ತೊಡಿಕಾನ ಗ್ರಾಮದಲ್ಲಿ ನೆಟ್ ವರ್ಕ್ ಇಲ್ಲದೆ ಜನರ ಪರದಾಟ!

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ರಸ್ತೆ ಬದಿ ಪೈಪು ಲೈನಿಗಾಗಿ ತೋಡಿದ ಚರಂಡಿಯಿಂದಾಗಿ ಗ್ರಾಮದಲ್ಲಿರುವ ಏಕಮಾತ್ರ ಬಿಎಸ್ಎನ್ಎಲ್ ಮೊಬೈಲ್ ಟವರ್ ಗೆ ಸಂಪರ್ಕ ಕಲ್ಪಿಸುವ ಕೇಬಲ್ ತುಂಡಾದ ಕಾರಣದಿಂದ ತೊಡಿಕಾನ ಗ್ರಾಮದಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದೆ ಕಳೆದ ಮೂರು ದಿನಗಳಿಂದ ಜನರು ಪರದಾಟ ನಡೆಸುತ್ತಿದ್ದಾರೆ.ಮೊದಲೇ ತೊಡಿಕಾನ ಗ್ರಾಮದಲ್ಲಿ ಬಿ.ಎಸ್‌.ಎನ್.ಮೊಬೈಲ್ ಟವರ್ ಮಾತ್ರ ಇದ್ದು ಆಗಾಗ ಕೈ ಕೊಡುತ್ತಿತ್ತು.ಇದೀಗ ಟವರ್ ಈಗ ಪೂರ್ಣ ಪ್ರಮಾಣದಲ್ಲಿ ಸ್ಥಗೀತಗೊಂಡ ಹಿನ್ನಲೆಯಲ್ಲಿ ಗುಡ್ಡ ಬೆಟ್ಟ ಹತ್ತಿ ಅಲೆದಾಡಿಷರೂ ನೆಟ್ ವರ್ಕ್ ಇಲ್ಲದಾಗಿದೆ. ನೆಟ್ವರ್ಕ್ ಸಮಸ್ಯೆಯ ಬಗ್ಗೆ ತೊಡಿಕಾನ ಗ್ರಾಮಸ್ಥರು ಸಂಬಂಧ ಪಟ್ಟ ಅಧಿಕಾರಿಗಳಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಗ್ರಾಮಸ್ಥರು ಅಕ್ರೋಶ ಗೊಂಡು ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ತೊಡಿಕಾನ ಗ್ರಾಮದಲ್ಲಿ ಸುಳ್ಯ ಸೀಮೆ ಮಲ್ಲಿಕಾರ್ಜುನ ದೇವಸ್ಥಾನ, ಬ್ಯಾಂಕ್ ,ಪೋಸ್ಟ್ ಆಫೀಸ್ ಹಾಲು ಉತ್ಪಾದಕರ ಸಂಘ, ಸರಕಾರಿ ಶಾಲೆ,ಅಡ್ಯಡ್ಕದಲ್ಲಿ ಪಡಿತರ ವಿತರಣಾ ಕೇಂದ್ದು ಇವುಗಳು ನೆಟ್ ವರ್ಕ್ ಇಲ್ಲದೆ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top