ವೈಭವದಿಂದ ನಡೆದ ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಪನ್ನ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ
ಪ್ರಯುಕ್ತ ಐದನೇ ದಿನ ಶ್ರೀ ಮಂಜುನಾಥ ಸ್ವಾಮಿಯ ಗೌರಿಮಾರು ಕಟ್ಟೆ ಉತ್ಸವವು ಸಂಪನ್ನಗೊಂಡಿತು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ನಾಡಿನ ನಾನ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಲಕ್ಷ ದೀಪೋತ್ಸವದ ಗೌರಿಮಾರು ಕಟ್ಟೆ ಉತ್ಸವದಲ್ಲಿ ಪಾಲ್ಗೊಂಡು ಕಣ್ತುಂಬಿ ಧನ್ಯತಾ ಭಾವ ಹೊಂದಿದರು.

ಲಕ್ಷ ದೀಪೋತ್ಸವದ
ಐದು ದಿನಗಳ ಉತ್ಸವದಲ್ಲಿ ಕೊನೆಯ ದಿನ ಗೌರಿಮಾರು ಕಟ್ಟೆ ಉತ್ಸವದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿ, ಉತ್ಸವ ಆರಂಭಗೊಂಡಿತು.

ಬಳಿಕ ದೇಗುಲದ ಒಳಾಂಗಣದಲ್ಲಿ 16 ಸುತ್ತು ಪ್ರದಕ್ಷಿಣೆಯ ಉತ್ಸವ ಬಲಿ ನಡೆದು ಅನಂತರ
ಹೊರಾಂಗಣಕ್ಕೆ ಉತ್ಸವ ಮೂರ್ತಿಯನ್ನು ಕರೆತರಲಾಯಿತು.
ಉತ್ಸವ ಮೂರ್ತಿಯನ್ನು ಸರ್ವಾಲಂಕೃತವಾದ ಬೆಳ್ಳಿರಥದಲ್ಲಿ
ವಿರಾಜಮಾನಗೊಳಿಸಿ ದೇವಾಲಯಕ್ಕೆ ಒಂದು ಸುತ್ತು ಬರಲಾಯಿತು.
ಆ ಬಳಿಕ ಬೆಳ್ಳಿರಥವನ್ನು ಭಕ್ತರ ಉದ್ಘೋಷದೊಂದಿಗೆ, ಅಲಂಕೃತಗೊಂಡ ಆನೆಗಳು, ಬಸವ, ಚೆಂಡೆ, ವಾದ್ಯ, ವಾಲಗ, ಶಂಖ, ಜಾಗಟೆ ಸೇರಿದಂತೆ ನಾಡಿನ ವಿವಿದ ಕಡೆಗಳಿಂದ ಬಂದ ವಿವಿಧ ಕಲಾ ಪ್ರಕಾರದಲ್ಲಿ ಕಲಾವಿದರು ಸೇವೆ ಸಲ್ಲಿಸಿದರು.
ದೇವಳದಿಂದ ಕ್ಷೇತ್ರದ ಮುಖ್ಯದ್ವಾರ ಬಳಿ
ಗೌರಿಮಾರು ಕಟ್ಟೆಗೆ ಬೆಳ್ಳಿ ರಥವನ್ನು ಸಹಸ್ರಾರು ಸಂಖ್ಯೆಯ ಭಕ್ತರು ಎಳೆದು ತಂದರು.

ಗೌರಿಮಾರು ಕಟ್ಟೆಯಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಮಂಜುನಾಥ ಸ್ವಾಮಿ ಉತ್ಸವ ಮೂರ್ತಿಗೆ ವಿವಿಧ ಸೇವೆ ನೆರವೇರಿತು.

ಬಳಿಕ‌ ಅಲ್ಲಿಂದ ದೇವಸ್ಥಾನದ ಮುಂಭಾಗಕ್ಕೆ ಕರೆತರಲಾಯಿತು.
ದೇವಸ್ಥಾನಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ, ದೇವರ ಮೂರ್ತಿ ದೇಗುಲದ ಒಳಗೆ ಪ್ರವೇಶಿಸುವ ಮೂಲಕ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಉತ್ಸವವು ಸಂಪನ್ನಗೊಂಡಿತು.
ಈ ಸಂದರ್ಭ ಹೆಗ್ಗಡೆ ಕುಟುಂಬಸ್ಥರು,
ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ದೇವಳದ ತಂತ್ರಿ ವರ್ಗ, ಅರ್ಚಕ ವೃಂದ ದೇವಳದ ವಿವಿಧ ಸ್ತರದ ಮುಖ್ಯಸ್ಥರು, ಗಣ್ಯರು, ಸೇವಾಕರ್ತರು, ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ಭಕ್ತರು ಪಾಲ್ಗೊಂಡಿದ್ದರು.

ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಸಮವಸರಣ ಪೂಜೆ

ಲಕ್ಷ ದೀಪೋತ್ಸವದ ಆರನೇ ದಿನ ಗುರುವಾರದಂದು ಸಂಜೆ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನೆರವೇರಿತು.‌

ಧರ್ಮಾಧಿಕಾರಿ ಡಾ.‌ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಮಹೋನ್ನತ ಸಭಾ ಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಬಾಹುಬಲಿ ಸೇವಾ ಸಮಿತಿ ಹಾಗೂ ಧರ್ಮಸ್ಥಳದ ಶ್ರಾವಕ-ಶ್ರಾವಕಿಯರ ನೇತೃತ್ವದಲ್ಲಿ ಸಮವಸರಣ ಪೂಜಾ ಕಾರ್ಯಕ್ರಮ ನೆರವೇರಿತು.
ಹೆಗ್ಗಡೆ ಕುಟುಂಬಸ್ಥರಾದ ಹೇಮಾವತಿ ವೀ.‌ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ನೀತಾ ರಾಜೇಂದ್ರ ಕುಮಾರ್, ಶ್ರದ್ಧಾ ಅಮಿತ್, ಸೋನಿಯಾ ವರ್ಮ, ಡಿ.‌ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್, ಡಿ.‌ ಶ್ರೇಯಸ್ ಕುಮಾರ್, ಪೂರಣ್ ವರ್ಮ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ವಿವಿಧ ಕಡೆಗಳಿಂದ ಆಗಮಿಸಿದ ಶ್ರಾವಕ-ಶ್ರಾವಕಿಯರು ಇದ್ದರು.

ಮಂಗಳೂರು ಸುಕುಮಾರ್ ಬಲ್ಲಾಳ್ ತಂಡದಿಂದ ಸಾಣೂರು ಶ್ರೀಧರ ಪಾಂಡಿ ವಿರಚಿತ ಯಕ್ಷಾಮೃತ ಕನಕಜ್ವಾಲೆ ಪ್ರದರ್ಶನಗೊಂಡಿತು.

ಸಾವಿರಾರು ಜಾನಪದ ಕಲಾವಿದರು ಕಲಾಸೇವೆ ಅರ್ಪಿಸಿದರು.
ನಾಡಿನೆಲ್ಲೆಡೆಯಿಂದ 1392 ತಂಡಗಳ 6849 ಕಲಾವಿದರು ಶ್ರದ್ಧಾಭಕ್ತಿಯಿಂದ ಕಲಾಸೇವೆ ಮಾಡಿ ಧನ್ಯತೆಯನ್ನು ಹೊಂದಿದರು.
ವಾಲಗ (929 ಕಲಾವಿದರು) ಬ್ಯಾಂಡ್ ಸೆಟ್ (984) ಶಂಖ (127) ಡೊಳ್ಳು ಕುಣಿತ (1735) ಕರಡಿಮೇಳ, ಚಿಟ್ ಮೇಳ, ತಮಟೆ ವಾದ್ಯ (1425) ವೀರಗಾಸೆ (1610) ಇತರ (39).

Leave a Comment

Your email address will not be published. Required fields are marked *

error: Content is protected !!
Scroll to Top