ಅಜ್ಜಾವರ : 5 ಲಕ್ಷ ಮೌಲ್ಯದ 12 ಕ್ವಿಂಟಾಲ್ ಅಡಿಕೆ ಕಳವು

ಅಜ್ಜಾವರ ಗ್ರಾಮದ ಬಯಂಬು‌ ಎಂಬಲ್ಲಿ ಅಡಿಕೆ ವ್ಯಾಪಾರಿಯ ಗೋಡನ್ ನಿಂದ ಸುಲಿದ ಸುಮಾರು‌ 12 ಕ್ವಿಟಾಲ್ ಅಡಿಕೆ ಕಳವಾದ ಸೆ.12ರಂದು ಬೆಳಗಿನ‌ ವರದಿಯಾTVಗಿದೆ.
ಈ ಘಟನೆಯ ಬಗ್ಗೆ ಅಜ್ಜಾವರ ಗ್ರಾಮದ ವೆಲ್ ಕಮ್ ಮನೆಯ ನಿವಾಸಿ ಮಹಮ್ಮದ್‌ ರಫೀಕ್‌ ಎಸ್‌. ಡಿ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಮ್ಮದ್ ರಪೀಕ್ ಅವರು ವ್ಯಾಪಾರ ಮತ್ತು ಕೃಷಿ ಕೆಲಸ ಮಾಡಿಕೊಂಡಿದ್ದು, ಜಮೀನಿನಲ್ಲಿ ಬೆಳೆದ ಅಡಿಕೆಗಳನ್ನು ಅಜ್ಜಾವರ ಗ್ರಾಮದ ಬಯಂಬು ಭಾಸ್ಕರ ರಾವ್‌ ರವರಿಗೆ ಸೇರಿದ ಕಟ್ಟಡದಲ್ಲಿ ಸುಮಾರು 2 ವರ್ಷಗಳಿಂದ ದಾಸ್ತಾನು ಮಾಡಿಕೊಂಡಿದ್ದು, ದಾಸ್ತಾನು ಇಟ್ಟಿರುವ ಅಡಿಕೆಗಳನ್ನು ಸುಲಿದು ಗೋಣಿ ಚೀಲದಲ್ಲಿ ಕಟ್ಟಿ ದಾಸ್ತಾನು ಇರಿಸಿದ್ದರು. ಸೆ.10ರಂದು ಅವರು ಊರು ಮನೆಯಾದ ಕಾಸರಗೋಡು ಮನೆಗೆ ಹೋಗಿದ್ದು ಈ ದಿನ ದಿನಾಂಕ ಸೆ.12 ರಂದು ರಾತ್ರಿ 03.00 ಗಂಟೆಗೆ ಅವರ ಮನೆಯ ಜೀಪು ಡ್ರೈವರ್‌ ಹಸೈನಾರ್‌ ರವರು ಫೋನ್‌ ಮಾಡಿ ಗೋಡಾನ್‌ನಿಂದ ಯಾರೋ ಕಳ್ಳರು ಅಡಿಕೆ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿ , ಈ ಸಮಯ ವಾಹನದ ಶಬ್ದ ಕೇಳಿ ರಪೀಕ್ ಅವರ ತಂದೆ ಮನೆಯಿಂದ ಹೊರಗೆ ಬಂದು ನೋಡಿದಾಗ ವಾಹನದಲ್ಲಿ ಅಲ್ಲಿಂದ ಕಳ್ಳರು ಪರಾರಿಯಾಗಿರುವುದಾಗಿದ್ದರು. ಕಾಸರಗೋಡಿನಿಂದ ತಕ್ಷಣ ಅವರು ಕಾಸರಗೋಡಿನಿಂದ ಹೊರಟು ಅಜ್ಜಾವರಕ್ಕೆ ಬಂದು ಅವರು ಅಡಿಕೆ ದಾಸ್ತಾನು ಇರಿಸಿದ್ದ ಗೋಡಾನ್‌ಗೆ ಹೋಗಿ ನೋಡಿದಾಗ ಅಡಿಕೆ ಗೋಡಾನ್‌ ನ ಬಾಗಿಲು ಒಳಗಡೆ ತೆರೆದುಕೊಂಡಿದ್ದು ದಾಸ್ತಾನು ಇರಿಸಿದ್ದ ಸುಮಾರು 33 ಕ್ವಿಂಟಾಲ್‌ ಅಡಿಕೆ ಪೈಕಿ 12 ಕ್ವಿಂಟಾಲ್‌ ಅಡಿಕೆ ಕಡಿಮೆ ಇರುವುದು ಕಂಡು ಬಂದಿರುತ್ತದೆ. ಸೆ. 11 ರಂದು ರಾತ್ರಿ 12.00 ಗಂಟೆಯಿಂದ ಸೆ.12ರಂದು ಬೆಳಿಗ್ಗೆ 03.00 ಗಂಟೆಯ ಮಧ್ಯೆ ಯಾರೋ ಕಳ್ಳರು ಅವರ ಮನೆಯ ಹಿಂಬದಿಯಲ್ಲಿ ಇರುವ ಬಯಂಬು ಭಾಸ್ಕರ ರಾವ್‌ ಅವರಿಗೆ ಸೇರಿದ ಕಟ್ಟಡದಲ್ಲಿ ಪಿರ್ಯಾದಿದಾರರು ದಾಸ್ತಾನು ಇಟ್ಟಿರುವ ಸುಮಾರು 12 ಕ್ವಿಂಟಾಲ್‌ ಅಡಿಕೆಯನ್ನು ದಾಸ್ತಾನು ಕೊಠಡಿಯ ಬಾಗಿಲನ್ನು ದೂಡಿ ಒಳ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳ್ಳತನವಾಗಿರುವ ಅಡಿಕೆಯ ಅಂದಾಜು ಬೆಲೆ 5,00,000/- ರೂಪಾಯಿ ಆಗಬಹುದು ಅಂದಾಜಿಸಲಾಗಿದೆ.ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top