ದ.ಕ ಜಿಲ್ಲೆಯಲ್ಲಿ ಆಹಾರ ಬೆಳೆ ವರ್ಷದಿಂದ ವರ್ಷಕ್ಕೆ ಕುಸಿತ : ಶಿವಶಂಕರ ದಾನಗೊಂಡರ್

ದ.ಕ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತಿದ್ದು ವಾಣಿಜ್ಯ ಬೆಳೆಯಿಂದ ಆಹಾರ ಬೆಳೆಯನ್ನು ಬೆಳೆಯಲು ಮನಸು ಮಾಡಬೇಕೆಂದು ಎಂದು ಜಿಲ್ಲಾ ಕೃಷಿ ಇಲಾಖೆಯ ಉಪನಿರ್ದೆಶಕ ಶಿವಶಂಕರ ದಾನಗೊಂಡರ್ ಹೇಳಿದರು.
ದ.ಕ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸುಳ್ಯ ಇದರ ವತಿಯಿಂದ ಸುಳ್ಯ ಕೃಷಿ ಇಲಾಖೆಯಲ್ಲಿ ಅ.
11ರಂದು ನಡೆದ ಪ್ರಧಾನ ಮಂತ್ರಿಯವರ ಧನ್ ಧಾನ್ಯ ಕೃಷಿ ಯೋಜನೆ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಧಾನ್ಯ ಉತ್ಪಾದನೆಗಳಿಗೆ ಕೊರತೆಯಿಲ್ಲ.ಸಾಕಾಷ್ಟು ಧಾನ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ದ.ಕ ಜಿಲ್ಲೆಯಲ್ಲಿ ಆಹಾರ ಬೆಳೆ ಬೆಳೆಯುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.ಈ ನಿಟ್ಟಿನಲ್ಲಿ ಆಹಾರ ಬೆಳೆಯತ್ತ ಗಮನ ಹರಿಸುವ ಅಗತ್ಯ ಇದೆ.ಆಯ್ದ ಜಿಲ್ಲೆಗಳಲ್ಲಿ ಆಹಾರ ಬೆಳೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಧನ್ ಧಾನ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಿ ಎಂದು ಅವರು ಹೇಳಿದರು.
ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ ಕುಸುಮಾಧರ ಕಾರ್ಯಕ್ರಮ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಪ್ರಧಾನಿಯವರ ಯೋಜನೆಗೆ ಪೂರಕವಾಗಿ ಸುಳ್ಯ ತಾಲೂಕಿನಲ್ಲಿ ಹಡಿಲು ಬಿದ್ದ ಒಂದಷ್ಟು ಗದ್ದೆಗಳನ್ನು ಕೃಷಿಕ ಸಮಾಜದ ನೇತ್ರತ್ವದಲ್ಲಿ ಬೇಸಾಯ ಮಾಡಲಾಗುವುದೆಂದು ಹೇಳಿದರು.ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,
ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ಚಂದ್ರಾ ಕೋಲ್ಚಾರ್,ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಸುಳ್ಯ ಕೃಷಿ ಇಲಾಖೆಯ ಸಹಾಯಕ ನಿರ್ದೆಶಕ ಗುರುಪ್ರಸಾದ್ ಸ್ವಾಗತಿಸಿ ವಂದಿಸಿದರು.
ಸುಳ್ಯ ತಾಲೂಕಿನ ಸಹಕಾರಿ ಸಂಘದ ಆಧ್ಯಕ್ಷಕರು,ಕಾರ್ಯನಿರ್ವಾಹಣಾಧಿಕಾರಿಗಳು,ಸಿಬ್ಬಂದಿಗಳು,ಗೊಬ್ಬರ ಏಜೆಂಟ್ ಗಳು ಭಾಗವಹಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top