ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕರೊಬ್ಬರು ಕುಸಿದು ಬಿದ್ದು ಮೃತ ಪಟ್ಟ ಘಟನೆ ಕಡಬ ತಾಲೂಕಿನ ಮರ್ದಾಳ ಸಮೀಪದ ಐತ್ತೂರು ಗ್ರಾಮದಿಂದ ವರದಿಯಾಗಿದೆ.
ಮ್ರತಪಟ್ಟ ವ್ಯಕ್ತಿಯನ್ನು ಸುರೇಶ ಎಂದು ಗುರುತಿಸಲಾಗಿದೆ.
ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾಗ ಕುಸಿದು ಬಿದ್ದರು.ಬಳಿಕ ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯಾಧಿಕಾರಿಯವರು ಪರಿಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿರುವುದಾಗಿ ತಿಳಿದು ಬಂದಿದೆ.
ಪತ್ನಿ ದಿವ್ಯ ಅವರು ಒಂದು ವಾರದ ಹಿಂದೆ ದೀಪಾವಳಿ ಹಬ್ಬದ ಪ್ರಯುಕ್ತ ಅವರ ಮಕ್ಕಳನ್ನು ಕರೆದುಕೊಂಡು ಸುಳ್ಯ ತಾಲೂಕಿನ ಕೂಟೇಲು ಎಂಬಲ್ಲಿಗೆ ಹೋಗಿದ್ದರು.
ರಬ್ಬರ್ ಟ್ಯಾಪರ್ ಕುಸಿದು ಬಿದ್ದು ಸಾವು

















