ಶಾಸ್ತ್ರಸಮ್ಮತ ಸಂಪ್ರದಾಯದಲ್ಲಿ ಧರ್ಮಸ್ಥಳದ ಕೆರೆಕಟ್ಟೆ ಉತ್ಸವ ಸಂಪನ್ನ

ಕಾರ್ತಿಕ ಮಾಸದ ಪವಿತ್ರ ಮಂಗಳ ದಿನದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥಸ್ವಾಮಿಯ ಹೊಸಕಟ್ಟೆ ಉತ್ಸವದಿಂದ ಲಕ್ಷದೀಪೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ರಾತ್ರಿ ಭಕ್ತಿಭಾವದಿಂದ ಆರಂಭಗೊಂಡವು.
ದೀಪೋತ್ಸವದ ಎರಡನೇ ದಿನವಾದ ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೆರೆಕಟ್ಟೆ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಮಂಜುನಾಥನಿಗೆ ಪೂಜೆ ಸಲ್ಲಿಸಿ ವಿವಿಧ ವೈದಿಕ ಕ್ರಮಗಳೊಂದಿಗೆ ಉತ್ಸವಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ವಿರಾಜಮಾನಗೊಳಿಸಿ ದೇವಾಲಯಕ್ಕೆ ೧೬ ಸುತ್ತು ಪ್ರದಕ್ಷಿಣೆ ಬರಲಾಯಿತು.
ದೇವಸ್ಥಾನದ ಪ್ರಾಂಗಣದಲ್ಲಿ ಸ್ವಾಮಿಗೆ ಪೂಜೆ ನಡೆದು ಸಂಪ್ರದಾಯದಂತೆ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ತರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು ಸೇರಿ ಸರ್ವವಾದ್ಯಗಳೊಂದಿಗೆ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಕ್ಕಿಯಲ್ಲಿ ಕೂರಿಸಲಾಯಿತು. ತದನಂತರ ಎದುರಿನ ಕೆರೆಯಲ್ಲಿ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಲಾಯಿತು. ತಮಟೆ ವಾದ್ಯ, ಸಮ್ಮುಖದಲ್ಲಿ ನೆರವೇರಿತು. ದೇವರಿಗೆ ಅಷ್ಟ ಸೇವೆಯನ್ನು ಒಳಗೊಂಡ ಚತುರ್ವೇದಗಳ ಪಠಣೆ, ಸಂಗೀತ, ಮೌರಿ, ನೃತ್ಯ ಮತ್ತು ಸರ್ವವಾದ್ಯಗಳನ್ನು ಮುಗಿಸಿದಾಗ ಪೂಜೆ ಸಂಪನ್ನವಾಯಿತು.
ನಂತರ ದೇವರನ್ನು ಬೆಳ್ಳಿರಥದಲ್ಲಿ ಕೂರಿಸಿ, ಮಂಗಳಾರತಿ ಬೆಳಗಿ ದೇಗುಲಕ್ಕೆ ಕರೆತರುವ ಮೂಲಕ ಕೆರೆಕಟ್ಟೆ ಉತ್ಸವ ಶ್ರದ್ಧಾ ಭಕ್ತಿಯಿಂದ ಸಂಪನ್ನವಾಯಿತು. ವೈಭವೋಪೇತ ಉತ್ಸವವನ್ನು ಕಣ್ತುಂಬಿಕೊಂಡ ಪುಟಾಣಿ ಮಕ್ಕಳ ಕಂಗಳು, ಹಿರಿಯರ ಮನಗಳು ಹರ್ಷದಿಂದ ತುಂಬಿಕೊಂಡವು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top