ಸುಳ್ಯ: ಮಂಡೆಕೋಲು ಗ್ರಾಮದಲ್ಲಿ ಒಟ್ಟು 1 ಕೋಟಿ 48 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾಮದ ವಿವಿಧ ಭಾಗಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಕಾಮಗಾರಿಗಳ ವಿವರ:
* ಮಂಡೆಕೋಲು–ಕನ್ಯಾನ ರಸ್ತೆಯ ತೋಟಪ್ಪಾಡಿಯಲ್ಲಿ ಸೇತುವೆ ನಿರ್ಮಾಣ – 60 ಲಕ್ಷ ರೂ.
* ಪೇರಾಲು ಪದವು–ಮೈತ್ತಡ್ಕ ರಸ್ತೆ ಅಭಿವೃದ್ಧಿ – 25 ಲಕ್ಷ ರೂ.
* ಮಂಡೆಕೋಲು–ಶಿವಾಜಿನಗರ ರಸ್ತೆ ಅಭಿವೃದ್ಧಿ – 6 ಲಕ್ಷ ರೂ. ಹಾಗೂ 5 ಲಕ್ಷ ರೂ.
* ಮಂಡೆಕೋಲು–ಕೇನಾಜೆ ರಸ್ತೆ ಅಭಿವೃದ್ಧಿ – 10 ಲಕ್ಷ ರೂ.
* ಮುರೂರು–ಮಂಡೆಕೋಲು ರಸ್ತೆಯ ಮುರೂರು ಭಾಗದ ರಸ್ತೆ ಅಭಿವೃದ್ಧಿ – 10 ಲಕ್ಷ ರೂ.
* ಇರುವಂಬಳ್ಳ ಶಾಲೆಯ ಬಳಿಯಿಂದ ಪೇರಲುಗುತ್ತು–ಕುತ್ಯಾಡಿ ರಸ್ತೆ ಅಭಿವೃದ್ಧಿ – 10 ಲಕ್ಷ ರೂ.
* ಅಂಬ್ರೋಟಿ–ಉದ್ದಂತಡ್ಕ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ – 10 ಲಕ್ಷ ರೂ.
* ಮಂಡೆಕೋಲು ಬೈಲು–ದೇವಸ್ಥಾನ ರಸ್ತೆ ಅಭಿವೃದ್ಧಿ – 6 ಲಕ್ಷ ರೂ.
* ಕಲ್ಲಡ್ಕ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ – 6 ಲಕ್ಷ ರೂ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ಜಯರಾಜ್ ಕುಕ್ಕೆಟ್ಟಿ, ಮಂಡಲ ಸಮಿತಿ ಕೋಶಾಧಿಕಾರಿ ಸುಬೋಧ್ ಶೆಟ್ಟಿ ಮೇನಾಲ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ನಿರ್ದೇಶಕರಾದ ಲಿಂಗಪ್ಪ ಬದಿಕಾನ, ಲಕ್ಷ್ಮಣ ಉಗ್ರಾಣಿಮನೆ, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ರಾಮಕೃಷ್ಣ ರೈ, ಮಾಜಿ ನಿರ್ದೇಶಕ ರುಕ್ಕಯ್ಯ ಆಲಂಕಲ್ಯ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಮಾಜಿ ಸದಸ್ಯರಾದ ದಿವ್ಯಲತಾ ಚೌಟಾಜೆ, ಡಿ.ಸಿ. ಬಾಲಚಂದ್ರ ದೇವರಗುಂಡ, ನವೀನ್ ಮುರೂರು, ಅನಿಲ್ ತೋಟಪ್ಪಾಡಿ, ನಾರಾಯಣ ಕೆದ್ಕಾರ್, ಬೂತ್ ಅಧ್ಯಕ್ಷ ಲೋಕೇಶ್ ಚೌಟಾಜೆ, ಬೂತ್ ಸಮಿತಿ ಕಾರ್ಯದರ್ಶಿ ರಂಜನ್ ಸೊರಂಜ, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸುದರ್ಶನ ಪಾತಿಕಲ್ಲು ಉಪಸ್ಥಿತರಿದ್ದರು.
ಅಲ್ಲದೆ ಪ್ರಮುಖರಾದ ಶ್ರೀಧರ್ ಭಟ್ ತೋಟಪ್ಪಾಡಿ, ದಿವಾಕರ ಶಿರಾಜೆ, ಆನಂದ ಬದಿಕಾನ, ಪೊಡಿಯ ಉದ್ದಂತಡ್ಕ, ಸಾವಿತ್ರಿ ಕೆದ್ಕಾರ್, ಸುರೇಶ್ ಚೌಟಾಜೆ, ಮಂಜುನಾಥ ಕುಕ್ಕೆಟ್ಟಿ, ಸುಂದರ ಕಾಡುಸೊರಂಜ, ಹರೀಶ್ ಕುಕ್ಕುಡೇಲು, ವಾಸುದೇವ ಬತ್ತಿಮನೆ, ರಾಜಣ್ಣ ಪೇರಾಲ ಮನೆ, ಉದಯ ಆಚಾರ್ಯ, ಶಂಕರನಾರಾಯಣ ಕಾರಂತ, ಪ್ರಕಾಶ್ ಕಣೆಮರಡ್ಕ, ಕೃಷ್ಣಪ್ರಸಾದ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮೋಹಿನಿ, ಪ್ರಶಾಂತ್, ಕೇಶವ ಮೂರ್ತಿ ಹೆಬ್ಬಾರ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪ್ರತಿಮಾ ಮಾವಿನಡಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಮಮತಾ ಬೊಳುಗಲ್ಲು, ರಾಜೇಂದ್ರ ಭಟ್ ಏರ್ಕಾಲ್ ಪ್ಲಾಡಿ, ಚಂದ್ರಶೇಖರ ಪುರುಷ ತೋಟಪ್ಪಾಡಿ, ದಾಮೋದರ ಆಚಾರ್ಯ, ಪ್ರಖ್ಯಾತ್ ವಾಗ್ಲೆ, ಹೇಮಂತ್ ಗೌಡರಮನೆ, ದಿನೇಶ್ ರೈ ದರ್ಖಾಸ್ತು, ದಿವಾಕರ ಶಿವಾಜೆ, ಮಂಜುನಾಥ ಪರಪ್ಪೆ, ಸುಂದರ ಗೌಡ ಕಾಡುಸೊರಂಜ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.








































