ಇತಿಹಾಸ ಪ್ರಸಿದ್ದ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದಶಂಬರ್ 16 ರಿಂದ ಧನು ಪೂಜೆ ಆರಂಭಗೊಳ್ಳಲಿದ್ದು ಧನು ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೇವಳದ ಅಕ್ಷಯ ಮಂದಿರದಲ್ಲಿ ನ.29ರಂದು ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿಬಿ ದಿವಾಕರ ರೈ, ವ್ಯವಸ್ಥಾಪನ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ವೇದಿಕೆಯಲ್ಲಿದ್ದರು.
ವ್ಯವಸ್ಥಾಪನ ಸಮಿತಿ ಸದಸ್ಯರಾದ ತೀರ್ಥರಾಮ ಪರ್ನೋಜಿ,ಕೆ ಕೆ ಬಾಲಕೃಷ್ಣ ಕುಂಟುಕಾಡು ತಿಮ್ಮಯ್ಯ ಮೆತ್ತಡ್ಕ,ಮಾಲತಿ ಭೋಜಪ್ಪ, ಚಂಚಲಾಕ್ಷಿ ನಾಗೇಂದ್ರ ಕುಲ್ಟಾರು ಅರಂತೋಡು, ವಸಂತ ಪೆಲ್ತಡ್ಕ, ಮಾಜಿ ಸದಸ್ಯರುಗಳಾದ ಕೆ ಕೆ ನಾರಾಯಣ, ಎಸ್. ಪಿ. ಲೋಕನಾಥ, ಗಣಪತಿ ಭಟ್, ತಾ. ಪಂ. ಮಾಜಿ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಭಜನಾ ಮಂಡಳಿ ಅಧ್ಯಕ್ಷರಾದ ಚಂದ್ರಶೇಖರ ಆಚಾರ್ಯ, ಜನಾರ್ಧನ ಬಾಳೆಕಜೆ, ಮಹೇಶ್ ಕುತ್ತಮೊಟ್ಟೆ, ಕಮಲಾಕ್ಷ ಪಡ್ಪು, ಕದಿರೇಶನ್ ಪಿಲೈ ಅವಿನಾಶ್ ಬಸ್ ನ ಮಾಲಕ ಅವಿನಾಶ್ ರೈ ಸಭೆಯಲ್ಲಿ ಭಾಗವಹಿಸಿದ್ದರು. ದೇವಸ್ಥಾನದ ಕಚೇರಿ ವ್ಯವಸ್ಥಾಪಕರಾದ ಆನಂದ ಕಲಗದ್ದೆ ಕಾರ್ಯಕ್ರಮನಿರೂಪಿಸಿದರು.
ನಿರಂತರ ಒಂದು ತಿಂಗಳ ಕಾಲ ಪ್ರತಿದಿನ ಪ್ರಾತ: ಕಾಲದಲ್ಲಿ ಶ್ರೀ ಕ್ಷೇತ್ರದಲ್ಲಿ ಧನು ಪೂಜೆ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ.ಪ್ರತಿ ದಿನ ಧನುಪೂಜೆ ಪ್ರಯುಕ್ತ ಮುಂಜಾನೆ ಸುಳ್ಯದಿಂದ ತೊಡಿಕಾನಕ್ಕೆ ಬರಲು ಅವಿನಾಶ್ ಬಸ್ಸಿನ ವ್ಯವಸ್ಥೆ ಇರುತ್ತದೆ.
ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಧನುಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

















