ಪ್ರಜಾಧ್ವನಿ ಕರ್ನಾಟಕ ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಇಂದು ಸುಳ್ಯದ ಶಿವಕೃಪಾ ಸಭಾ ಭವನದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಅಶೋಕ್ ಎಡಮಲೆ ಅವರು ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಖ್ಯಾತ ವ್ಯಂಗ್ಯಾ ಚಿತ್ರಕಾರ, ಅಂಕಣಕಾರ ದಿನೇಶ್ ಕುಕ್ಕುಜಡ್ಕ ಅವರು ಭಾಗವಹಿಸಿ ಮಾತನಾಡುತ್ತ ಕನ್ನಡ ಭಾಷೆಯ ಬಳಕೆ ಪ್ರಮಾಣ 3.73 ಪ್ರಮಾಣದಲ್ಲಿದ್ದು ಕನ್ನಡ ಭಾಷೆ ಭವಿಷ್ಯದಲ್ಲಿ ಇನ್ನಷ್ಟು ಅಪಾಯದಲ್ಲಿ ಸಿಲುಕದಂತೆ ಕನ್ನಡಿಗರು ಜಾಗೃತಿಯಾಗುವ ಕಾಲ ಬಂದಿದೆ. ಇಂಗ್ಲಿಷ್ ಬಲ ಕೈಯಾದರೆ ಕನ್ನಡ ಎಡ ಗೈಯಾಗಬೇಕು, ಮನೆಯ ಮಾತೃ ಭಾಷೆ ಅಂತರಂಗದ ಬಾಷೆಯಾಗಬೇಕು.
ಪ್ರಾಚೀನ ಕಾಲದಿಂದಲೂ ಕನ್ನಡ ರಾಜ್ಯಯಾಗಿದ್ದರೂ ನಾಡಿನ ಹಲವು ಪ್ರದೇಶಗಳಲ್ಲಿ 260 ಉಪ ಭಾಷೆಗಳು ಇದ್ದವು ಇವಗಳಲ್ಲಿ ಕೆಲವು ಭಾಷೆಗಳು ಈಗಾಗಲೇ ನಶಿಸಿದೆ. ಒಂದು ಭಾಷೆ ನಶಿಸಿಹೋದಲ್ಲಿ ಅಲ್ಲಿಯ ಸಂಸ್ಕೃತಿ ಜೊತೆಗೆ ನಾಗರಿಕತೆ ಕೂಡ ಕೊನೆಗೊಳ್ಳುತ್ತದೆ. ಹಾಗಾಗಿ ಕನ್ನಡದ ಜೊತೆಗೆ ಆಯಾಯ ಸಮುದಾಯದವರು ತಮ್ಮ ಭಾಷೆ ಮಾತನಾಡುವುದಕ್ಕೆ ಮುಜುಗರ ವ್ಯಕ್ತ ಪಡಿಸದೆ ಮನೆಗಲ್ಲಿ ಮಾತನಾಡುವ ಪದ್ಧತಿ ಕೊನೆಗಾಣಿಸಬಾರದು ಎಂದು ಸಲಹೆ ನೀಡಿದರು.
ದೇಶದ ಸ್ವತಂತ್ರ ಪೂರ್ವದಲ್ಲಿ ಹೊಯ್ಸಳರ ಆಡಳಿತದಲ್ಲಿ ತುಳುಭಾಷೆ ಹೆಚ್ಚಿನ ಬಳಕೆಯಲ್ಲಿದ್ದ ವಿಚಾರ ನೆನಪಿಸಿದರು.
ಅಧ್ಯಾಪಕ ಪೂವಪ್ಪ ಕಾಣಿಯೂರು. ಕೆ. ಜಾನಿ. ನ್ಯಾಯಾವಾದಿ ಕೆ. ಪಿ. ಮೋಹನ್, ಗೋಪಾಲ್ ಪೆರಾಜೆ ಮಾತನಾಡಿದರು. ಆರಂಭದಲ್ಲಿ ಭರತ್ ಕುಕ್ಕುಜಡ್ಕ ಪ್ರಾಸ್ತವಿಕ ಭಾಷಣ ಗೈದರು. ಸಮಾರಂಭ ದಲ್ಲಿ ದಿನೇಶ್ ಕುಕ್ಕುಜಡ್ಕ ಅವರನ್ನು ಪ್ರಜಾಧ್ವನಿ ಕರ್ನಾಟಕ ವತಿಯಿಂಸನ್ಮಾನಿಸಲಾಯಿತು. ಅವರು ಸಂವಿಧಾನ ಪೀಠಿಕೆ ಪ್ರಮಾಣವಚನ ಭೋ ಧಿಸಿದರು.ಪ್ರಮೀಳಾ ಪೆಲ್ತಡ್ಕ ಅವರು ಸ್ವಾಗತಿಸಿದರು. ಸಾಹುಕಾರ ಅಚ್ಚು ಅವರು ವಂದಿಸಿದರು. ಟಿ. ವೈ. ಲ್ಯೂಕಾಸ್, ವಸಂತ ಪೆಲ್ತಡ್ಕ ಅವರು ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಕೆ. ಸಿ.. ಹರೀಶ್. ಪೆರಾಜೆ, ಸಿ. ಪಿ. ಜಯರಾಮ, ಗಂಗಾಧರ ಉಬರಡ್ಕ, ರಾಧಾಕೃಷ್ಣ ಪಾರಿವಾರಕಾನ, ಕೇಶವ ಪಾಟಾಳಿ, ಮಹೇಶ್ ಬೆಳ್ಳಾರ್ಕರ್ಸನ್ಮಾನಿಸಲಾಗಿತ್ಎ.ಕೆ. ಹಿಮಕರ ಮೊದಲಾದವರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top