ಗ್ರಾಮ ಮಟ್ಟದಲ್ಲಿ ಸಾಹಿತ್ಯ ಕಾರ್ಯಕ್ರಮಗಳು ನಡೆದ್ದಾಗ ಸಾಹಿತ್ಯ ಸಮ್ಮೇಳನಗಳ ವಿಸ್ತಾರಣಾರೂಪ ಫಲಶ್ರುತಿ
ಹೆಚ್ಚುತ್ತದೆ ಎಂದು ಬೆಳ್ತಂಗಡಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರುಗಳಾದ ರಾಮಕೃಷ್ಣ ಭಟ್ ಚೊಕ್ಕಾಡಿ ಹೇಳಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಪಂಜ ಹೋಬಳಿ ಸಾಹಿತ್ಯ ಪರಿಷತ್ ಘಟಕ, ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದ ಸರೋಜಿನಿ ಗಂಗಯ್ಯ ಮುಳುಗಾಡು ವೇದಿಕೆ,ಯು.ಸು ಗೌಡ ಸಭಾಂಗಣದಲ್ಲಿ ನ.16ರಂದು ನಡೆದ ಪಂಜ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಸಿರಿಗನ್ನಡ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಇಂದು ಆಂತರಿಕ ವಿಕಾಸ ಇಲ್ಲ.ಸಂವೇದನಾಶೀಲತೆಗೆ ಬೆಲೆ ಇಲ್ಲ.ಆಂತರಿಕ ಅವಲೋಕನಕ್ಕೆ ಅವಕಾಶ ಇಲ್ಲ.ಆಂತರಿಕ ವಿಕಾಸ ಇಲ್ಲದ ಶಿಕ್ಷಣ ಶಿಕ್ಷಣವಾಗುವುದು ಹೇಗೆ? ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುವುದೇ ಇಂದಿನ ಶಿಕ್ಷಣ ಆಗಿದೆ.ಶಿಕ್ಷಣ ಕ್ಷೇತ್ರ ಈಗ ಹಾಳಾಗಿದೆ.ಇದನ್ನು ನಮ್ಮ ಆಡಳಿತಗಾರರು ಹಾಳು ಮಾಡಿದ್ದಾರೆ.ಆಂತರಿಕ ಅವಲೋಕನಕ್ಕೆ ಸಾಹಿತ್ಯ ಬೇಕು.ಸಾಹಿತ್ಯ ಸಮ್ಮೇಳನಗಳಿಗೆ ದುಂದು ವೆಚ್ಚ ಮಾಡಬಾರದು.ಸಂಭಾವನೆ ಕೇಳುವ ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನಕ್ಕೆ ಕರೆಯಬಾರದು.
ಸಾಹಿತ್ಯ ಸಮ್ಮೇಳನಗಳಿಗೆ ಮೊದಲು ಅನುದಾನ ಬರುತ್ತಿತ್ತು.ಈಗ ಅನುದಾನ ಬಾರದೆ ಸಾಹಿತ್ಯಕ್ಕೆ ಯಾವುದೇ ಗ್ಯಾರಂಟಿ ಇಲ್ಲದಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ| ಎಂ.ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನಾಧ್ಯಕ್ಷರಾದ ಎ.ಕೆ ಹಿಮಕರ ಅವರು ಸಮ್ಮೇಳನಾಧ್ಯಕ್ಷರ ನುಡಿಯನ್ನು ನುಡಿದರು.
ನಂತರ ಕ್ರೀಡಾ ಕ್ಷೇತ್ರದಲ್ಲಿ ಎಚ್.ಬಿ ರಾಧಾಕೃಷ್ಣ, ಸಮಾಜಸೇವಾ ಕ್ಷೇತ್ರದಲ್ಲಿ ವಸಂತಕುಮಾರ್ ಕಮಿಲ, ಸಾಹಿತ್ಯ ಕ್ಷೇತ್ರದಲ್ಲಿ ಉಮೇಶ್ ಬಿಳಿಮಲೆ ಹಾಗೂ ಶಿವರಾಮ ಕುಂಟ್ಟಿ, ಕ್ರೀಡೆ ಹಾಗೂ ಕಲಾ ಪೋಷಕ ಕ್ಷೇತ್ರದಲ್ಲಿ ವೇಣುಗೋಪಾಲ್ ದೇರಪ್ಪಜ್ಜನಮನೆ, ರಂಗಭೂಮಿ ಕ್ಷೇತ್ರದಲ್ಲಿ ಶಿವರಾಮ ಕಲ್ಮಡ್ಕ, ಭೂತಾರಾಧನೆ ಕ್ಷೇತ್ರದಲ್ಲಿ ಬೊಳಿಯ ಅಜಿಲ ಹಾಗೂ ಚಿದಾನಂದ ಅಡ್ಡನಪಾರೆ, ವಿದ್ಯಾರ್ಥಿ ಕಲಾ ಪ್ರತಿಭೆ ಕ್ಷೇತ್ರದಲ್ಲಿ ರಚನಾ ಚಿದ್ದಲ್ಲು, ಯುವ ಪ್ರತಿಭೆ ಕ್ಷೇತ್ರದಲ್ಲಿ ಉಲ್ಲಾಸ್ ಕಜೋಡಿ ಹಾಗೂ ನಿರಂಜನ್ ಕಡ್ಡಾರು, ಯುವ ಉದ್ಯಮಿ ಕ್ಷೇತ್ರದಲ್ಲಿ ದೇವಿಪ್ರಸಾದ್ ಚಿಕ್ಕುಳಿ ಹಾಗೂ ಸಮಾಜ ಸೇವಾ ತಂಡಗಳಾದ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು, ಯುವ ತೇಜಸ್ಸು ಟ್ರಸ್ಟ್(ರಿ.) ಪಂಜ, ಪುಸ್ತಕ ಗೂಡು ಹಾಲೆಮಜಲು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಹಾಗೂ ವಿಪತ್ತು ನಿರ್ವಹಣಾ ತಂಡ ಗುತ್ತಿಗಾರು ಇವರಿಗೆ “ಸಿರಿಗನ್ನಡ ಸನ್ಮಾನ” ನಡೆಯಿತು.
ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲ್ ,ಶಿವರಾಮ ಮಾಸ್ತರ್ ಪಂಜ ಹೋಬಳಿ ಸಾಹಿತ್ಯ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ,ಪ್ರಭಾಕರ ಕಿರಿಭಾಗ,ಕುಶಾಲಪ್ಪ ತುಂಬತ್ತಾಜೆ,ಯೋಗೀಶ್ ಹೊಸೊಳಿಕೆ,ಸನತ್ ಮುಳುಗಾಡು,ಲೋಕೇಶ್ವರ ಡಿ.ಆರ್ ಗಂಗಾಧರ ದಂಬೆಕೋಡಿ ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು.
ರೂಪವಾಣಿ,ಹಾಗೂ ಬಿಟ್ಟಿ.ಬಿ ನೆಡುನಿಲಂ ಸನ್ಮಾನಿತರ ಪರಿಚಯ ಮಾಡಿದರು. ರಾಮಚಂದ್ರ ಪಳಂಗಾಯ ಸ್ವಾಗತಿಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿ ವೆಂಕಪ್ಪ ಕೇನಾಜೆ ವಂದನಾರ್ಪಣೆ ಮಾಡಿದರು.
ಗ್ರಾಮ ಮಟ್ಟದಲ್ಲಿ ಸಾಹಿತ್ಯ ಕಾರ್ಯಕ್ರಮಗಳು ನಡೆದ್ದಾಗ ಸಾಹಿತ್ಯ ಸಮ್ಮೇಳನಗಳ ವಿಸ್ತಾರಣಾರೂಪ ಫಲಶ್ರುತಿ ಹೆಚ್ಚುತ್ತದೆ : ರಾಮಕೃಷ್ಣ ಭಟ್ ಚೊಕ್ಕಾಡಿ

















