ಅಜ್ಜಾವರ : ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ಸಹಿತ ವಿವಿಧ ಕಾರ್ಯಕ್ರಮ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನವರಾತ್ರಿ ಪ್ರಯುಕ್ತ ಗಣಹೋಮ,ದುರ್ಗಾಪೂಜೆ,ಭಜನಾ‌ ಸತ್ಸಂಗ ಕಾರ್ಯಕ್ರಮ ಹಾಗೂ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 230ನೇ ಕೃತಿಮಾಲೆ ಜೀವನ್ಮುಕ್ತನಾಗು ಬಿಡುಗಡೆ ಸಮಾರಂಭ ನಡೆಯಿತು.
ಸುಳ್ಯ ಕೆ.ವಿ.ಜಿ ಕಾನೂನು ಕಾಲೇಜಿನ‌ ಉಪನ್ಯಾಸಕಿ ಸವಿತ ಸ್ವಾಮೀಜಿಯವರ ಕೃತಿಮಾಲೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಸ್ವಾಮೀಜಿಯರು ಪುಸ್ತಕ ಬರೆದು ಉಚಿತವಾಗಿ ವಿತರಣೆ ಮಾಡುತ್ತಿರುವುದು ಶ್ರೇಷ್ಠ ಕೆಲಸವಾಗಿದೆ.ಇವರ ಸರಳ ಬರಣಿಗೆ ಸುಲಭವಾಗಿ ಅರ್ಥವಾಡಿಕೊಂಡು ಓದಬಹುದಾಗಿದೆ.ಎಲ್ಲರೂ ಪುಸ್ತಕಕೊಂಡು ಓದಿ ಎಂದು ಹೇಳಿದರು.
ಸ್ವಾಮೀಜಿಯವರು ನವರಾತ್ರಿಯ ವಿಶೇಷತೆಯ ಬಗ್ಗೆ ತಿಳಿಸಿದರು.ವೇಣುಗೋಪಾಲ ಅಡೂರು,ಚಿತ್ರಕುಮಾರ ಮುಡೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಡಾ.ಸಾಯಿಗೀತಾ,ಶಿಕ್ಷಕಿ ಸುನಂದ ಉಪಸ್ಥಿತರಿದ್ದು ಮಾತನಾಡಿದರು‌.
ಆಶ್ರಮದ ಟ್ರಸ್ಟಿ ಸ್ವಾಗತಿಸಿ,ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top