ಗೋಮಾತೆ ಹಿಂದುಗಳ ಭಾಗ್ಯ ಲಕ್ಷ್ಮಿ : ಡಾ.ರವೀಶ್ ಪಡುಮಲೆ

ಗೋಮಾತೆಗೆ ನಮ್ಮ ಹಿಂದು ಧರ್ಮದಲ್ಲಿ ಪೂಜನೀಯ ಭಾವನೆಯಿದ್ದು ಗೋಮಾತೆ ಹಿಂದುಗಳ ಭಾಗ್ಯಲಕ್ಷ್ಮಿ ಎಂದು ದೈವ ನರ್ತಕರು ಹಾಗೂ ಉಪನ್ಯಾಸಕ ಡಾ.ರವೀಶ್ ಪಡುಮಲೆ ಹೇಳಿದರು.
ವಿಶ್ವ ಹಿಂದು ಪರಿಷತ್, ಭಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ವತಿಯಿಂದ ಸುಳ್ಯ ಚೆನ್ನಕೇಶವ ದೇವಳದ ವಠಾರದಲ್ಲಿ ನ.1ರಂದು ನಡೆದ ಸಾರ್ವಜನಿಕ ಗೋಪೂಜೆ ಹಾಗೂ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ದಿಕ್ಸೂಜಿ ಭಾಷಣ ಮಾಡಿದರು.
ಹಿಂದು ಧರ್ಮಕ್ಕೆ ಆದಿ ಮತ್ತು ಅಂತ್ಯಗಳಿಲ್ಲ.ಧರ್ಮದ ರಕ್ಷಣೆಗಾಗಿ ರಾಷ್ಡ್ರೀಯ ಸ್ವಯಂ ಸೇವಕ ಸಂಘ ವಿಶ್ವಹಿಂದು ಪರಿಷತ್ ಭಜರಂಗದಳ,ಮಾತ್ರ ಶಕ್ತಿ ದುರ್ಗಾ ವಾಹಿನಿಗಳು ಕೆಲಸ ಮಾಡುತ್ತಿವೆ ಎಂದು ಹೇಳಿದರು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ನಗರ ಪಂಚಾಯತ್‌ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ ಉದ್ಘಾಟಿಸಿದರು. ವಿಶ್ವ ಹಿಂದು ಪರಿಷದ್ ಸುಳ್ಯ ನಗರ ಅಧ್ಯಕ್ಷ ಉಪೇಂದ್ರ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಗಂಭೀರ್ ನಾಯಕ್‌ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉದ್ಯಮಿ ಪ್ರಶಾಂತ್, ಭಜರಂಗದಳ ಪುತ್ತೂರು ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ರೂಪೇಶ್‌ ಪೂಜಾರಿಮನೆ, ವಿಶ್ವ ಹಿಂದು ಪರಿಷದ್ ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ, ಭಜರಂಗದಳ ಸಹ ಸಂಚಾಲಕ ವರ್ಷಿತ್ ಚೊಕ್ಕಾಡಿ, ಭಜರಂಗದಳ ಗೋರಕ್ಷಾ ಪ್ರಮುಖ್ ವಿನಯ್ ಐವರ್ನಾಡು, ಬಜರಂಗಳ ಸುಳ್ಯ ನಗರ ಸಂಚಾಲಕ ರಾಜೇಶ್ ಕಲ್ಲುಮುಟ್ಟು ಉಪಸ್ಥಿತರಿದ್ದರು. ಶುಭಾ ಪ್ರಾರ್ಥಿಸಿದರು.ತೀರ್ಥೇಶ್ ಯಾದವ್ ನಾರ್ಣಕಜೆ ಕಾರ್ಯಕ್ರಮ ನಿರೂಪಿಸಿದರು‌.
ಮೊದಲಿಗೆ ಕುಣಿತ ಭಜನೆ ನಡೆಯಿತು.ಬಳಿಕ ಗೋಪೂಜೆ ನಡೆಯಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top