ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿ ದಿನಾಂಕ 22/9/2025 ರಂದು ನವರಾತ್ರಿ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಶ್ರೀಯುತ .ನಿತ್ಯಾನಂದ ಮುಂಡೋಡಿ ಅವರು ಉದ್ಘಾಟಿಸಿ ಶಾಲೆ ಹಾಗೂ ಕಾರ್ಯಕ್ರಮದ ಕುರಿತು ಮಾತನಾಡಿ ಶುಭ ಹಾರೈಸಿದರು. ಗೊಂಬೆ ಹಬ್ಬದ ಮಹತ್ವ ಹಾಗೂ ವಿಶೇಷತೆಯನ್ನು ಶಾಲಾ ಸಂಚಾಲಕಿ ಗೀತಾಂಜಲಿ ಟಿ. ಜಿ ಅವರು ವಿವರಿಸಿದರು . ರಾಮ, ಲಕ್ಷ್ಮಣ , ಸೀತಾ , ಹನುಮಂತ ಜೊತೆಗೆ ಶಾರದೆ , ಲಕ್ಷ್ಮೀ, ಸರಸ್ವತಿ, ನವದುರ್ಗೆಯರಾಗಿ ಹಾಗೂ ಹುಲಿವೇಶದಲ್ಲಿ ಮುದ್ದು ಪುಟಾಣಿಗಳು ಗೊಂಬೆ ಹಬ್ಬಕ್ಕೆ ಮೆರುಗು ತಂದು ಕೊಟ್ಟರು.
ಶಾಲಾ ಎಲ್ಲಾ ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಶಾಲಾ ಶಿಕ್ಷಕಿ . ನಿರ್ಮಲ ಸ್ವಾಗತಿಸಿ , ರೂಪ ಪ್ರಾರ್ಥಿಸಿ ,ವಂದಿಸಿದರು. ಫಬೀದಾ ಕಾರ್ಯಕ್ರಮವನ್ನು ನಿರೂಪಿಸಿದರು.
9 ದಿನಗಳ ಕಾಲ ಸಾರ್ವಜನಿಕರಿಗೆ ಗೊಂಬೆ ಹಬ್ಬವನ್ನು ವೀಕ್ಷಿಸಲು ಅವಕಾಶವಿರುತ್ತದೆ.
ಅಂಜಲಿ ಮಾಂಟೆಸ್ಸರಿ ಶಾಲೆಯಲ್ಲಿನವರಾತ್ರಿಯ ಪ್ರಯುಕ್ತ 4 ನೇ ವರ್ಷದ ಗೊಂಬೆ ಹಬ್ಬದ ಉದ್ಘಾಟನೆ














































