ದೇಶದಲ್ಲಿ ಕಳೆಗಟ್ಟಿದೆ ಹಬ್ಬಗಳ ರಾಜ ದೀಪಾವಳಿ ಹಬ್ಬದ ಸಂಭ್ರಮ

ದೀಪದಿಂದ ದೀಪಹಚ್ಚುವ ಮೂರು ದಿನಗಳ ಕಾಲದ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ.ದೀಪಾವಳಿ ಹಬ್ಬ ಆಚರಣಗೆ ದೇಶ ಸನ್ನದಗೊಂಡಿದೆ. ಎಲ್ಲೆಲ್ಲಿಯೂ ಹೊಸ ಬಟ್ಟೆ ಖರೀದಿವ ಬಗೆ ಬಗೆಯ ತಿಂಡಿ ತಿನಿಸು,ಮಕ್ಕಳ ಇಷ್ಟದ ವಿಭಿನ್ನ ರೀತಿಯ ಪಟಾಕಿಗಳು ಮನೆ ಸೇರಿವೆ.
.ದೂರದ ಊರಿನಲ್ಲಿ ಉದ್ಯೋಗದಲ್ಲಿರುವವರು ಹುಟ್ಟೂರಿನಲ್ಲಿ ಕುಟುಂಬದ ಜೊತೆ ಸೇರಿ ಹಬ್ಬದ ಸವಿ ಅನುಭವಿಸಲು ಊರು ಸೇರುವ ತವಕ.
ಹಿಂದೂ ಸಮಾಜಕ್ಕೆ ದೀಪಗಳ ಹಬ್ಬ ದೀಪಾವಳಿ ಶ್ರೇಷ್ಠ ಹಬ್ಬ.ಅನ್ಯ ಧರ್ಮದ ಮಿತ್ರರನ್ನು, ಬಂಧುಗಳನ್ನು, ನೆರೆಹೊರೆಯವರನ್ನು ಕರೆದು ಹಬ್ಬಡೂಟಕ್ಕೆ ಆಮಂತ್ರಿಸಿ ಸಹಬಾಳ್ವೆಗೆ ಹಬ್ಬದೂಟ ನೀಡುವ ಆನಂದ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹಿರಿಯರ ಕಾಲದಿಂದ ಪಾಲಿಸಿಕೊಂಡು ಬಂದಿರುವ ಹಬ್ಬಗಳಿಗೆ ಒಂದಲ್ಲ ಒಂದು ರೀತಿಯ ಇತಿಹಾಸಗಳು ಹಣಿದಿರುತ್ತದೆ.
ದೀಪಾವಳಿ ಹಬ್ಬವೂ ಐತಿಹಾಸಿಕ ಹಿನ್ನಲೆಯೊಳಗೆ ತನ್ನ ಛಾಪು ಮೂಡಿಸಿದೆ. ಸತ್ಯ, ನ್ಯಾಯ,ನೀತಿ, ಧರ್ಮ, ಪರೋಪಕಾರ,ಸಾಮರಸ್ಯ, ಸ್ಥಾಪನೆ,ಕೂಡಿ ಬಾಳುವುದಕ್ಕೆ ನಾಂದಿಯಾಗಿದೆ.
ದೀಪಾವಳಿಗೆ ದೀಪ ಹಚ್ಚುವುದೇ ಮೊದಲ ಆಧ್ಯತೆ ಏಕೆ ಎಂದರೆ ರಾಮಾಯಣ ಕಾಲದಲ್ಲಿ ಶ್ರೀ ರಾಮಚಂದ್ರ 14 ವರ್ಷ ವನವಾಸದಲ್ಲಿದ್ದ ಸಮಯದಲ್ಲಿ ತನ್ನ ಹೆಂಡತಿ ಸೀತಾಮಾತೆಯನ್ನು ರಾಕ್ಷಸ ರಾಜ ರಾವಣ ಅಪಹರಿಸ ಪರಿಣಾಮ ರಾಕ್ಷಸರನ್ನು ಸದೆಬಡಿದು, ಯುದ್ಧದಲ್ಲಿ ರಾವಣನ್ನು ಕೊಂದು ವಿಜಯಿಶಾಲಿಯಾಗಿ 14 ವರ್ಷ ಗಳ ವನವಾಸ ಮುಗಿಸಿ ಅಯೋಧ್ಯೆಗೆ ಬರುತ್ತಾನೆ. ಆತ ಅಯೋದ್ಯೆ ಸೇರುವ ಸಮಯ ರಾತ್ರಿಯಾಗಿದ್ದು ಆ ದಿನ ಅಮಾವಾಸ್ಯೆಯಾದ ಕಾರಣ ಕತ್ತಲೆಯಾಗಿರುತ್ತದೆ. ರಾಮನನ್ನು ಸ್ವಾಗತ ಮಾಡಲು ಅಯೋಧ್ಯೆ ಪ್ರಜೆಗಳು ಬೆಳಕಿಗೆ ದೀಪಗಳನ್ನು ಹಚ್ಚಿ ಹಿಡಿದು ರಾಮನಿಗೆ ಗೌರವ ತೋರಿದ ಸವಿನೆನಪು ಇಂದಿನ ತನಕ ದೀಪಾವಳಿ ಹಬ್ಬವಾಗಿ ಮಾರ್ಪಟ್ಟಿದೆ.
ಇನ್ನೊಂದು ಕಥೆ ಯಲ್ಲಿ ಹಿರಣ್ಯಾಕ್ಷ ರಾಕ್ಷಸ ಭೂದೇವಿಯನ್ನು ಅಪಹರಿಸಿ ಸಮುದ್ರದೊಳಗೆ ಬಚ್ಚಿಟ್ಟಿರುತ್ತಾನೆ. ಇದನ್ನು ತಿಳಿದ ವಿಷ್ಣು ವರಾಹ ರೂಪದಲ್ಲಿ ಸಮುದ್ರದೊಳಗೆ ಪ್ರವೇಶಿಸಿ ಹಿರಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ರಕ್ಷಣೆ ಮಾಡುತ್ತಾನೆ. ಇದರಿಂದ ಖುಷಿಗೊಂಡ ದೇವತೆಗಳು ದೀಪ ಹಚ್ಚಿ ಸಂತೋಷಪಟ್ಟ ದಿನವೇ ದೀಪಾವಳಿಯಾಗಿ ಆಚರಣೆಗೆ ಬಂತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅಲ್ಲದೇ ಭೂಲೋಕದಲ್ಲಿ ದಾನ, ಧರ್ಮ, ನ್ಯಾಯ, ನೀತಿಗೆ ಹೆಸರಾಗಿದ್ದ ಬಲಿ ಚಕ್ರವರ್ತಿಯ ಪರೀಕ್ಷೆ ಮಾಡಲು ಚಿಕ್ಕ ಬ್ರಾಹ್ಮಣ ಬಾಲಕನ ವೇಷದಲ್ಲಿ ವಾಮನ ರೂಪದಲ್ಲಿ ವಿಷ್ಣು ಬಲಿ ಚಕ್ರವರ್ತಿಯಲ್ಲಿ ಮೂರು ದಾನಗಳನ್ನು ಕೇಳುತ್ತಾನಪೆರಾಜೆ✍ಬೇಡಿಕೆಯ ಮೂರು ಹೆಜ್ಜೆಗೆ ಬಲಿ ಒಪ್ಪಿಗೆ ನೀಡಿದ ತಕ್ಷಣ ವಾಮನ ಮೂರ್ತಿ ತನ್ನ ದೇಹದ ಆಕಾರ ಹಿಗ್ಗಿಸಿ ಕೊಂಡು ತನ್ನ ಎರಡು ಹೆಜ್ಜೆಗೆ ಬಲಿ ಚಕ್ರವರ್ತಿಯ ಎಲ್ಲಾ ಭೂಮಿ ಆತನ ಪಾಲಿಗೆ ಸೇರುತ್ತದೆ ಮೂರನೇ ಎಲ್ಲಿ ಇಡಲಿ ಎಂದು ವಾಮನ ಕೇಳಿದಾಗ ಬಲಿ ಚಕ್ರವರ್ತಿ ಇದು ನನ್ನ ಸತ್ಯ ಪರೀಕ್ಷೆ ಮಾಡಲು ಬಂದಿರುವ ವಿಷ್ಣು ದೇವರು ಎಂದು ತಿಳಿದು ನಿನ್ನ ಕಂಡು ನಾನು ಧನ್ಯನಾದೆ ನಿನ್ನ ಮೂರನೇ ಹೆಜ್ಜೆ ನನ್ನ ತಲೆಯ ಮೇಲಿಡು ಎಂದು ಆಜ್ಞೆ ಮಾಡುತ್ತಾನೆ ತಲೆಯ ಮೇಲಿಟ್ಟ ಹೆಜ್ಜೆಗೆ ಬಲಿಚಕ್ರವರ್ತಿ ನೇರವಾಗಿ ಪಾತಾಳ ಲೋಕ ಸೇರುತ್ತಾನೆ. ವಿಷ್ಣು ಭಕ್ತ ಬಲಿ ಚಕ್ರವರ್ತಿ ವರ್ಷದ ಮೂರು ದಿನ ಭೂಲೋಕಕ್ಕೆ ಬಂದು ನಾಡಿನ ಪ್ರಜೆಗಳ ಯೋಗ ಕ್ಷೇಮ ನೋಡಿ ಹೋಗುವ ವರ ವಿಷ್ಣು ನೀಡಿದ ಬಲಿ ಚಕ್ರವರ್ತಿ ರಾಜನಿಗೆ ಬಲೇಂದ್ರ ಪೂಜೆ ನಡೆಯುತ್ತದೆ.

ಹಳ್ಳಿಗಳಲ್ಲಿ ಮನೆಯ ತುಳಸಿ ಕಟ್ಟೆಯ ಮುಂದೆ ಹಾಲೆ ಮರ ನೆಟ್ಟು ಅದಕ್ಕೆ ಚೆಂಡು ಹೂ, ಕೇದಗೆ,ಸೇವಂತಿಗೆ, ಹಿಂಗಾರ, ಕಾಡು, ತೋಟಗಳಲ್ಲಿ ಸಿಗುವ ಕೇನೆಕಾಯಿಯ ಬೀಜವನ್ನು ಹೂವಿನ ಮಾಲೆ ಮಾಡಿ ಶೃಂಗರಿಸಿ ಮೂರು ದಿವಸದ ಕಾಲ ಕೃಷಿಕರು ಶೃಂಗಾರ ಮಾಡಿದ್ದ ಹಾಲೆ ಮರದ ಎದುರು ದೀಪ ಹಚ್ಚಿ ಅವಲಕ್ಕಿ ಇನ್ನಿತರ ತರಕಾರಿ ಹಣ್ಣುಹಂಪಲು… ಇರಿಸಿ ಭಕ್ತಿಯಿಂದ ಬಲಿಚಕ್ರವರ್ತಿಯನ್ನು ಕೂಗಿ ಕರೆಯುವ ಪದ್ಧತಿ ಇದೆ.
ಹಿಂದಿನ ಕಾಲದಲ್ಲಿ ಹುಳಿ ಹಿಟ್ಟು, ಬಾಳೆ, ತೆಂಗಿನಕಾಯಿ ರಾಸಾಯನಕ್ಕೆ ಮೊದಲ ಆಧ್ಯತೆ ನೀಡಲಾಗುತ್ತಿತ್ತು. ಬಡತನವನ್ನು ಹಾಸುಹೊದ್ದು ಮಲಗಿದ್ದ ಹಳ್ಳಿಗರು ಅಂದು ಮಾಡಿ ತಿನ್ನುವ ಹಿಟ್ಟು ಅವರ ಬಲು ದೊಡ್ಡ ಆಹಾರದ ಪದ್ಧತಿ ಯಾಗಿತ್ತು.
ಹಳ್ಳಿ ಜೀವನ ಸುಧಾರಿಸಿದ ಮೇಲೆ ಮಾಂಸಹಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ.
ಈಗಲೂ ಹಳ್ಳಿಗಳಲ್ಲಿ ಹಿರಿಯರ ಸಮಾಧಿಗೆ ತೆರಳಿ ದೀಪ ಹಚ್ಚುವ ನಿಯಮ ಹಲವು ಭಾಗಗಳಲ್ಲಿ ಮುಂದುವರಿದಿದೆ. ಅಲ್ಲದೇ ಕುಟುಂಬದಲ್ಲಿ ಮರಣ ಹೊಂದಿದ ವ್ಯಕ್ತಿಗೆ ಮೊದಲ ವರ್ಷ ಆತನ ಪೋಟೊದ ಮುಂದೆ ಅವಲಕ್ಕಿ ರಾಸಾಯನ ಬೆಲ್ಲ ಬಾಳೆಹಣ್ಣು ಇರಿಸಿ ಗೌರವಿಸುವ ಪದ್ಧತಿ ಈಗಲೂ ಹಳ್ಳಿಗಳಲ್ಲಿ ಪಾಲನೆಯಲ್ಲಿದೆ.
ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಅಪಾಯದ ಪಟಾಕಿಯಿಂದ ದೂರವಿದ್ದು ಪರಿಸರಕ್ಕೆ ಹಾನಿಯಾಗದ ಹಸಿರು ಪಟಾಕಿ ಕಡೆ ಸಾರ್ವಜನಿಕರ ಒಲವು ಇದ್ದಲ್ಲಿ ಕ್ಷೇಮ.
ನಮ್ಮ ದೇಶ ದೀಪಾವಳಿಯ ಮೂರು ದಿನದ ಆಚರಣೆಗೆ 8000 ಸಾವಿರ ಕೋಟಿ ಹಣವನ್ನು ಕೇವಲ ಪಟಾಕಿ ಖರೀದಿಗೆ ಖರ್ಚು ಮಾಡುತ್ತಿದೆ. ಈ ರೀತಿಯ ಹಣಗಳು ದೀಪ, ಬಟ್ಟೆ, ಊಟ, ಪ್ರವಾಸ.. ಹೀಗೆ ಜೀವನಕ್ಕೆ ಅನುಕೂಲವಾಗುವ ಕಡೆ ವಿನಿಯೋಗವಾಗಲಿ ಎಂದು ಹಂಬಲಿಸೋಣ.ಹೀಗೆ ಮುಂದುವರಿಯಲಿ ಹಬ್ಬಗಳ ರಾಜ ದೀಪಾವಳಿಯ ಗೌಜಿ.
✍️ ಹರೀಶ್ ಕೆ.ಸಿ ಪೆರಾಜೆ

Leave a Comment

Your email address will not be published. Required fields are marked *

error: Content is protected !!
Scroll to Top