ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕ ಆಶ್ರಯದಲ್ಲಿ ಅಮೃತ ಮಹೋತ್ಸವ ಸಮಿತಿ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಸಹಕಾರದೊಂದಿಗೆ ದಿ. ಯು. ಸು. ಗೌ ಸ್ಮರಣಾರ್ಥ ಸುಳ್ಯ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ 2025 ನವೆಂಬರ್ 2ರಂದು
ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಕವಿಗೋಷ್ಠಿ ನಡೆಯಿತು.ದೀಪಾಶ್ರೀ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.ನವ್ಯಶ್ರೀ ದೀಪಾವಳಿ,ತನ್ವಿ ಹೊಸ್ತಿಲು ದಾಟದವರು,ದೀಕ್ಷಿತಾ ಕೆ.ಆರ್ ಕರಗುತ್ತಿದೆ ಕಾನನ,ಅಂಜನಾ ಬಿ.ವಿ ನೆನಪಿನ ಹನಿಗಳು,ದೇಶಿತಾ ಹೆಚ್.ಆರ್ ಬದುಕಿನ ಪಾಠ,ಸಿಂಚನ ಪಿ.ಯು ನನ್ನವರು ನನ್ನವರಲ್ಲ,ದುಶ್ಯಂತ್ ನನ್ನ ದೇಶ,ಸುಜನ್ ಎ.ಜೆ ಕನ್ನಡ ನಾಡು,ಸಂಜನಾ ಯು.ಕೆ ತಮ್ಮ ಇಷ್ಟ,ಗುರುಪ್ರಿಯಾ ಸೂರನು ಬಾರದಿದ್ದರೆ ,ಫಾತಿಮಾ ಸೈಮಾ ಮರೆಯಲಾಗದ ಮುನ್ಸೂಚನೆ ಎಂಬ ಸ್ವರಚಿತ ಕವನಗಳನ್ನು ವಾಚಿಸಿದರು.
ವಿದ್ಯಾರ್ಥಿಗಳಾದ ಹಂಸಿಕಾ,ತ್ರಷಾ ನಿರೂಪಿಸಿದರು,ಶರಣ್ಯ ಸ್ವಾಗತಿಸಿದರು.ಭವ್ಯ ವಂದಿಸಿದರು.
ಸುಳ್ಯ : ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ,ವಿದ್ಯಾರ್ಥಿ ಕವಿಗೋಷ್ಠಿ

















