ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಆಯೋಜಿಸುವ ಬಗ್ಗೆ ಅಮರಮೂಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಘ-ಸಂಸ್ಥೆಗಳ , ಸಾಹಿತ್ಯಾಭಿಮಾನಿಗಳ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಮಾಲೋಚನಾ ಸಭೆ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲುರವರು ವಹಿಸಿ ಸಾಹಿತ್ಯ ಸಮ್ಮೇಳನದ ರೂಪು-ರೇಷೆಗಳ ಬಗ್ಗೆ ವಿವರಿಸಿದರು..
ವೇದಿಕೆಯಲ್ಲಿ ಚೊಕ್ಕಾಡಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು, ಅಮರಮೂಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಪ್ರಸಾದ ಮಾಡಬಾಕಿಲು,ದಿವ್ಯ ಮಡಪ್ಪಾಡಿ,ಕ.ಸಾ.ಪ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ.ಕೆ,ಗೌರವ ಕೋಶಾಧಿಕಾರಿ ದಯಾನಂದ ಆಳ್ವ,ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ,ಹಿರಿಯ ಕಲಾ ಪೋಷಕರಾದ ಆನೆಕಾರ ಗಣಪಯ್ಯ, ಚೊಕ್ಕಾಡಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸಂಕೀರ್ಣ.ಎ.ಎಲ್ ಉಪಸ್ಥಿತರಿದ್ದರು.ಸಾಹಿತ್ಯ ಸಮ್ಮೇಳನದ ಆಯೋಜನೆಯ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.ಗ್ರಾಮದ ಸಂಘ ಸಂಸ್ಥೆಗಳ ಹಾಗೂ ಕನ್ನಡಾಭಿಮಾನಿಗಳ ಸಹಕಾರದೊಂದಿಗೆ ದಶಂಬರ್ 30ರಂದು ಚೊಕ್ಕಾಡಿ ಪ್ರೌಢಶಾಲಾ ಆವರಣದಲ್ಲಿ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವುದೆಂದು ಸರ್ವಾನುಮತದಿಂದ ನಿರ್ಧರಿಸಲಾಯಿತು.
ನಂತರ ಸಮ್ಮೇಳನದ ಯಶಸ್ಸಿಗೆ ಅನುಕೂಲವಾಗಲು ಸ್ವಾಗತ ಸಮಿತಿಯನ್ನು ರಚಿಸಲಾಯಿತು.ಮುಂದಿನ ದಿನಗಳಲ್ಲಿ ಇತರ ಸಮಿತಿಗಳನ್ನು ರಚಿಸಿಕೊಂಡು ಮುಂದುವರಿಯುವುದೆಂದು ನಿರ್ಧರಿಸಲಾಯಿತು.ತೇಜಸ್ವಿ ಕಡಪಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಕೀರ್ಣ.ಎ.ಎಲ್ ಧನ್ಯವಾದಗೈದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಕು.ಭಾಗೀರಥಿ ಮುರುಳ್ಯ,ಶಾಸಕರು.ಅಧ್ಯಕ್ಷರಾಗಿ ರಾಧಾಕೃಷ್ಣ ಬೊಳ್ಳೂರು
ಕಾರ್ಯಾಧ್ಯಕ್ಷರಾಗಿ ಕೃಷ್ಣಪ್ರಸಾದ್ ಮಾಡಬಾಕಿಲು,
ಉಪಾಧ್ಯಕ್ಷರಾಗಿ ಆಣ್ಣಾಜಿ ಗೌಡ ಪೈಲೂರು, ಪ್ರಧಾನ ಕಾರ್ಯದರ್ಶಿಯಾಗಿ ತೇಜಸ್ವಿ ಕಡಪಳ ಜತೆ ಕಾರ್ಯದರ್ಶಿಯಾಗಿ ಸಂಕೀರ್ಣ.ಎ.ಎಲ್
ಚೈತನ್ಯ.ಕೆ.ಎ ಕೋಶಧಿಕಾರಿಯಾಗಿ ಅರುಣಕುಮಾರ್ ಮುಂಡಾಜೆ ಗೌರವ ಸಲಹೆಗಾರರಾಗಿ ಆನೆಕಾರ ಗಣಪಯ್ಯ,ಎಂ.ಟಿ.ಶಾಂತಿಮೂಲೆ,ಲಕ್ಷ್ಮೀಶ ಚೊಕ್ಕಾಡಿ, ಎಸ್.ಅಂಗಾರ,ಜಯಪ್ರಕಾಶ್ ರೈ ಚೊಕ್ಕಾಡಿ,ಎ.ಕೆ.ಹಿಮಕರನ್ನು ಆಯ್ಕೆ ಮಾಡಲಾಯಿತು.ಸ್ವಾಗತ ಸಮಿತಿ ಸದಸ್ಯರಾಗಿ
ಜಯಶಿವ ಮಡಪ್ಪಾಡಿ,ವೆಂಕಟ್ರಮಣ ಇಟ್ಟಿಗುಂಡಿ,ತಿರುಮಲೇಶ್ವರ ದಂಬೆತೋಟ,ಯಾದವೇಂದ್ರ ಕಡಪಳ,ಹೇಮಾವತಿ ತಂಟೆಪ್ಪಾಡಿ,ಸುಲೋಚನ.ಎಂ,ರೂಪವಾಣಿ.ಬಿ,ಶ್ಯಾಮಲ ಆನೆಕಾರ್,ಜನಾರ್ಧನ ಪೈಲೂರು, ಪ್ರವೀಣಕುಮಾರ ಮಡಪ್ಪಾಡಿ ಆಯ್ಕೆಯಾದರು.
ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಸುಳ್ಯ ತಾಲೂಕು 28ನೇ ಕನ್ನಡ ಸಾಹಿತ್ಯ ಸಮ್ಮೇಳನ,ಸ್ವಾಗತ ಸಮಿತಿ ರಚನೆ

















