ಸೆ.27ರಂದು ಮುಂಜಾನೆ ಬೀಸಿದ ಭಾರೀ ಗಾಳಿಯಿಂದಾಗಿ ಅಡ್ಕಬಳೆ, ಬಾಜಿನಡ್ಕ, ಬನ, ಕರಿಂಬಿ ಭಾಗದಲ್ಲಿ ಕರೆಂಟ್ ಕಂಬ, ತೆಂಗಿನ ಮರ, ಅಡಿಕೆ ಮರ, ರಬ್ಬರ್, ಹಾಗೂ ಇನ್ನಿತರ ದೊಡ್ಡ ದೊಡ್ಡ ಮರಗಳು ಉರುಳಿ ಬಿದ್ದಿದ್ದು, ಅಪಾರ ಕೃಷಿ ಹಾನಿ ಸಂಭವಿಸಿದೆ. ಕೆಲವು ಮನೆಗಳಿಗೆ ಹಾಗೂ ಕೊಟ್ಟಿಗೆಗೂ ಹಾನಿ ಸಂಭವಿಸಿದೆ.ಈ ಭಾಗದಲ್ಲಿ ವಿದ್ಯುತ್ ಅಂಪರ್ಕ ಕಡಿತಗೊಂಡಿದೆ.
ಅರಂತೋಡು ಪರಿಸರದಲ್ಲಿ ಭಾರೀ ಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು,ತೆಂಗಿನ ಮರಗಳು

















