ವಿಹಾಹಿತ ಮಹಿಳೆಯೊಬ್ಬರನ್ನು ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ್ದಾಳೆಂಬ ಆರೋಪ,ಪ್ರಿಯತಮನಿಂದ ಮಹಿಳೆಗೆ ಚೂರಿ ಇರಿತ

ವಿವಾಹಿತೆ ಮಹಿಳೆಯೊಬ್ಬರನ್ನು ಪ್ರೀತಿಸಿ ಆಕೆ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂಬ ಕಾರಣಕ್ಕೆ ಪ್ರಿಯತಮ ಆಕೆಗೆ ಚೂರಿಯಿಂದ ಇರಿದ ಘಟನೆ ಆಡೂರಿನಲ್ಲಿ ನಡೆದಿದ್ದು ಆರೋಪಿಯನ್ನು ಅಡೂರು ಪೋಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.
ಮಂಡೆಕೋಲು ಗ್ರಾಮದ ಕುಂಣಿಕಣ್ಣ ಎಂಬವರ ಪುತ್ರ ಪ್ರತಾಪ್ ಮಣಿಯಾಣಿ (೩೬) ವಿವಾಹಿತ ಮಹಿಳೆಗೆ ಚೂರಿಯಿಂದ ಇರಿದು ಬಂಧನಕಕೊಳಗಾದ ಆರೋಪಿ ಎಂದು ಗುರುತಿಸಲಾಗಿದೆ.
ಮಂಡೆಕೋಲು ಗ್ರಾಮದ ತೋಟಪ್ಪಾಡಿ ಜಯರಾಜ ಎಂಬವರಿಗೆ ಅಡೂರಿನ ಬಳ್ಳಕಾನ ಕಿಟ್ಟು ನಾಯ್ಕ ಎಂಬವರ ಪುತ್ರಿ ರೇಖಾ ಎಂಬವರೊಂದಿಗೆ ೨೦೧೫ರಲ್ಲಿ ವಿವಾಹ ವಾಗಿತ್ತು. ಈ ದಂಪತಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ಮಗಳನ್ನು ಶಾಲೆಗೆ ತಾಯಿ ಕರೆದುಕೊಂಡು ಹೋಗುವ ಸಂದರ್ಭ ಒಂದು ವರ್ಷದ ಹಿಂದೆ ರೇಖಾರಿಗೆ ಕನ್ಯಾನದ ಪ್ರತಾಪರ ಪರಿಚಯವಾಗಿದೆ.ಪರಿಚಯ ಪ್ರೀತಿಗೆ ತಿರುಗಿತ್ತು.ದಿನ ನಿತ್ಯ ಮೊಬೈಲ್ ಸಂಭಾಷಣೆ ನಡೆಯುತ್ತಿತ್ತೆನ್ನಲಾಗಿದೆ.ಈ ವಿಷಯ ಗಂಡ ಜಯರಾಜ್‌ರಿಗೆ ಗೊತ್ತಾಗಿ ಅವರು ರೇಖಾರ ಮನೆಯವರಿಗೆ ವಿಷಯ ತಿಳಿಸಿದ್ದರು. ಬಳಿಕ ರೇಖಾ ತಾಯಿ ಮನೆ ಸೇರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top