ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಸಾಹಿತಿಗಳ ಮತ್ತು ಸಾಧಕರ ಪರಿಚಯ ಮಾಲಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಕೃತಿ ಬಿಡುಗಡೆ ಸಮಾರಂಭವು ನವೆಂಬರ್ 23, 2026ರ ಸೋಮವಾರ ಪೂರ್ವಾಹ್ನ 11:30ಕ್ಕೆ ಸುಳ್ಯದ ಕನ್ನಡ ಭವನ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ ಪೇರಾಲು ವಹಿಸಲ್ಲಿದ್ದಾರೆ.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷರಾದ ಡಾಕ್ಟರ್ ಕೆ ವಿ ಚಿದಾನಂದ ಇವರು ಕೃತಿ ಬಿಡುಗಡೆಗೊಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಿಡುಗಡೆ ಗೊಳ್ಳಲ್ಲಿರುವ ಕೃತಿಗಳು
ಲೇಖಕಿ: ಶ್ರೀಮತಿ ನಂದಕುಮಾರ್ ಸ್ವಾಮಿ
ಕೃತಿ: ಪ್ರಗತಿ ಶೀಲ ಬರಹಗಾರ ನಿರಂಜನರ
ಲೇಖಕ: ಶ್ರೀ ದುರ್ಗಾ ಕುಮಾರ್ ನಾಯರ್ ಕೆರೆ
ಕೃತಿ: ಸಾಹಿತ್ಯ ಲೋಕದ ಸವ್ಯಸಾಚಿ ಟಿ. ಜಿ ಮುಡೂರು
ಲೇಖಕ: ಶ್ರೀ ಕುಮಾರಸ್ವಾಮಿ ತೆಕ್ಕುಂಜ
ಕೃತಿ: ಸುಮನಸ್ಸಿನ ಪರಿಸರ ಕವಿ ಜಿ. ಎಸ್ ಉಬರಡ್ಕ
ಲೇಖಕಿ: ಶ್ರೀಮತಿ ಚಂದ್ರವತ ಬಡ್ಡಡ್ಕ
ಕೃತಿ: ಚೊಕ್ಕಾಡಿಯ ಸಿರಿ ಪಾರಿಜಾತ ಸುಬ್ರಾಯ ಚೊಕ್ಕಾಡಿ
ಲೇಖಕ: ಶ್ರೀ ರಾಮಚಂದ್ರ ಪಲ್ಲತ್ತಡ್ಕ
ಕೃತಿ :ಪರಿಸರ ಕವಿ ಕುತ್ಯಾಳ ನಾಗಪ್ಪ ಗೌಡ (ಕಿರಣ)
ಲೇಖಕಿ: ಶ್ರೀಮತಿ ಸ್ಮಿತಾ ಅಮೃತ ರಾಜ್
ಕೃತಿ: ಬಹುಮುಖ ಪ್ರತಿಭೆಯ ವಿಶಿಷ್ಟ ಚಿಂತಕ ಡಾ. ಪ್ರಭಾಕರ ಶಿಶಿಲ
ಲೇಖಕಿ: ಶ್ರೀಮತಿ ಲೀಲಾ ದಾಮೋದರ
ಕೃತಿ:ಜೀವನ್ಮುಖಿ ಅಮ್ಮ ಎಂ ಜಿ ಕಾವೇರಮ್ಮ
ಲೇಖಕ: ಶ್ರೀ. ಯಶ್ವಿತ್ ಕಾಳಮ್ಮನೆ
ಕೃತಿ: ಹಳಬರ ಜೋಡಿಗೆಯ ಜಯಮ್ಮ ಚಟ್ಟಿಮಾಡ
ಹಾಗೂ ದರೊಂದಿಗೆ ಸುಳ್ಯ ತಾಲೂಕಿನ ಸಾಧಕರ ಪರಿಚಯ ಮಾಲಿಕೆಯಲ್ಲಿ
ಲೇಖಕಿ: ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ
ಕೃತಿ: ವೈದ್ಯಕೀಯ ಕ್ಷೇತ್ರದ ಮೇರು ಸಾಧಕ ಡಾ. ಕೆ ವಿ ಚಿದಾನಂದ
ಲೇಖಕ: ಶ್ರೀ ತೇಜಸ್ವಿ ಕಡಪಲ ಕೃತಿ: ತೂಗು ಸೇತುವೆಗಳ ಸರದಾರ ಡಾ. ಗಿರೀಶ್ ಭಾರದ್ವಾಜ್
ಲೇಖಕಿ : ಶ್ರೀಮತಿ ಚಂದ್ರಮತಿ ಕೆ ಕೃತಿ: ಸಾಹಿತ್ಯದ ಸಾರಥಿ ಶ್ರೀಮತಿ ಎಂ ಮೀನಾಕ್ಷಿ ಗೌಡ
ಹೀಗೆ ಎಂಟು ಸಾಹಿತ್ಯಾ ಕೃತಿ ಹಾಗೂ ಮೂರು ಸಾಧಕರ ಕೃತಿಗಳು ಬಿಡುಗಡೆಗೊಳ್ಳಲಿದೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.








































