ಸುಳ್ಯ : ಪ್ರವಾದಿ ಮುಸ್ತಾಫಾರ 1500ನೇ ಜನ್ಮ ದಿನಾಚರಣೆ ಮಾಸಾಚರಣೆ ಪ್ರಯುಕ್ತ ತಾಲೂಕು ಮಿಲಾದ್ ಸಮಿತಿ ವತಿಯಿಂದ ಪ್ರವಾದಿ ಸಂದೇಶ, ಆಕರ್ಷಕ ಕಾಲ್ನಡಿಗೆ ಜಾಥಾ

ಪ್ರವಾದಿ ಮುಹಮ್ಮದ್ ಮುಸ್ತಫಾರ 1500ನೇ ಜನ್ಮದಿನ ಮಾಸಾಚರಣೆ ಅಂಗವಾಗಿ ತಾಲೂಕು ಮೀಲಾದ್ ಸಮಿತಿ ಸುಳ್ಯ ವತಿಯಿಂದ ವರ್ಷಪ್ರತಿ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥಾ ಮತ್ತು ಅರಿಯಿರಿ ಮನುಕುಲದ ಪ್ರವಾದಿಯನ್ನ ಪ್ರವಾದಿ ಸಂದೇಶ ಸಾರ್ವಜನಿಕ ಸಭಾ ಕಾರ್ಯಕ್ರಮ ಸುಳ್ಯದಲ್ಲಿ ಸೆ.13ರಂದು ನಡೆಯಿತು.
ಜಾಥಾದಲ್ಲಿ ಶಿಸ್ತುಬದ್ಧ ಸ್ಕೌಟ್ ತಂಡಗಳು, ಇಸ್ಲಾಮಿಕ್ ಸಂಪ್ರಾದಾಯಿಕ ಕಲೆಯನ್ನು ಬಿಂಬಿಸುವ ಧಪ್ ತಂಡಗಳು,30ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಿ ರ್ಯಾಲಿಗೆ ಮೆರುಗು ನೀಡಿದವು. ಪ್ರವಾದಿ ಕೀರ್ತನೆ, ಸಂದೇಶ ಸಾರುವ ಘೋಷವಾಕ್ಯ ಮೊಳಗಿ ರ್ಯಾಲಿ ಮೊಗರ್ಪಣೆ ಮಸೀದಿ ಬಳಿಯಿಂದ ಆರಂಭಗೊಂಡು ಮೊಗರ್ಪಣೆ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ಸಮಾಪನಗೊಂಡಿತು. ಗಾಂಧಿನಗರದಲ್ಲಿ ಆರಂಭವಾಗಲಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನ’ ಪ್ರವಾದಿ ಸಂದೇಶ ಸಾರ್ವಜನಿಕ ಕಾರ್ಯಕ್ರಮ ಜರುಗಿತು
ನೂರಾರು ಮಂದಿ ಮುಸ್ಲಿಂ ಭಾಂದವರು ಜಾಥಾದಲ್ಲಿ ಭಾಗವಹಿಸಿದರೆ, ರಸ್ತೆಯ ಎರಡು ಬದಿಗಳಲ್ಲಿ ನಿಂತು ಸಾವಿರಾರು ಮಂದಿ ಜಾಥಾವನ್ನು ವೀಕ್ಷಿಸಿದರು.
ಮೊಗರ್ಪಣೆ ಜುಮಾ ಮಸೀದಿಯ ಮುರ್ದಸ್ ಅಬ್ದುಲ್ ಖಾದರ್ ಸಖಾಫಿ ಅಲ್ ಖಾಮಿಲ್ ಪ್ರಾರ್ಥನೆ ನೆರವೇರಿಸಿ ಮೀಲಾದ್ ಸಮಿತಿಯ ಅಧ್ಯಕ್ಷ ಜುನೈದ್ ಎನ್ ಎ ಅವರಿಗೆ ಧ್ವಜ ಹಸ್ತಾಂತರಿಸಿ ಜಾಥಾಕ್ಕೆ ಚಾಲನೆ ನೀಡಿದರು.
ಮೊಗರ್ಪಣೆ ಸಹಾಯಕ ಮುದಗ್ರೀಸ್ ಫಾಹಿಝ್ ಚೌಹರಿ, ತಾಲೂಕು ಮಿಲಾದ್ ಸಮಿತಿಯ ಸಂಚಾಲಕ ಕೆ.ಎಸ್.ಉಮ್ಮರ್, ಖಜಾಂಜಿ ಉನೈಸ್ ಪೆರಾಜೆ, ಉಪಾಧ್ಯಕ್ಷರಾದ ರಶೀದ್ ಜಟ್ಟಿಪಳ್ಳ, ಅಬ್ದುಲ್ ಖಾದ‌ರ್ ಸಂಗಂ, ಇಕ್ಬಾಲ್ ಸುಣ್ಣಮೂಲೆ, ನವಾಝ್ ಜಯನಗರ, ಪ್ರಮುಖರಾದ ಟಿ.ಎಂ.ಶಹೀದ್ ತೆಕ್ಕಿಲ್, ಕೆ.ಎಂ.ಮುಸ್ತಫಾ ಜನತಾ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಬ್ದುಲ್ ಕಲಾಂ, ಅಬ್ದುಲ್ ಮಜೀದ್ ಜನತಾ, ಸಿದ್ದಿಕ್ ಕೊಕ್ಕೊ, ಜಿ.ಕೆ.ಹಮೀದ್, ತಾಜ್ ಮಹಮ್ಮದ್ ಸಂಪಾಜೆ, ಹಮೀದ್ ಸುಣ್ಣಮೂಲೆ, ಮುಸ್ತಫ ಮೊಗರ್ಪಣೆ ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top