ಅರಂತೋಡು :ಕಿರ್ಲಾಯ–ಪೂಜಾರಿ ಮನೆ–ಉಕ್ರಾಜೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಅರಂತೋಡು: ಅರಂತೋಡು ಗ್ರಾಮದ ಕಿರ್ಲಾಯ–ಪೂಜಾರಿ ಮನೆ–ಉಕ್ರಾಜೆ ಸಂಪರ್ಕ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ನೂತನ ಕಾಂಕ್ರೀಟ್ ರಸ್ತೆಯನ್ನು ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು.
ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭಾಗವಾಗಿ ಕಾಂಕ್ರೀಟೀಕರಣಗೊಂಡ ಈ ರಸ್ತೆಯು ಸ್ಥಳೀಯರ ಸಂಚಾರಕ್ಕೆ ಅನುಕೂಲ ಕಲ್ಪಿಸಲಿದೆ.
ಈ ಸಂದರ್ಭದಲ್ಲಿ ಸುಳ್ಯ ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ್, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯ್ಕ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಅಡ್ತಲೆ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕೊತ್ತಮೊಟ್ಟೆ, ಉಪಾಧ್ಯಕ್ಷ ಡಾ. ಲಕ್ಷ್ಮೀಶ್, ದಯಾನಂದ ಕುರುಂಜಿ, ಭಜನಾ ಪರಿಷತ್ತಿನ ಅಧ್ಯಕ್ಷ ಸೋಮಶೇಖರ್ ಪೈಕ, ಶಕ್ತಿ ಕೇಂದ್ರದ ಪ್ರಮುಖ ಲೋಹಿತ್ ಕಲ್ಲುಗದ್ದೆ, ಬೂತ್ ಅಧ್ಯಕ್ಷರಾದ ಮೋಹನ್ ಪಾರೆ ಮಜಲು ಹಾಗೂ ಕಿಶೋರ್ ಮಾಸ್ಟರ್ ಉಪಸ್ಥಿತರಿದ್ದರು.
ಅಲ್ಪಾವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿದ ಗುತ್ತಿಗೆದಾರ ಮಹೇಶ್ ಕುತ್ತಮೊಟ್ಟೆ ಹರಿಕಲ್ಲುಗದ್ದೆ, ಗ್ರಾಮದ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಹಾಗೂ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.















Leave a Comment

Your email address will not be published. Required fields are marked *

error: Content is protected !!
Scroll to Top