ನ.16ಕ್ಕೆ ವಳಂಬೆಯಲ್ಲಿ ಪಂಜ ಹೋಬಳಿ ಮಟ್ಟದ ಅದ್ದೂರಿ ಸಾಹಿತ್ಯ ಸಮ್ಮೇಳನ

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಪಂಜ ಹೋಬಳಿ ಘಟಕದ ಆಶ್ರಯದಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ ನ.16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ನಡೆಯಲಿದೆ ಎಂದು
ಪಂಜ ಹೋಬಳಿ ಸಾಹಿತ್ಯ ಘಟಕ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ,ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ,ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅವರು ನ.8ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ‌.
ಪಂಜ ಹೋಬಳಿ ಘಟಕದ ಅಧ್ಯಕ್ಷ
ಹಿರಿಯ ಸಾಹಿತಿ, ಸಂಶೋಧಕರಾದ ಎ.ಕೆ.ಹಿಮಕರ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಿಗ್ಗೆ 9:00ಗೆ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯ. ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ. ಬೆಳ್ಯಪ್ಪ ಗೌಡರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಕಮಲೆ ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ .ಸುಳ್ಯ ಶಾಸಕಿ ಕು.ಭಾಗಿರಥಿ ಮುರುಳ್ಯ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ, ಸುಳ್ಯ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪೂ.10ರಿಂದ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಾಹಿತಿ, ಸಂಶೋಧಕರಾದ ಡಾ. ಪುರುಷೋತ್ತಮ ಕೆ ವಿ ಕರಂಗಲ್ಲು ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ಶಾಸಕಿ ಕು.ಭಾಗೀರಥಿ ಮುರುಳ್ಯ ಹೊಸ ಕೃತಿ ಬಿಡುಗಡೆ ಮಾಡಲಿದ್ದಾರೆ. ಆಶಯ ನುಡಿಯನ್ನು ಡಾ.ಎಂ ಪಿ ಶ್ರೀನಾಥ್ ಮತ್ತು ಚಂದ್ರಶೇಖರ ಪೇರಾಲು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷ ಸುಮಿತ್ರ ಮೂಕಮಲೆ, ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ಭಾಗವಹಿಸಲಿದ್ದಾರೆ.ಪತ್ರಕರ್ತರಾದ ಮಹೇಶ್ ಪುಚ್ಚಪ್ಪಾಡಿ ಸಂಪಾದಕತ್ವದ ಸಂತೆಯಲ್ಲಿ ಸಾಗುತ್ತಿರುವ ನಾವು ಪುಸ್ತಕ ಬಿಡುಗಡೆಗೊಳ್ಳಲಿದೆ .
ಮಧ್ಯಾಹ್ನ 12 ರಿಂದ ವಿಚಾರಗೋಷ್ಠಿ ನಡೆಯಲಿದೆ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯ ಶಿಕ್ಷಕರಾದ ಶಿವರಾಮ ಶಾಸ್ತ್ರಿ ಆಚಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ವಿಜ್ಞಾನಿ ಡಾ. ಬಿ.ಕೆ. ವಿಶು ಕುಮಾರ್,ಮ್ಯಾನೇಜ್ ಮೆಂಟ್ ಕನ್ಸಲ್ವೆಂಟ್ ಧೀರೇನ್ ಪರಮಲೆ ವಿಚಾರ ಮಂಡಿಸಲಿದ್ದಾರೆ.
ಬಳಿಕ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2ರಿಂದ ವಿದ್ಯಾರ್ಥಿ ಕವಿಗೋಷ್ಠಿ ನಡೆಯಲಿದೆ. 3ರಿಂದ ಸಮಾರೋಪ ಸಮಾರಂಭ ಮತ್ತು ಸಿರಿಗನ್ನಡ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಮುಖ್ಯ ಗುರುಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿ ಸಮಾರೋಪ ಭಾಷಣ ಮಾಡಲಿದ್ದಾರೆ. ಸಹಕಾರ ರತ್ನ ಪುರಸ್ಕೃತರಾದ ನಿತ್ಯಾನಂದ ಮುಂಡೋಡಿ,ಸಾಮಾಜಿಕ ಮುಖಂಡರಾದ ಚಂದ್ರಶೇಖರ ತಳೂರು ಸಾಧಕರನ್ನು ಸನ್ಮಾನಿಸಲಿದ್ದಾರೆ ಈ ಸಂದರ್ಭದಲ್ಲಿ ಎಚ್ ಬಿ ರಾಧಾಕೃಷ್ಣ( ಕ್ರೀಡೆ),ವಸಂತಕುಮಾರ್ ಕಮಿಲ ಬೆಂಗಳೂರು(ಸಮಾಜಸೇವೆ), ಉಮೇಶ ಬಿಳಿಮಲೆ (ಸಾಹಿತ್ಯ)ಶಿವರಾಮ ಕುಂಟ್ಟಿ( ಸಾಹಿತ್ಯ), ವೇಣುಗೋಪಾಲ ದೇರಪ್ಪಜ್ಜನ ಮನೆ( ಕ್ರೀಡೆ ಮತ್ತು ಕಲಾಪೋಷಕ), ಶಿವರಾಮ ಕಲ್ಮಡ್ಕ(ರಂಗಭೂಮಿ),ಬೊಳಿಯ ಅಜಿಲ ಮತ್ತು ಚಿದಾನಂದ ಅಡ್ಡನಪಾರೆ( ಭೂತಾರಾಧನೆ),ಕು. ರಚನಾ ಚಿದ್ದಲ್ಲು( ವಿದ್ಯಾರ್ಥಿ ಪ್ರತಿಭೆ-ಕಲೆ) ಉಲ್ಲಾಸ್ ಕಜೋಡಿ ಮತ್ತು ನಿರಂಜನ ಕಡ್ತಾರ್ ( ಯುವ ಪ್ರತಿಭೆ)ದೇವಿ ಪ್ರಸಾದ್ (ಯುವ ಉದ್ಯಮಿ)ರಿಗೆ ಸಿರಿಗನ್ನಡ ಸನ್ಮಾನ ನಡೆಯಲಿದೆ. ಅಮರ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು, ಯುವ ತೇಜಸ್ಸು ಟ್ರಸ್ಟ್ ಪಂಜ, ಪುಸ್ತಕದ ಗೂಡು ಹಾಲೆಮಜಲು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು, ವಿಪತ್ತು ನಿರ್ವಹಣಾ
ತಂಡ ಗುತ್ತಿಗಾರು ಇವರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು.
1993 ರಲ್ಲಿ ಪಂಜದಲ್ಲಿ ನಡೆದ ಬಳಿಕ ಇದುವರೆಗೆ ಹೋಬಳಿ ಸಾಹಿತ್ಯ ಸಮ್ಮೇಳನ ನಡೆದಿರಲಿಲ್ಲ. ಈ ಕಾರ್ಯಕ್ರಮ ಯಶಸ್ವಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ನಡೆಯಲು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.
ಸಾಹಿತ್ಯ ಪರಿಷತ್ತು ದಾನಿಗಳ ಸಹಕಾರದಿಂದ ನಿರಂತರ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ಹೋಬಳಿ ಸಾಹಿತ್ಯ ಸಮ್ಮೇಳನ ಯಶಸ್ಸಿಗಾಗಿ ಸಂಘಟನಾ ಸಮಿತಿಯವರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ.
ಡಿಸೆಂಬರ್ ಅಥವಾ ಜನವರಿಯಲ್ಲಿ ತಾಲೂಕಿನ ಹತ್ತು ಸಾಹಿತಿಗಳ ಮತ್ತು 3 ಸಾಧಕರ ಪರಿಚಯಾತ್ಮಕ ಲೇಖನಗಳ ಪುಸ್ತಕಗಳು ಹೊರಬರಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಪದಾಧಿಕಾರಿಗಳಾದ ಕೇಶವ ಹೆಚ್.ಬಿ.ಹೊಸೋಳಿಕೆ, ವೆಂಕಪ್ಪ ಕೇನಾಜೆ, ಕುಶಾಲಪ್ಪ ತುಂಬತ್ತಾಜೆ, ಪ್ರಭಾಕರ ಕಿರಿಭಾಗ, ಯೋಗೀಶ್ ಹೊಸೋಳಿಕೆ, ಸುಳ್ಯ ಹೊಬಳಿ ಸಾಹಿತ್ಯ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ,ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top