ಇಂದು ಸುಳ್ಯದಲ್ಲಿ ಪ್ರವಾದಿ ಮುಸ್ತಾಫಾರ 1500ನೇ ಜನ್ಮ ದಿನಾಚರಣೆ ಮಾಸಾಚರಣೆ ಪ್ರಯುಕ್ತ ತಾಲೂಕು ಮಿಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥಾ

ಸಕಲ ಮನುಕುಲಕ್ಕೆ ಶಾಂತಿ, ದಯೆ, ಸಹಾನುಭೂತಿ ಹಾಗೂ ಸತ್ಯ ಜೀವನ ಶೈಲಿಯ ಬೆಳಕಾಗಿ ಬಂದ ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ 1500ನೇ ಜನ್ಮದಿನ ಮಾಸಾಚರಣೆ ಅಂಗವಾಗಿ ತಾಲೂಕು ಮೀಲಾದ್ ಸಮಿತಿ ಸುಳ್ಯ ಇದರ ವತಿಯಿಂದ ವರ್ಷಪ್ರತಿ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥ ಮತ್ತು ಅರಿಯಿರಿ ಮನುಕುಲದ ಪ್ರವಾದಿಯನ್ನ ಪ್ರವಾದಿ ಸಂದೇಶ ಸಾರ್ವಜನಿಕ ಸಭಾ ಕಾರ್ಯಕ್ರಮ ಇಂದು ಸುಳ್ಯದಲ್ಲಿ ನಡೆಯಲಿದೆ.
ಬೃಹತ್ ಕಾಲ್ನಡಿಗೆ ಜಾಥಕ್ಕೆ ಸೆ.13 ರಂದು ಸಂಜೆ ಘಂಟೆ 4 ಗಂಟೆಗೆ ಸರಿಯಾಗಿ ಮೊಗರ್ಪಣೆ ಮಸೀದಿ ಬಳಿ ಚಾಲನೆ ನೀಡಲಾಗುವುದು. ಜಾಥಾದಲ್ಲಿ ಶಿಸ್ತುಬದ್ಧ ಸೌಟ್ ತಂಡಗಳು, ಇಸ್ಲಾಮಿಕ್ ಸಂಪ್ರಾದಾಯಿಕ ಕಲೆಯನ್ನು ಬಿಂಬಿಸುವ ಧಪ್ ತಂಡಗಳು,30ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಿ ರ್ಯಾಲಿಗೆ ಮೆರುಗು ನೀಡಲಿವೆ. ಪ್ರವಾದಿ ಕೀರ್ತನೆ, ಸಂದೇಶ ಸಾರುವ ಘೋಷವಾಕ್ಯ ಮೊಳಗಿ ರ್ಯಾಲಿ ಮೊಗರ್ಪಣೆ ಮಸೀದಿ ಬಳಿಯಿಂದ ಆರಂಭಗೊಂಡು ಮೊಗರ್ಪಣೆ ಪೆಟ್ರೋಲ್ ಪಂಪ್ ಬಳಿ ಸಮಾಪನಗೊಳ್ಳಲಿದೆ. ನಂತರ ಸಂಜೆ ಗಂಟೆ 7.00 ರಿಂದ ಸುಳ್ಯ ಗಾಂಧಿನಗರದಲ್ಲಿ ಆರಂಭವಾಗಲಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನ’ ಪ್ರವಾದಿ ಸಂದೇಶ ಸಾರ್ವಜನಿಕ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮವನ್ನು ಸಯ್ಯದ್ ಕುಂಞಕೋಯ ತಂಬಳ್ ಸಅದಿ ಉದ್ಘಾಟಿಸಲಿದ್ದು, ಸಯ್ಯದ್ ತ್ವಾಹಿರ್ ಸದಿ ತಂಬಳ್ ದುವಾ ನೆರವೇರಿಸಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಕೇರಳದ ಪ್ರಖ್ಯಾತ ವಾಗಿ ನವಾಝ್ ಮನ್ನಾನಿ ತಿರುವನಂತಪುರಂ ಹಾಗೂ ಪ್ರಭಾಷಣಗಾರರಾಗಿ ಎಸ್.ಎನ್. ಬಶೀರ್ ಮಂಜೇಶ್ವರ, ಹುಸೇನ್ ಅಹನಿ ಮೂರ್ನಾಡ್, ರಿಯಾಝ್ ಕಡುಂಬು ಧಾರ್ಮಿಕ, ಸಾಮಾಜಿಕ ನೇತಾರರು ಪಾಲ್ಗೊಳ್ಳಲಿದ್ದಾರೆ .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top