ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸಂಜೀವ ಕುದ್ಪಾಜೆ 33 ವರ್ಷಗಳ ಸುದೀರ್ಘ ಸೇವೆಯಿಂದ ನ. 29ರಂದು ನಿವೃತ್ತಿಯಾದರು.
ಕುದ್ಪಾಜೆ ದಿ. ಅಯ್ಯಣ್ಣ ಗೌಡ ಮತ್ತು ಹೊನ್ನಮ್ಮ ದಂಪತಿಯ ಪುತ್ರನಾಗಿ 1965ರ ಡಿಸೆಂಬರ್ 1ರಂದು ಜನಿಸಿದ ಸಂಜೀವ ಕುದ್ದಾಜೆಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು 1-4ಸ.ಕಿ.ಪ್ರಾ. ಶಾಲೆ ಕೊಡಿಯಾಲಬೈಲು ಹಾಗೂ 5-7 ಸ.ಮಾ.ಹಿ.ಪ್ರಾ. ಶಾಲೆ ಸುಳ್ಯದಲ್ಲಿ ಪೂರೈಸಿ, ಪ್ರೌಢ ಹಾಗೂ ಪಿ.ಯು. ಶಿಕ್ಷಣವನ್ನು ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಪೂರೈಸಿದರು.
1985ರಿಂದ 1988ರ ತನಕ ಸುಳ್ಯದ ಎನ್.ಎಂ.ಸಿ.ಯಲ್ಲಿ ಬಿ.ಎ. ಪದವಿಯನ್ನು ಮುಗಿಸಿ, ಮದ್ರಾಸ್ ಯೂನಿವರ್ಸಿಟಿಯಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ಪದವಿಯನ್ನು ಪಡೆದು, 1992ರ ಜು. 1ರಂದು ಸುಳ್ಯದ ಎನ್.ಎಂ.ಸಿ.ಗೆ ಕನ್ನಡ ಉಪನ್ಯಾಸಕರಾಗಿ ಸೇವೆಗೆ ಸೇರ್ಪಡೆಗೊಂಡರು.
ಎನ್.ಎಂ.ಸಿಯ ಕನ್ನಡ ವಿಭಾಗದ ಮುಖ್ಯಸ್ಥ ಸಂಜೀವ ಕುದ್ಪಾಜೆ ಸೇವಾ ನಿವೃತ್ತಿ

















