ಸುಳ್ಯದ ತಾಲೂಕಿನ ಅಜ್ಜಾವರ ವಲಯದ ಬೂಡು ಅಂಗನವಾಡಿ ಶಾಲೆಯಲ್ಲಿ ಪೂಜ್ಯರಾದ ಡಾ.ವೀರೇಂದ್ರ ಹೆಗ್ಗಡೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ್ ಅಮೆಚೂರು, ಜನಜಾಗೃತಿ ವೇದಿಕೆ ಸದಸ್ಯರಾದ ಪದ್ಮಯ್ಯ ಶೆಟ್ಟಿ, ತಾಲೂಕಿನ ಯೋಜನಾಧಿಕಾರಿಯದ ಮಾಧವ ಗೌಡ,ಜನಜಾಗೃತಿ ವೇದಿಕೆ ಸದಸ್ಯರಾದ ರಾಧಾಕೃಷ್ಣ ರೈ ಬೂಡು, ಜನಜಾಗೃತಿ ವೇದಿಕೆಯ ಸದಸ್ಯರಾದ ಸುಬ್ಬ ಪಾಟಲಿ, ಅಂಗನವಾಡಿ ಶಿಕ್ಷಕಿ ಕುಮಾರಿ ಕವಿತಾ ಮತ್ತು ಸಹಾಯಕರಾದ ಕುಸುಮಾವತಿ ಮತ್ತು ಅಜ್ಜಾರವಲಯದ ಮೇಲ್ವಿಚಾರಕರಾದ ಶ್ರೀಮತಿ ಅನಿತಾ,ತಾಲೂಕಿನ ನೋಡಲ್ ಅಧಿಕಾರಿಯದ ಹೇಮಂತ್ ಮತ್ತು ಸೇವ ಪ್ರತಿನಿಧಿ ಸೌಮ್ಯ ಉಪಸ್ಥಿತರಿದ್ದರು.



































