ಸಂಪಾಜೆ ಮಹಮ್ಮಾಯಿ ದೈವಸ್ಥಾನ ದೇವಸ್ಥಾನಕ್ಕೆ ಟಿ ಎಂ ಶಾಹಿದ್ ತೆಕ್ಕಿಲ್ ಭೇಟಿ

ಸಂಪಾಜೆ ಗ್ರಾಮದ ಅಲಡ್ಕ ಮಹಮ್ಮಾಯಿ ದೈವಸ್ಥಾನ ದೇವಸ್ಥಾನಕ್ಕೆ ಹಾಗೂ ಪರಿಶಿಷ್ಟ ಜಾತಿ ಕಾಲನಿಯ ಸಮುದಾಯ ಭವನಕ್ಕೆ ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಭೇಟಿ ನೀಡಿದರು
ಅಲಡ್ಕ ಮಹಮ್ಮಾಯಿ ದೈವಸ್ಥಾನ ದೇವಸ್ಥಾನ ಅಡಳಿತ ಮಂಡಳಿ ಹಾಗೂ ಕಾಲನಿ ನಿವಾಸಿಗಳು ಟಿ ಎಂ ಶಾಹಿದ್ ತೆಕ್ಕಿಲ್ ರವರಿಗೆ ಸನ್ಮಾನ ಮಾಡಿ ದೀಪಾವಳಿ ಶುಭಾಶಯ ಕೋರಿ ಸಮುದಾಯದ ಭವನದ ಮೆಲ್ಚಾವಣಿ ರಚಿನೆಗೆ ಅನುದಾನ ಹಾಗು ದೈವಸ್ಥಾನ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಮನವಿ ನೀಡಿದರು,
ಸನ್ಮಾನ ಹಾಗು ಮನವಿ ಸ್ವೀಕರಿಸಿ ಮಾತನಾಡಿದ ಟಿ ಎಂ ಶಾಹಿದ್ ತೆಕ್ಕಿಲ್ ರವರು ಸಾರ್ವಜನಿಕರ ಹಾಗೂ ಅಡಳಿತ ಮಂಡಳಿ ಮನವಿ ಸ್ವೀಕರಿಸಿ ಈ ಬಾಗದ ಜನರ ಪ್ರೀತಿ ವಿಶ್ವಾಸಕ್ಕೆ ನಾನು ಚಿರ ಋಣಿ ಯಾಗಿದ್ದೇನೆ ಕಾಲನಿ ಸಮುದಾಯ ಭವನ ಅಭಿವೃದ್ಧಿ ಹಾಗೂ ದೇವಸ್ಥಾನ ಜೀರ್ಣೋದ್ಧಾರಾ ಕೆಲಸಗಳಿಗೆ ಸರಕಾರದ ಮಟ್ಟದಲ್ಲಿ ಅನುದಾನ ಕೊಡಿಸುತ್ತೇನೆ ಹಾಗೂ ಈ ಕಾಲನಿ ಸಮುದಾಯ ಭವನ ಹಾಗೂ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ, ಯುವಕರು ಸಮಾಜ ಮುಖಿ ಕೆಲಸ ಮಾಡಿ ಉನ್ನತ ಹುದ್ದೆಗೆ ಏರಬೇಕು ಮತ್ತು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಡಳಿತ ಮಂಡಳಿಯ ಅಧ್ಯಕ್ಷರಾದ ಬಟ್ಯಪ್ಪ, ಮಲ್ಲ ಆಲಡ್ಕ, ಜಯ ಅಲಡ್ಕ,ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸಂಪಾಜೆ, ಪಂಚಾಯತ್ ಸದಸ್ಯರಾದ ವಿಜಯ ಅಲಡ್ಕ, ಗಣೇಶ, ವಿನೋದ್ ಸಂಪಾಜೆ, ರಮೇಶ್ ಆಲಡ್ಕ ಮತ್ತು ಮಂಜುಶ್ರೀ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಯ ಅಲಡ್ಕ ಸ್ವಾಗತಿಸಿ ಪಂಚಾಯತ್ ಸದಸ್ಯರಾದ ಜಿ. ಕೆ. ಹಮೀದ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top