November 21, 2026

ಮಂಡೆಕೋಲು ಗ್ರಾಮದಲ್ಲಿ ₹1.48 ಕೋಟಿ ವೆಚ್ಚದ ರಸ್ತೆ, ಸೇತುವೆ ಕಾಮಗಾರಿಗಳಿಗೆ ಗುದ್ದಲಿಪೂಜೆ

ಸುಳ್ಯ: ಮಂಡೆಕೋಲು ಗ್ರಾಮದಲ್ಲಿ ಒಟ್ಟು 1 ಕೋಟಿ 48 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ   ಮುರುಳ್ಯ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಗ್ರಾಮದ ವಿವಿಧ ಭಾಗಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಗಳ ವಿವರ: * ಮಂಡೆಕೋಲು–ಕನ್ಯಾನ ರಸ್ತೆಯ ತೋಟಪ್ಪಾಡಿಯಲ್ಲಿ ಸೇತುವೆ ನಿರ್ಮಾಣ – 60 ಲಕ್ಷ ರೂ. * ಪೇರಾಲು ಪದವು–ಮೈತ್ತಡ್ಕ

ಮಂಡೆಕೋಲು ಗ್ರಾಮದಲ್ಲಿ ₹1.48 ಕೋಟಿ ವೆಚ್ಚದ ರಸ್ತೆ, ಸೇತುವೆ ಕಾಮಗಾರಿಗಳಿಗೆ ಗುದ್ದಲಿಪೂಜೆ Read More »

ನ.23ಕ್ಕೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿಗಳ ಹಾಗೂ ಸಾಧಕರ ಕೃತಿ ಬಿಡುಗಡೆ ಸಮಾರಂಭ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಸಾಹಿತಿಗಳ ಮತ್ತು ಸಾಧಕರ ಪರಿಚಯ ಮಾಲಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಕೃತಿ ಬಿಡುಗಡೆ ಸಮಾರಂಭವು ನವೆಂಬರ್ 23, 2026ರ ಸೋಮವಾರ ಪೂರ್ವಾಹ್ನ 11:30ಕ್ಕೆ ಸುಳ್ಯದ ಕನ್ನಡ ಭವನ ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ ಪೇರಾಲು ವಹಿಸಲ್ಲಿದ್ದಾರೆ.ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷರಾದ ಡಾಕ್ಟರ್ ಕೆ ವಿ ಚಿದಾನಂದ

ನ.23ಕ್ಕೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿಗಳ ಹಾಗೂ ಸಾಧಕರ ಕೃತಿ ಬಿಡುಗಡೆ ಸಮಾರಂಭ Read More »

ನ.29ರಂದು ಚೆಂಬುವಿನಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಸಾಹಿತ್ಯ ಸಮ್ಮೇಳನವು ನವೆಂಬರ್ 29ರ ಭಾನುವಾರ ಚೆಂಬು ಗ್ರಾಮದ ಕೂಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದುಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ    ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು.ಅರೆಭಾಷೆಯ ಮೇಲಿನ ಪ್ರೀತಿ, ಅಭಿಮಾನವನ್ನು ಹೆಚ್ಚಿಸುವುದರೊಂದಿಗೆ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ನ.29ರಂದು ಬೆಳಗ್ಗೆ 8.30ಕ್ಕೆ ಸಂಪಾಜೆ

ನ.29ರಂದು ಚೆಂಬುವಿನಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನ Read More »

ಜೇನು ಉತ್ಪನ್ನಗಳ ಪ್ರಚಾರ ವಾಹನಕ್ಕೆ ಕ್ಯಾ. ಬ್ರಿಜೇಶ್ ಚೌಟ ಮೆಚ್ಚುಗೆ

ಮಂಗಳೂರು: ಕರಾವಳಿ ಮೈದಾನದಲ್ಲಿ ನಡೆದ 73ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಉದ್ಘಾಟನೆಗೊಂಡ ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ, ಪುತ್ತೂರು ಇದರ ಜೇನು ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ಸಿದ್ಧಪಡಿಸಲಾದ ನೂತನ ವಾಹನವನ್ನು ಮಂಗಳೂರು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಪರಿಶೀಲಿಸಿದರು.ವಾಹನದ ವಿನ್ಯಾಸ, ಪ್ರಚಾರ ವ್ಯವಸ್ಥೆ ಹಾಗೂ ಜೇನು ಉತ್ಪನ್ನಗಳ ಮಾರಾಟಕ್ಕೆ ಕೈಗೊಂಡಿರುವ ವಿನೂತನ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಂಘದ ಈ ಕಾರ್ಯಕ್ಕೆ ಶುಭ ಹಾರೈಸಿದರು. ಜೇನು ಉತ್ಪನ್ನಗಳ ಪ್ರಚಾರ ಹಾಗೂ

ಜೇನು ಉತ್ಪನ್ನಗಳ ಪ್ರಚಾರ ವಾಹನಕ್ಕೆ ಕ್ಯಾ. ಬ್ರಿಜೇಶ್ ಚೌಟ ಮೆಚ್ಚುಗೆ Read More »

error: Content is protected !!
Scroll to Top