ಚಾಣಾಕ್ಷತನವೆಂದರೆ ಎಲ್ಲವನ್ನೂ ತಿಳಿದುಕೊಳ್ಳುವುದಲ್ಲ; ಸಂದರ್ಭಕ್ಕೆ ತಕ್ಕಂತೆ ಉತ್ತಮವಾದುದನ್ನು ನಿರ್ಧರಿಸುವುದು

ಜೀವನದಲ್ಲಿ ಕೆಲವೊಂದು ವಿಷಯಗಳನ್ನು ನೋಡಿ ತಿಳಿಯಬೇಕು, ಕೆಲವನ್ನು ಕೇಳಿ ಅರ್ಥಮಾಡಿಕೊಳ್ಳಬೇಕು. ಇನ್ನೂ ಕೆಲವನ್ನು ಸ್ವಂತ ಅನುಭವದಿಂದ ಕಲಿಯಬೇಕು. ಕೆಲವು ಸಂಗತಿಗಳನ್ನು ಹತ್ತಿರದಿಂದ ಗಮನಿಸಿದರೆ, ಇನ್ನು ಕೆಲವು ವಿಷಯಗಳನ್ನು ದೂರದಿಂದಲೇ ಗಮನಿಸಿದಾಗ ಅದರ ನಿಜವಾದ ಸ್ವರೂಪ ಅರ್ಥವಾಗುತ್ತದೆ.
ಕೆಲವೊಮ್ಮೆ ನಾವು ಇರುವ ಜಾಗದಲ್ಲಿಯೇ ಇದ್ದು, ಸುತ್ತಮುತ್ತ ನಡೆಯುವ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸುವುದರಿಂದಲೂ ಅನೇಕ ಸತ್ಯಗಳು ಅರಿವಾಗುತ್ತವೆ. ವ್ಯಕ್ತಿಯ ಮಾತು ಗಳನ್ನು ಮಾತ್ರವಲ್ಲದೆ, ಅವರ ಭಾವನೆ, ಉದ್ದೇಶ, ನಡೆ-ನುಡಿ ಮತ್ತು ಕಾರ್ಯವೈಖರಿ ಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ಅಗತ್ಯ.
ಜಾಣ್ಮೆ ಯಿಂದ ಗಮನಿಸುವುದು, ತಾಳ್ಮೆ ಯಿಂದ ಅರ್ಥಮಾಡಿಕೊಳ್ಳುವುದು, ಪ್ರೀತಿ ಯಿಂದ ನಡೆದುಕೊಳ್ಳುವುದು ಹಾಗೂ ವ್ಯವಹಾರಿಕ ದೃಷ್ಟಿಕೋನ ದಿಂದ ಸಂದರ್ಭವನ್ನು ವಿಶ್ಲೇಷಿಸುವುದು ಜೀವನದ ಪ್ರಮುಖ ಪಾಠಗಳು.
ಎಲ್ಲವನ್ನೂ ತಿಳಿದಿದ್ದರೂ ತಕ್ಷಣ ಪ್ರತಿಕ್ರಿಯಿಸದೆ, ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಿರಬೇಕು; ಯಾವಾಗ ಹತ್ತಿರವಾಗಬೇಕು, ಯಾವಾಗ ದೂರವಿರಬೇಕು ಎಂಬುದನ್ನು ಸಂದರ್ಭಕ್ಕೆ ಅನುಗುಣವಾಗಿ ನಿರ್ಧರಿಸುವ ವಿವೇಚನೆಯೇ ನಿಜವಾದ ಚಾಣಾಕ್ಷತನ.
ಎಲ್ಲವನ್ನೂ ಅರ್ಥಮಾಡಿಕೊಂಡರೂ … ತೋರಿಸಿಕೊಳ್ಳದಿರುವುದು, ಎಲ್ಲವನ್ನೂ ತಿಳಿದಿದ್ದರೂ ಸಂದರ್ಭಕ್ಕೆ ತಕ್ಕಂತೆ ಮಾದರಿಯಾಗಿ ನಡೆದುಕೊಳ್ಳುವುದೇ ನಿಜವಾದ ಚಾಣಾಕ್ಷತನ ಎಂದೆನಿಸಿಕೊಳ್ಳುತ್ತದೆ.















Leave a Comment

Your email address will not be published. Required fields are marked *

error: Content is protected !!
Scroll to Top