ಸುಳ್ಯ ನಗರ ಪಂಚಾಯತ್ ಮುಂಭಾಗದ ಶೆಡ್ ನಲ್ಲಿ ಅನೇಕ ವರ್ಷಗಳಿಂದ ರಾಶಿ ಬಿದ್ದಿದ್ದ ತ್ಯಾಜ್ಯ ಕೊನೆಗೂ ಖಾಲಿಯಾಗಿದೆ. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಪ್ರಯತ್ನದಿಂದ ಮೊದಲ ಬಾರಿಗೆ ಕಸ ಸಂಪೂರ್ಣ ಖಾಲಿಯಾಗಿದ್ದು ಅಧ್ಯಕ್ಷರ ಈ ಕೆಲಸವನ್ನು ಅನೇಕರು ಶ್ಲಾಘಿಸಿದ್ದಾರೆ.
ಶಶಿಕಲಾ ನೀರಬಿದಿರೆ ನಗರ ಪಂಚಾಯತ್ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ಸುಳ್ಯದ ಕಸದ ಸಮಸ್ಯೆ ಪರಿಹಾರಕ್ಕೆ ಸಂಸದರು, ಶಾಸಕರು, ಮಂಡಲ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮುಖಾಂತರ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ. ರಾಶಿ ಬಿದ್ದಿದ್ದ ಕಸದ ಬಗ್ಗೆ ನಿರಂತರ ಟೀಕೆ, ರಾಜಕೀಯ ಕೆಸರೆರೆಚಾಟ ತೆರೆ ಬಿದ್ದಿದೆ. ಗ್ರೀನ್ ಸ್ಪೇಸ್ ಸೊಲ್ಯೂಷನ್ ಮಂಗಳೂರು ಈ ಕಂಪೆನಿ ಮುಖಾಂತರ ಕಸ ಸಾಗಾಟ ಮುಂದುವರಿಯುವ ವ್ಯವಸ್ಥೆ ಮಾಡಿದ್ದಾರೆ.
ಅಧ್ಯಕ್ಷೆ ಶಶಿಕಲಾ ನೀರಬಿದಿರೆಯವರ ಅಧಿಕಾರ ಅವಧಿ ನವೆಂಬರ್ ಮೊದಲ ವಾರದಲ್ಲಿ ಕೊನೆಗೊಳ್ಳಲಿದ್ದು, ಕೊನೆಯ ಅವಧಿಯಲ್ಲಾದರೂ ಕಸದ ಸಮಸ್ಯೆಗೆ ಮುಕ್ತಿ ನೀಡುವ ಕೆಲಸ ಮಾಡಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಶೆಡ್ ನಲ್ಲಿದ್ದ ಕಸ ಸಾಗಾಟ ಮಾಡಲು ನನ್ನೊಂದಿಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಶಾಸಕಿ ಭಾಗೀರಥಿ ಮುರುಳ್ಯ,ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಂಬೆ,ನಗರ ಬಿ.ಜೆ.ಪಿ ಅಧ್ಯಕ್ಷ ಎ.ಟಿ ಕುಸುಮಾಧರ, ನಗರ ಪಂಚಾಯತ್ ಸದಸ್ಯರು,ಅಧಿಕಾರಿಗಳು ಗಣ್ಯರು ಸಹಕಾರ ಮಾಡಿದ್ದಾರೆ.ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ತಿಳಿಸಿದ್ದಾರೆ.
ಸುಳ್ಯ ನಗರ ಪಂಚಾಯತ್ ಶೆಡ್ ನಲ್ಲಿ ರಾಶಿ ಬಿದ್ದ ಕಸವನ್ನು ಖಾಲಿ ಮಾಡಿಸಿದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ

















