ಯುವಜನ ಸoಯುಕ್ತ ಮಂಡಳಿ (ರಿ) ಸುಳ್ಯ,ಪ್ರತಾಪ ಯುವಕ ಮಂಡಲ(ರಿ) ಅಜ್ಜಾವರ ಮತ್ತು ಚೈತ್ರ ಯುವತಿ ಮಂಡಲ (ರಿ) ಅಜ್ಜಾವರ ಇವುಗಳ ಸಹಯೋಗದಲ್ಲಿ ಪಂಚಸಪ್ತತಿ -2025 ರ 75 ದಿನಗಳ ಸ್ವಚ್ಛತಾ ಅಭಿಯಾನದ ಅಂಗವಾಗಿ ಪ್ರಥಮ ಕಾರ್ಯಕ್ರಮ ವಾಟ್ಸಪ್ ರಸಪ್ರಶ್ನೆ ಕಾರ್ಯಕ್ರಮಕ್ಕೆ ಇಂದು ನಿವೃತ್ತ ಮುಖ್ಯ್ಯೋಪಾಧ್ಯಾಯರಾದ ಶ್ರೀ ಯಶೋಧರ ನಾರಲು ಇವರು ಅಜ್ಜಾವರದಲ್ಲಿ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಈ ಸಂದರ್ಭದಲ್ಲಿ ಪ್ರತಾಪ ಯುವಕ ಮಂಡಲ ಅಧ್ಯಕ್ಷ ಶ್ರೀ ಗುರುರಾಜ್,ಕಾರ್ಯದರ್ಶಿ ನವೀನ್ ಕುಮಾರ್, ಕೋಶಾಧಿಕಾರಿ ಶ್ರೀ ಲೋಕೇಶ್ ರಾವ್,ಗಿರಿಧರ,ಅಕ್ಷತ್ ಕುಮಾರ್,ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಉಪಾಧ್ಯಕ್ಷೆ ಶ್ರೀಮತಿ ಗೀತಾoಜಲಿ ಗುರುರಾಜ್, ಶ್ರೀಮತಿ ಮಾಲತಿ ಸೂರ್ಯ, ಗೌರವ ಸಲಹೆಗಾರರಾದ ಶ್ರೀಮತಿ ಜಯಲಕ್ಷ್ಮಿ ರಾವ್,ಕು.ಧರಿತ್ರಿ, ಜನಾರ್ದನ ನಾರಲು, ಶ್ರೀಮತಿ ವಸಂತಿ, ಕು.ಪ್ರಜ್ಞಾ ಜೀವೀತ್,ಧವನ್ ಇವರುಗಳು ಉಪಸ್ಥಿತರಿದ್ದರು.
ಅಜ್ಜಾವರ ; ಪಂಚಸಪ್ತತಿ 75 ದಿನಗಳ ರಸಪ್ರಶ್ನೆ ಕಾರ್ಯಕ್ರಮಕ್ಕೆ ಚಾಲನೆ



































