ಅಕ್ಟೊಬರ್ 2 ವಿಶ್ವಕ್ಕೆ ಅಹಿಂಸೆ ಮತ್ತು ಶಾಂತಿಯ ಸಂದೇಶ ಬಿತ್ತಿದ ಶ್ರೇಷ್ಠ ಅಹಿಂಸಾವಾದಿ , ಮಾನವತಾವಾದಿ ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ರಾಷ್ಟ್ರ ಪಿತ ಮಹಾತ್ಮ ಗಾಂಧಿf ಅವರ ಜನ್ಮ ದಿನ.
ಅ. 2 1869 ರಂದು ಜನಿಸಿದ ಮಹಾತ್ಮ ಗಾಂಧಿ ಅವರ ಹುಟ್ಟುಹಬ್ಬವನ್ನು ಆ ದಿನ ಭಾರತ ಮಾತ್ರವಲ್ಲ ವಿಶ್ವದ ಎಲ್ಲಾ ಮೂಲೆಯಲ್ಲಿ ವಿದೇಶಿಯರು ಕೂಡ ಆಚರಿಸುತ್ತಾರೆ.
ಅಲ್ಲದೇ ಭಾರತದ ಸ್ವತಂತ್ರ ಸಂಗ್ರಾಮದ ಪಿತಾಮಹಾ ಮಹಾತ್ಮಗಾಂಧಿ ಅವರ ಹುಟ್ಟಿದ ದಿನವನ್ನು ವಿಶೇಷವಾಗಿ ವಿಶ್ವದಲ್ಲಿ ಶಾಂತಿಯ ದಿನವೆಂದು ಆಚರಿಸುತ್ತಿರುವುದು ಶಾಂತಿ ಪ್ರಿಯ ಭಾರತದ ಹೆಗ್ಗಳಿಕೆ.
ಭಾರತ ದೇಶದ ಆಡಳಿತ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ದೇಶದ ವಿವಿಧ ಭಾಗಗಳಲ್ಲಿ ಪರಕೀಯರಾದ ಬ್ರಿಟಿಷರ ದಬ್ಬಾಳಿಕೆಗೆ ಅವರ ವಿರುದ್ಧವಾಗಿ ದೇಶವನ್ನು ರಕ್ಷಿಸಿಕೊಳ್ಳಲು ರಾಜ ಮಹಾರಾಜರ ಜೊತೆ ಅಲ್ಲದೇ ಬಿಳಿಯರ ಕಪಿ ಮುಷ್ಟಿಯಿಂದ ದೇಶ ಬಂಧನ ಮುಕ್ತಗೊಳಿಸಲು ಸಮರ ಸಾರಿದ ದೇಶಪ್ರೇಮಿ ನಾಯಕರ ಜೊತೆ ಸೇರಿಕೊಂಡ ಸಾರ್ವಜನಿಕರು ಜಾತಿ, ಧರ್ಮ, ಪ್ರಾಂತ್ಯ, ಮೇಲು ಕೀಳು ಎನ್ನುವ ಬಿನ್ನಾಭಿಪ್ರಾಯ ತೊರೆದು ಹೋರಾಟಗಳಲ್ಲಿ ಬ್ರಿಟಿಷರ ಬಂದೂಕು, ಲಾಟಿ, ಶಿಕ್ಷೆಗೆ ಜಗ್ಗದೆ ಭಾಗಿಯಾಗಿದ್ದರು.
ಇಂತಹ ಸಂಧರ್ಭದಲ್ಲಿ ಭಾರತದ ಮಣ್ಣಿನಲ್ಲಿ ಕರಮಚಂದ್ ಗಾಂಧಿ ಮತ್ತು ಪುತಾಲಿ ಬಾಯಿ ಅವರ ಮಗನಾಗಿ ಗುರಾತಿನ ಪೋರ್ ಬಂದರಿನಲ್ಲಿ ಜನಿಸಿದವರು ಮಹಾತ್ಮ ಗಾಂಧೀಜಿ.
ಆಗರ್ಭ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಗಾಂಧೀಜಿ ಅವರು ತನ್ನ ಶಿಕ್ಷಣವನ್ನು ಗುಜರಾತ್ ರಾಜ್ಯದ ರಾಜ್ ಕೋಟ್ ಪ್ರದೇಶ ದಲ್ಲಿ ಪದವಿ ಮುಗಿಸುವುದರೊಂದಿಗೆ 1888 ರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಿದ್ದರು.
ಅವರು ಭವಿಷ್ಯದಲ್ಲಿ ವಕೀಲನಾಗುವ ಕನಸು ಕಂಡಿದ್ದರು. ಮಾಡಿಕೊಂಡಿದ್ದು ದಕ್ಷಿಣ ಆಫ್ರಿಕಾವನ್ನು.
ಆ ವೇಳೆಯಲ್ಲಿ ಸಹ ಆಫ್ರಿಕಾ ದೇಶದ ಆಡಳಿತ ಕೂಡ ಬ್ರಿಟಿಷರ ಹಿಡಿತದಲ್ಲಿತ್ತು.
ಅಲ್ಲಿಯ ದೇಶದ ಸರ್ಕಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ನಾನು ದಕ್ಷಿಣ ಆಫ್ರಿಕಾ ಸೇರಿದ್ದು ಕೇವಲ ಶಿಕ್ಷಣಗೋಸ್ಕರವೆಂದು ತನ್ನ ಪಾಡಿಗೆ ತಾನಿದ್ದಾಗ ಆಫ್ರಿಕಾ ಸೇರಿ ಕೇವಲ 8 ದಿನದಲ್ಲಿ ಒಂದು ಸ್ಥಳದಿಂದ ಇನ್ನೊಂದೂ ರಿಗೆ ಮಹಾತ್ಮ ಗಾಂಧೀಜಿ ಅವರಿಗೆ ರೈಲ್ ನಲ್ಲಿ ಪ್ರಯಾಣಿಸುವ ಸಂಧರ್ಭ ಎದುರಾಗುತ್ತದೆ. ಹಾಗೆ ಇವರು ಪ್ರಥಮ ದರ್ಜೆ ಟಿಕೆಟ್ ಪಡೆದು ರೈಲ್ ಸಂಚಾರ ಮಾಡುತ್ತಿರುವ ವೇಳೆಗೆ ಅಲ್ಲಿಯ ಬ್ರಿಟಿಷ್ ಅಧಿಕಾರಿಗಳು ಗಾಂಧೀಜಿ ಅವರನ್ನು ವರ್ಣ ಭೇದದಲ್ಲಿ ಕರಿಯರು ಇಲ್ಲಿ ಕೂರುವಂತಿಲ್ಲ ಎಂದು ಹೇಳಿ ಬಿಳಿ ಮುಸುಡಿನ ಅಧಿಕಾರಿಗಳು ರೈಲಿನಿಂದ ಕೆಳಕ್ಕೆ ತಳ್ಳುತ್ತಾರೆ.
ಆ ಒಂದು ಘಟನೆ ಮಹಾತ್ಮ ಗಾಂಧಿ ಅವರನ್ನು ಇನ್ನಿಲ್ಲದಂತೆ ನೋಯಿಸಿತು. ಅಲ್ಲಿಯೇ ಬಳಿ ಕೋತಿಗಳಂತಿದ್ದ ಬ್ರಿಟಿಷರ ಮೇಲೆ ಗಾಂಧೀಜಿ ಅವರು ಕೆಂಡ ಕಾರಿದರು. ತನ್ನ ಸ್ವಾಭಿಮಾನಕ್ಕೆ ಎಲ್ಲರೆದುರು ಧಕ್ಕೆ ಮಾಡಿದ ಬ್ರಿಟಿಷ್ ಅಧಿಕಾರಿಗಳ ಮೇಲೆ ಬಣ್ಣದ ತಾರತಮ್ಯ ತೋರಿ ಚರ್ಮ ಬಣ್ಣವನ್ನು ಕೀಳಾಗಿ ಕಂಡ ಬ್ರಿಟಿಷರ ವಿರುದ್ಧ ಹೋರಾಡಲೇಬೇಕೆಂದು ದಕ್ಷಿಣ ಆಫ್ರಿಕಾ ತನ್ನ ತಾಯಿನಾಡು ಅಲ್ಲದಿದ್ದರೂ ವಿದ್ಯೆ ಕಲಿಯಲು ಬಂದ ವಿದೇಶವನ್ನು ತನ್ನೊಳಗಿನ ಬೆಂಕಿಯನ್ನು ಆರಿಸಲು ಮುಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಕರಿಯರನ್ನು ಸಂಘ ಕಟ್ಟಿದರು.ಹೋರಾಟಕ್ಕೆ ಇಳಿದರು. ಕ್ರೀಡೆಯಲ್ಲೂ ಕೂಡ ಬ್ರಿಟಿಷ್ ಪ್ರಜೆಗಳ ವಿರುದ್ಧ ಕರಿಯರ ಪುಟ್ ಬಾಲ್ ಆಟಕ್ಕೆ ಇಳಿದು ಸೆಣೆಸಿದರು. ಇಂಡಿಯನ್ ಒಪಿನಿಯನ್ ಎಂಬ ಹೆಸರಿನಲ್ಲಿ ಪತ್ರಿಕೆಯನ್ನು ಹುಟ್ಟು ಹಾಕುತ್ತಾರೆ,ಹರಿತವಾದ ಲೇಖನಗಳನ್ನು ಬರೆಯುತ್ತಾರೆ, ಕರಿಯರನ್ನು ಸಂಘಟಿಸಿ ಹಲವು ಬೀದಿ ಹೋರಾಟ ಮಾಡುತ್ತಾರೆ ಮಹಾತ್ಮಾ ಗಾಂಧಿ ಅವರನ್ನು ದಮನಿಸಲು ಬ್ರಿಟಿಷರು ನಾಲ್ಕು ಬಾರಿ ಇವರನ್ನು ಜೈಲಿಗೆ ನೂಕುತ್ತಾರೆ .
ಕೊನೆಗೆ ಆಫ್ರಿಕಾ ದೇಶವನ್ನು ತೊರೆದು ತನ್ನ ಜನ್ಮ ಭೂಮಿ ಭಾರತ ಸೇರುತ್ತಾರೆ. ತಾನು ವಿದೇಶಕ್ಕೆ ತೆರಳುವ ತಂದೆಯನ್ನು ಕಳೆದುಕೊಂಡವರು ಪ್ರೌಢಶಾಲೆ ಯಲ್ಲಿ ವಿದ್ಯಾರ್ಜನೆ ಮಾಡುವ ವೇಳೆಗೆ ಬಾಲ್ಯ ವಿವಾಹ ಮಾಡಿಕೊಂಡಿದ್ದ ಕಸ್ತೂರಿ ಬಾಯಿ ಅವರನ್ನು ಸೇರಿಕೊಳ್ಳುತ್ತಾರೆ. ದುರದೃಷ್ಟಕ್ಕೆ ತನ್ನ ಹೆತ್ತ ತಾಯಿ ಪಾತೀಬಾಯಿ ನಿಧನ ಹೊಂದಿದ್ದ ಸುದ್ದಿ ಊರಿಗೆ ಬಂದ ನಂತರವೇ ಗಮನಕ್ಕೆ ಬರುತ್ತದೆ. ದುಃಖಿತರಾಗುತ್ತಾರೆ.
ದಕ್ಷಿಣ ಆಫ್ರಿಕಾದಲ್ಲಿಬ್ರಿಟಿಷರಿಂದ ಆಗಿದ್ದ ಅವಮಾನದ ನೋವು ಮಹಾತ್ಮ ಗಾಂಧಿ ಅವರಿಗೆ ಕಡಿಮೆಯಾಗಿರಲಿಲ್ಲ.
ಭಾರತದಲ್ಲಿ ತಿಲಕ ಗೋಖಲೆ ಅವರ ದೇಶದ ಸ್ವತಂತ್ರ ಕಲ್ಪನೆಯು ಬ್ರಿಟಿಷರ ವಿರುದ್ಧ ಹೋರಾಟ ಮೊನಚು ಮೊಂಡು ಆಗುತ್ತಿರುವ ವೇಳೆಗೆ ಗಾಂಧೀಜಿ ಅವರು ಸಬರಮತಿ ಅಶ್ರಮ ಮಾಡುತ್ತಾರೆ. 1915 ರ ವೇಳೆಗೆ ಸ್ವರಾಜ್ಯ ಸ್ಥಾಪನೆಗೆ ಪೀಠಿಕೆ ಬರೆದು ಭಾರತದಲ್ಲಿ ಕ್ರಾಂತಿರಹಿತ ಸ್ವಾತಂತ್ರ್ಯ ಸಂಗ್ರಾಮ ಅಹಿಂಸಾ ಹಾದಿಯಲ್ಲಿ ಮುಂದುವರಿಸುತ್ತಾರೆ.
1920-21 ರಲ್ಲಿ ಗಾಂಧೀಜಿ ಅವರ ಆಯುಧವಿಲ್ಲದ ಸತ್ಯಾಗ್ರಹ, ಪ್ರತಿಭಟನೆ, ತೀವ್ರತೆ ಪಡೆಯುತ್ತದೆ ಗಾಂಧೀಜಿ ಭಾಷಣ ಗೈಯುವ ಊರಲೆಲ್ಲ ಸಾಗರೊಪಾದಿಯಲ್ಲಿ ಯಲ್ಲಿ ಮನೆ ಮಠ ತೊರೆದು ಸಾರ್ವಜನಿಕರು ಗಾಂಧೀಜಿ ಜೊತೆ ಸೇರಿಕೊಳ್ಳುತ್ತಾರೆ. ಬ್ರಿಟಿಷರು ಗಾಂಧಿ ಅವರ ಸಂಘಟನಾ ಶಕ್ತಿಗೆ ಬೆಚ್ಚಿ ಬೀಳುತ್ತಾರೆ. ಲಾಠಿ ಬೂಟು ಏಟು, ಜೈಲ್ ಹೀಗೆ ಹೋರಾಟ ಮುಂದುವರಿಯುತ್ತದೆ.
ಸ್ವಾತಂತ್ರ್ಯ ಹೋರಾಟ ಮನೆ ಮನೆ ತಲುಪಲು ಹರಿಜನ ಎನ್ನುವ ಪತ್ರಿಕೆ, ಗುಜರಾತಿ ಮಾಸ ಪತ್ರಿಕೆ. ಎಂಗ್ ಇಂಡಿಯಾ ಎನ್ನುವ ಇಂಗ್ಲಿಷ್ ಪತ್ರಿಕೆ ಹುಟ್ಟು ಹಾಕುತ್ತಾರೆ.
1930 ರಲ್ಲಿ ದೇಶ ವ್ಯಾಪ್ತಿ ಉಪ್ಪಿನ ಸತ್ಯಾಗ್ರಹ ಹೂಡಲಾಗುತ್ತದೆ. ಇಡೀ ದೇಶದ ಪ್ರಜೆಗಳು ಶ್ರೀಮಂತ ರು ತನು ಮನ ಧನಗಳನ್ನು ಗಾಂಧೀಜಿಯವರ ಅಹಿಂಸಾ ಹೋರಾಟಕ್ಕೆ ಬಾಹ್ಯ ಒತ್ತಡಗಳಿಲ್ಲದೆ ನೀಡುತ್ತಾರೆ.
ಇದರಿಂದ ಮತ್ತಷ್ಟು ನಾಯಕರು ಗಾಂಧೀಜಿ ಅವರಿಗೆ ಹೆಗಲು ಕೊಟ್ಟ ಕಾರಣ 1942 ಕ್ಕೆ ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಎನ್ನುವ ಕೂಗು ಬ್ರಿಟಿಷರ ಜಂಗಾಬಲವನ್ನೇ ನಡುಗಿಸಿತು. ಬ್ರಿಟಿಷರು ದೇಶ ತೊರೆಯಲು ಅಗೋಸ್ಟ್ 15 1947ಕ್ಕೆ ಗಾಂಧೀಜಿ ಅವರ ನೇತೃತ್ವದಲ್ಲಿ ನಾವು ಸ್ವತಂತ್ರರಾದೆವು. ಇದರ ಬೆನ್ನಲ್ಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಒಂದಾಗಿದ್ದ ಹಿಂದೂ ಮುಸ್ಲಿಂ ದಂಗೆಯಾದವು. 796096 ಸ್ಕ್ವೇರ್ ಕಿಲೋಮೀಟರ್ ಭೂಮಿ ಮುಸ್ಲಿಂ ರಾಷ್ಟ್ರ ಭೂಮಿಯಾಗಿ, 32,87,263 ಕಿ ಮೀ ಭಾರತದ ಭೂಮಿಯಾಗಿ ದೇಶ ವಿಭಜನೆಯಾಯಿತು.
ಬ್ರಿಟಿಷ ಗುಂಡಿಗೆ ಬಲಿಯಾಗದ ಮಹಾತ್ಮಾ ಗಾಂಧಿ ಅವರು ಭಾರತೀಯನಾದ ಗೋಡ್ಸೆಯ ಗುಂಡೇಟಿಗೆ ಬಲಿಯಾದರು
ಕೈ ಯಲ್ಲಿ ಚರಕ ಖಾದಿ ಬಟ್ಟೆಯ ಪ್ರತೀಕ , ಕೈಯಲ್ಲಿ ಒಂದು ನಡೆದಾಡಲು ಒಂದು ದೊಣ್ಣೆ ಹಿಡಿದು ಅರ್ಧ ಅರ್ಧ ಶರೀರ ತನಕ ಒಂದು ಬಿಳಿ ದೋತಿ ಹೆಗಲಿಗೊಂದು ಶಾಲ್ ಕಣ್ಣಿಗೆ ಒಂದು ಧರಿಸಿದ್ದ ಈ ದೇಶದ ಪಿತಾಮಹಾ ವಿಶ್ವದ ಮಾನವತಾವಾದಿ ವಿಶ್ವದಲ್ಲಿ ಅಹಿಂಸೆಯಲ್ಲಿ ಸ್ವಾತಂತ್ರ್ಯ ಸಂಪಾದಿಸಿದ ಮೊದಲ ಬಲು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ಮಹಾತ್ಮ ಗಾಂಧೀಜಿ ಅವರ ಕೊಡುಗೆ ದೊಡ್ಡದು.
ಇಂದು ಅದೇ ನಮ್ಮ ಹೆಮ್ಮೆಯ ಭಾರತ ದೇಶದಲ್ಲಿ 28 ರಾಜ್ಯ 8 ಕೇಂದ್ರಾಡಳಿತ ಪ್ರದೇಶ ಹೊಂದಿದೆ. ಈ ತನಕ 18 ಮಂದಿ ಪ್ರಧಾನಿಗಳಾಗಿ ದೇಶ ಆಳಿದ್ದಾರೆ. ಮಹಾತ್ಮ ಗಾಂಧಿ ಬಿತ್ತಿ ಬಿಟ್ಟು ಹೋದ ಈ ದೇಶದಲ್ಲಿ ಏನು ಸಂಪತ್ತು ಇರಬೇಕೋ ಅದೆಲ್ಲವೂ ಭವ್ಯ ಭಾರತದ ಮೂಟೆಯಲ್ಲಿದೆ.
ಬರಹ ಕೆ. ಸಿ. ಹರೀಶ್. ಪೆರಾಜೆ.
ರಾಷ್ಟ್ರ ಪಿತ ಮಹಾತ್ಮ ಗಾಂಧಿ ಭಾರತದ ಹೆಮ್ಮೆ

















