ರಾಷ್ಟ್ರೀಯ ಹೆದ್ದಾರಿ 275 ಮಾಣಿಯಿಂದ ಸಂಪಾಜೆಯ ವರೇಗೆ ಅಭಿವೃದ್ಧಿ ಮತ್ತು ಅಗಲೀಕರಣದ DPR ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮೊದಲು, (ಪುತ್ತೂರಿಗೆ ನೀಡಿದ ಸೌಲಭ್ಯಗಳನ್ನು ಸುಳ್ಯಕ್ಕೆ ನೀಡದಿರುವುದು ವಿಷಾದನೀಯ) ಸುಳ್ಯದ ನಗರ ಪಂಚಾಯತ್ ನಲ್ಲಿ ಸಾರ್ವಜನಿಕರ ಸಭೆ ನಡೆಸಿ, ಸುಳ್ಯದ ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಿ, ಸುಳ್ಯದ ಪಾರ್ಕಿಂಗ್ ಮತ್ತು ಇನ್ನಿತರ ಕೆಲವು ಪ್ರಮುಖ ಸಮಸ್ಯೆಗಳನ್ನು ಏಕ ಕಾಲಕ್ಕೆ ಪರಿಹರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಡಿ.ಎಂ ಶಾರೀಕ್ ಒತ್ತಾಯಿಸಿದ್ದಾರೆ.
ಸುಳ್ಯ ನಗರ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆಯ ವಿನ್ಯಾಸದೊಂದಿಗೆ ಇಕ್ಕೆಲಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ರೂಪಿಸುವುದು ಅಗತ್ಯವಾಗಿದೆ.ಅಲ್ಲದೇ ಪಾದಾಚಾರಿಗಳಿಗೆ ರಸ್ತೆ ದಾಟಲು 2 ಫೈ ಓವರ್ ಮತ್ತು 2 ಅಂಡರ್ ಪಾಸ್ ನಿರ್ಮಿಸುವುದು ಸೂಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ
.



































