಂಡಲದಿಂದ ‘ವಿಶ್ವ ನಾಯಕ ನರೇಂದ್ರ ಮೋದಿ’ ಬೀದಿ ನಾಟಕ: ಅಕ್ಟೋಬರ್ 12 ರಿಂದ ತಾಲೂಕಿನಾದ್ಯಂತ ಪ್ರದರ್ಶನ

ಸುಳ್ಯ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ನಮ್ಮ ನಾಯಕರಾದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ *’ವಿಕಸಿತ ಭಾರತದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಅಕ್ಟೋಬರ್ 12 ರಿಂದ ಸುಳ್ಯ ತಾಲೂಕಿನಾದ್ಯಂತ ಬೀದಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ನಾಟಕದ ಹೆಸರು: “ವಿಶ್ವ ನಾಯಕ ನರೇಂದ್ರ ಮೋದಿ” ಈ ಬೀದಿ ನಾಟಕದ ರಚನೆಯನ್ನು ಕುಸುಮಾಧರ ಎ.ಟಿ. ಅವರು ಮಾಡಿದ್ದು, ನಿರ್ದೇಶನವನ್ನು ಕುಸುಮಾಧರ ಎ.ಟಿ. ಮತ್ತು ರಾಜ್ ಮುಖೇಶ್ ಸುಳ್ಯ ಅವರು ನಿರ್ವಹಿಸಲಿದ್ದಾರೆ. ಹಾಡುಗಳ ಸಂಯೋಜನೆಯನ್ನು

ಸುಳ್ಯ ಬಿಜೆಪಿ ಮಂಡಲದಿಂದ ‘ವಿಶ್ವ ನಾಯಕ ನರೇಂದ್ರ ಮೋದಿ’ ಬೀದಿ ನಾಟಕ: ಅಕ್ಟೋಬರ್ 12 ರಿಂದ ತಾಲೂಕಿನಾದ್ಯಂತ ಪ್ರದರ್ಶನ Read More »

ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಪೆರುವಾಜೆ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಸೇವಾ ಸಮಿತಿ ಪೆರುವಾಜೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಪೆರುವಾಜೆ ಗುತ್ತು ಸಚಿನ್ ರಾಜ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಚಿದಾನಂದ ರೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಜೈ ಶೆಟ್ಟಿ, ಕೋಶಾಧಿಕಾರಿಯಾಗಿ ನಿತಿನ್ ರಾಜ್ ಶೆಟ್ಟಿ ಹಾಗೂ ನಿರ್ದೇಶಕರಾಗಿ ಪ್ರಸಾದ ರೈ ಮರಿಕೇಯಿ, ಕರುಣಾಕರ, ಹೇಮಂತ್ ಗೌಡ ಪೆರುವಾಜೆ ಮತ್ತು ಲಕ್ಷ್ಮಣ ಅವರು ನೂತನ ಸಮಿತಿಯಲ್ಲಿ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಪೆರುವಾಜೆ ಗ್ರಾಮದಲ್ಲಿ ಸಹಕಾರಿ ಸಂಘಗಳ ಮೂಲಕ ನೋಂದಣಿ ಪಡೆದ ಏಕೈಕ ಸಂಸ್ಥೆ ಇದಾಗಿದೆ

ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ Read More »

ಕೊಚ್ಚಿನ್‌ನಲ್ಲಿ ರಸ್ತೆ ಅಪಘಾತ: ಸುಳ್ಯ ಮೂಲದ ಯುವಕ ಸಾವು

ಸುಳ್ಯ: ಕೇರಳದ ಕೊಚ್ಚಿನ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಯುವಕನೊಬ್ಬ ಮೃತಪಟ್ಟಿದ್ದಾರೆ.ಮೃತರನ್ನು ಕನಕಮಜಲು ಗ್ರಾಮದ ಪೆಲ್ತಡ್ಕ ನಿವಾಸಿ ಇಬ್ರಾಹಿಂ ಪಿ.ಎ. ಅವರ ಪುತ್ರ ಇಯಾಸ್ ಎಂದು ಗುರುತಿಸಲಾಗಿದೆ.ಮಾಹಿತಿಯ ಪ್ರಕಾರ, ಇಯಾಸ್ ಅವರು ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಘಟನೆಯಿಂದಾಗಿ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ

ಕೊಚ್ಚಿನ್‌ನಲ್ಲಿ ರಸ್ತೆ ಅಪಘಾತ: ಸುಳ್ಯ ಮೂಲದ ಯುವಕ ಸಾವು Read More »

ಇಂದಿನಿಂದ ರಾಜ್ಯಾದ್ಯಂತ ‘ಅನ್ನಸೇವೆ’ ಆ್ಯಪ್ ಲಭ್ಯ: ಮನೆಯಲ್ಲೇ ಕುಳಿತು ಪಡಿತರ ಚೀಟಿಯ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ

ಬೆಂಗಳೂರು: ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ‘ಅನ್ನಸೇವೆ’ ಮೊಬೈಲ್ ಆ್ಯಪ್ ಸೇವೆಯನ್ನು ಅಕ್ಟೋಬರ್ 10ರಿಂದ ರಾಜ್ಯಾದ್ಯಂತ ವಿಸ್ತರಿಸಿದೆ. ಇದರಿಂದ ಅನ್ನಭಾಗ್ಯ ಸೇರಿದಂತೆ ವಿವಿಧ ಸಾರ್ವಜನಿಕ ವಿತರಣಾ ಯೋಜನೆಗಳ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡದೆಯೇ ತಮ್ಮ ಮೊಬೈಲ್ ಮೂಲಕವೇ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ದೊರೆಯಲಿದೆ.ಈ ಮೊದಲು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಈ ಸೇವೆಯನ್ನು ಇದೀಗ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ.

ಇಂದಿನಿಂದ ರಾಜ್ಯಾದ್ಯಂತ ‘ಅನ್ನಸೇವೆ’ ಆ್ಯಪ್ ಲಭ್ಯ: ಮನೆಯಲ್ಲೇ ಕುಳಿತು ಪಡಿತರ ಚೀಟಿಯ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ Read More »

ಚಾಣಾಕ್ಷತನವೆಂದರೆ ಎಲ್ಲವನ್ನೂ ತಿಳಿದುಕೊಳ್ಳುವುದಲ್ಲ; ಸಂದರ್ಭಕ್ಕೆ ತಕ್ಕಂತೆ ಉತ್ತಮವಾದುದನ್ನು ನಿರ್ಧರಿಸುವುದು

ಜೀವನದಲ್ಲಿ ಕೆಲವೊಂದು ವಿಷಯಗಳನ್ನು ನೋಡಿ ತಿಳಿಯಬೇಕು, ಕೆಲವನ್ನು ಕೇಳಿ ಅರ್ಥಮಾಡಿಕೊಳ್ಳಬೇಕು. ಇನ್ನೂ ಕೆಲವನ್ನು ಸ್ವಂತ ಅನುಭವದಿಂದ ಕಲಿಯಬೇಕು. ಕೆಲವು ಸಂಗತಿಗಳನ್ನು ಹತ್ತಿರದಿಂದ ಗಮನಿಸಿದರೆ, ಇನ್ನು ಕೆಲವು ವಿಷಯಗಳನ್ನು ದೂರದಿಂದಲೇ ಗಮನಿಸಿದಾಗ ಅದರ ನಿಜವಾದ ಸ್ವರೂಪ ಅರ್ಥವಾಗುತ್ತದೆ.ಕೆಲವೊಮ್ಮೆ ನಾವು ಇರುವ ಜಾಗದಲ್ಲಿಯೇ ಇದ್ದು, ಸುತ್ತಮುತ್ತ ನಡೆಯುವ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುವುದರಿಂದಲೂ ಅನೇಕ ಸತ್ಯಗಳು ಅರಿವಾಗುತ್ತವೆ. ವ್ಯಕ್ತಿಯ ಮಾತು ಗಳನ್ನು ಮಾತ್ರವಲ್ಲದೆ, ಅವರ ಭಾವನೆ, ಉದ್ದೇಶ, ನಡೆ-ನುಡಿ ಮತ್ತು ಕಾರ್ಯವೈಖರಿ ಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಅಗತ್ಯ.ಜಾಣ್ಮೆ ಯಿಂದ ಗಮನಿಸುವುದು, ತಾಳ್ಮೆ

ಚಾಣಾಕ್ಷತನವೆಂದರೆ ಎಲ್ಲವನ್ನೂ ತಿಳಿದುಕೊಳ್ಳುವುದಲ್ಲ; ಸಂದರ್ಭಕ್ಕೆ ತಕ್ಕಂತೆ ಉತ್ತಮವಾದುದನ್ನು ನಿರ್ಧರಿಸುವುದು Read More »

ಅರಂತೋಡು ಎನ್‌ಎಂಪಿಯುಸಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದಲ್ಲಿ ಮಾನಸಿಕ ಸ್ವಾಸ್ಥ್ಯದ ಕುರಿತು ಮಾಹಿತಿ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ 18ನೇ ವರ್ಷದ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ‘ಮಾನಸಿಕ ಸ್ವಾಸ್ಥ್ಯ ಮತ್ತು ಆರೋಗ್ಯ’ ವಿಷಯದ ಕುರಿತು ಅರಂತೋಡು ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ಮಾಹಿತಿ ನೀಡಿದರು. ಸ್ವಸ್ಥ ಮನಸ್ಸು ಆರೋಗ್ಯಕರ ಬದುಕಿಗೆ ಕಾರಣವಾಗುತ್ತದೆ. ಬಾಲ್ಯದಿಂದಲೇ ಸಂಸ್ಕಾರಯುತ ಗುಣನಡತೆಗಳನ್ನು ಬೆಳೆಸಿಕೊಳ್ಳುವುದರಿಂದ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಉತ್ತಮ ಆಲೋಚನೆಗಳು, ಸಕಾರಾತ್ಮಕ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯು ಮಾನಸಿಕ ಆರೋಗ್ಯದ ಬೆಳವಣಿಗೆಗೆ

ಅರಂತೋಡು ಎನ್‌ಎಂಪಿಯುಸಿ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದಲ್ಲಿ ಮಾನಸಿಕ ಸ್ವಾಸ್ಥ್ಯದ ಕುರಿತು ಮಾಹಿತಿ Read More »

ಅರಂತೋಡು :ಕಿರ್ಲಾಯ–ಪೂಜಾರಿ ಮನೆ–ಉಕ್ರಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಅರಂತೋಡು: ಅರಂತೋಡು ಗ್ರಾಮದ ಕಿರ್ಲಾಯ–ಪೂಜಾರಿ ಮನೆ–ಉಕ್ರಾಜೆ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ನೂತನ ಕಾಂಕ್ರೀಟ್ ರಸ್ತೆಯನ್ನು ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು.ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭಾಗವಾಗಿ ಕಾಂಕ್ರೀಟೀಕರಣಗೊಂಡ ಈ ರಸ್ತೆಯು ಸ್ಥಳೀಯರ ಸಂಚಾರಕ್ಕೆ ಅನುಕೂಲ ಕಲ್ಪಿಸಲಿದೆ.ಈ ಸಂದರ್ಭದಲ್ಲಿ ಸುಳ್ಯ ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ್, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯ್ಕ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಅಡ್ತಲೆ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್

ಅರಂತೋಡು :ಕಿರ್ಲಾಯ–ಪೂಜಾರಿ ಮನೆ–ಉಕ್ರಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ Read More »

ಅರಂತೋಡು :ಕಿರ್ಲಾಯ–ಪೂಜಾರಿ ಮನೆ–ಉಕ್ರಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಅರಂತೋಡು: ಅರಂತೋಡು ಗ್ರಾಮದ ಕಿರ್ಲಾಯ–ಪೂಜಾರಿ ಮನೆ–ಉಕ್ರಾಜೆ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ನೂತನ ಕಾಂಕ್ರೀಟ್ ರಸ್ತೆಯನ್ನು ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು.ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭಾಗವಾಗಿ ಕಾಂಕ್ರೀಟೀಕರಣಗೊಂಡ ಈ ರಸ್ತೆಯು ಸ್ಥಳೀಯರ ಸಂಚಾರಕ್ಕೆ ಅನುಕೂಲ ಕಲ್ಪಿಸಲಿದೆ.ಈ ಸಂದರ್ಭದಲ್ಲಿ ಸುಳ್ಯ ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ್, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯ್ಕ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಅಡ್ತಲೆ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್

ಅರಂತೋಡು :ಕಿರ್ಲಾಯ–ಪೂಜಾರಿ ಮನೆ–ಉಕ್ರಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ Read More »

error: Content is protected !!
Scroll to Top