ಸುಳ್ಯ: ಕಳೆದ 9 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶದೊಂದಿಗೆ ಸುಳ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಬೆಳೆದಿರುವ ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು, ಇದೀಗ ದಶಮಾನೋತ್ಸವದ (Decennial Celebration) ಸಂಭ್ರಮದಲ್ಲಿದೆ. 2026-27ನೇ ಸಾಲಿನಲ್ಲಿ ಜರಗಲಿರುವ ದಶಮಾನೋತ್ಸವದ ಪೂರ್ವಭಾವಿಯಾಗಿ ಹಾಗೂ ಮುನ್ನುಡಿಯಾಗಿ, ಸಂಸ್ಥಾಪಕರಾದ ಡಾ. ಕುರುಂಜಿ ವೆಂಕಟರಮಣ ಗೌಡರ 98ನೇ ಜನ್ಮದಿನಾಚರಣೆಯ ಪ್ರಯುಕ್ತ ಡಿ.26 ರಂದು ‘ಆರೋಗ್ಯಕ್ಕಾಗಿ ಓಟ’ (Run for Health) ಎಂಬ ಮ್ಯಾರಥಾನ್ ಅನ್ನು ಆಯೋಜಿಸಲಾಗಿದೆ ಕೆ.ವಿ.ಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯಶೋಧ ರಾಮಚಂದ್ರ,ಅಕಾಡೆಮಿ ಆಫ್ ಲಿಬರಲ್ ಏಜ್ಯುಕೇಶನ್ ಬಿ.ಕಮಿಟಿ ಇದರ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ,ಸಂಸ್ಥೆಯ ದೈಹಿಕ ಶಿಕ್ಷಕ ಡಾ.ರಾಜೇಶ್ವರ್ ತಿಳಿಸಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಒಂದು ದಶಕದ ಶೈಕ್ಷಣಿಕ ಪಯಣವನ್ನು ಪೂರೈಸುತ್ತಿರುವ ಕಾಲೇಜು, ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಕ್ರೀಡೆ ಮತ್ತು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿದೆ ಎಂಬುದಕ್ಕೆ ಈ ಮ್ಯಾರಥಾನ್ ಸಾಕ್ಷಿಯಾಗಿದೆ. ಈ ದಶಮಾನೋತ್ಸವದ ಪ್ರಯುಕ್ತ ನಡೆಯುವ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನ, ಟಿ-ಶರ್ಟ್ ಹಾಗೂ ಪದಕಗಳನ್ನು ನೀಡಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ.ವಿ., ಟ್ರಸ್ಟಿ ಡಾ. ಜ್ಯೋತಿ ಆರ್. ಪ್ರಸಾದ್ ಮತ್ತು ಶ್ರೀ ಮೌರ್ಯ ಆರ್. ಪ್ರಸಾದ್, ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ’ ಬಿ’ ಯಲ್ಲಿ ಬರುವ ಎಲ್ಲ ಸಹ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಿರುತ್ತಾರೆ. ಪ್ರಸಿದ್ಧ ಕ್ರೀಡಾಪಟುಗಳು ಹಾಗೂ ಗಣ್ಯರು ಪ್ರಶಸ್ತಿ ವಿತರಣಾ ಸಮಯದಲ್ಲಿ ಭಾಗವಹಿಸಲಿದ್ದಾರೆ.
ಮ್ಯಾರಥಾನ್ ವಿಭಾಗಗಳು
ಮ್ಯಾರಥಾನ್ ಮೂರು ವಿಭಾಗಗಳಲ್ಲಿ ನಡೆಯಲಿದ್ದು
ಪುರುಷರು (18 ವರ್ಷ ಮೇಲ್ಪಟ್ಟವರು): 10 ಕಿ.ಮೀ
ಮಹಿಳೆಯರು (ಎಲ್ಲಾ ವಯೋಮಾನದವರು): 5 ಕಿ.ಮೀ
ಬಾಲಕರು (18 ವರ್ಷಕ್ಕಿಂತ ಕಡಿಮೆ): 5ಕಿ.ಮೀ ದೂರ ಮ್ಯಾರಥನ್ ಓಟ ನಡೆಯಲಿದೆ.
ವಿಜೇತರಿಗೆ ಪ್ರಥಮ ರೂ 5,000
ದ್ವೀತಿಯ ರೂ3,000,
ತ್ರತೀಯ ರೂ 2,000
ಚತುರ್ಥ ರೂ 1,000 ಪ್ರತಿ ವಿಭಾಗದಲ್ಲಿ ಬಹುಮಾನ ನೀಡಲಾಗುವುದು
ರೂ 200 ಪ್ರವೇಶ ಶುಲ್ಕ ಇರುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಟಿ-ಶರ್ಟ್ ಮತ್ತು ಸರ್ಟಿಫಿಕೇಟ್,ಓಟವನ್ನು ಪೂರ್ಣಗೊಳಿಸುವವರಿಗೆ ಪದಕ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು.
ಓಟದ ಮಾರ್ಗ ಪುರುಷರು (18 ವರ್ಷ ಮೇಲ್ಪಟ್ಟವರು): 10 ಕಿ.ಮೀ ಮ್ಯಾರಥಾನ್ ಕೆ.ವಿ.ಜಿ. ಅಮರಜ್ಯೋತಿ ಪಿಯು ಕಾಲೇಜುನಲ್ಲಿ ಪ್ರಾರಂಭಗೊಂಡು -ವಿವೇಕಾನಂದ ಸರ್ಕಲ್ ಜ್ಯೋತಿ ಸರ್ಕಲ್ ಪೈಚಾರ್ ಸುಳ್ಯ ಬಸ್ ಸ್ಟ್ಯಾಂಡ್ → ಚೆನ್ನಕೇಶವ ದೇವಸ್ಥಾನ ದಾರಿ ಮುಖಾಂತರ ಪುನಃ ಕಾಲೇಜಿನಲ್ಲಿ ಅಂತ್ಯಗೊಳ್ಳಲಿದೆ.
ಮಹಿಳೆಯರು (ಎಲ್ಲಾ ವಯೋಮಾನದವರು): 5 ಕಿ.ಮೀ ಹಾಗೂ ಬಾಲಕರು (18 ವರ್ಷಕ್ಕಿಂತ ಕಡಿಮೆ): 5ಕಿ.ಮೀ
ವಿವೇಕಾನಂದ ಸರ್ಕಲ್ ಶ್ರೀರಾಂಪೇಟೆ → ಸುಳ್ಯ ಬಸ್ ಸ್ಟ್ಯಾಂಡ್ ಗಾಂಧಿನಗರ → ಉಡುಪಿ ಗಾರ್ಡನ್ ಚೆನ್ನಕೇಶವ ದೇವಸ್ಥಾನ ದಾರಿ ಮುಖಾಂತರ ಪುನಃ ಕಾಲೇಜಿನಲ್ಲಿ ಅಂತ್ಯಗೊಳ್ಳಲಿದೆ.ಮಾರ್ಗದುದ್ದಕ್ಕೂ ನೀರಿನ ಸ್ಟೇಷನ್‌ಗಳು, ವೈದ್ಯಕೀಯ ಸೇವೆ, ತುರ್ತು ವಾಹನ ವ್ಯವಸ್ಥೆ ಹಾಗೂ ಭಾಗವಹಿಸುವರಿಗಾಗಿ ಬೆಳಗಿನ ಲಘು ಉಪಹಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡೆಂಡಲ್ ಕಾಲೇಜು ಆಡಳಿತಾಧಿಕಾರಿ ಮಾದವ ಬಿ.ಟಿ ಕಾಲೇಜಿನ ಉಪ ಪ್ರಾಂಶುಪಾಲ ದೀಪಕ್ ವೈ.ಆರ್ ಉಪಸ್ಥಿತರಿದ್ದರು.
ದಶಮಾನೋತ್ಸವದ ಹೊಸ್ತಿಲಲ್ಲಿ ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು : ಡಿ.26 ರಂದು ಮಾರಥಾನ್ ಮೂಲಕ ಸಂಭ್ರಮಾಚರಣೆಗೆ ಚಾಲನೆ



































