ಪಂಜ : ರಾಜ್ಯಮಟ್ಟದ ಯುವ ಸಂಭ್ರಮಕ್ಕೆ ನೂತನ‌ ಪದಾಧಿಕಾರಿಗಳ ಆಯ್ಕೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ನೇತೃತ್ವದಲ್ಲಿ ಜ.17 ಮತ್ತು 18 ರಂದು ಪಂಜದಲ್ಲಿ ರಾಜ್ಯ ಮಟ್ಟದ ಯುವ ಸಂಭ್ರಮ 2025 ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ, ಸಾಂಘಿಕ ಪ್ರಶಸ್ತಿ, ಪಂಚಸಪ್ತತಿ -2025 ಪ್ರಶಸ್ತಿ ವಿತರಣೆ, ರಾಜ್ಯಮಟ್ಟದ ಜನಪದ ಸ್ಪರ್ಧೆ ಹಾಗೂ ಕೃಷಿ ಮೇಳ, ಆಹಾರ ಮೇಳ, ವಾಹನ ಮೇಳ, ವಾಹನ ಸಾಲ ಮೇಳ , ವಸ್ತು ಪ್ರದರ್ಶನ ನಡೆಯಲಿದ್ದು ಈ ಕುರಿತು ಪೂರ್ವ ಸಿದ್ಧತೆಗೆ ಯೋಜನೆ ರೂಪಿಸುವ ಸಲುವಾಗಿ ಡಿ.1 ರಂದು ಪಂಜ ಪಂಚಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಪೂರ್ವಭಾವಿ ನಡೆಯಿತು.
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಸಭಾಧ್ಯಕ್ಷತೆ ವಹಿಸಿ, ಜನವರಿ 17 ಮತ್ತು 18ರಂದು ಎರಡು ದಿನಗಳ ಕಾಲ ಪಂಜ ದೇವಸ್ಥಾನದ ವಠಾರದಲ್ಲಿ ಯುವ ಸಂಭ್ರಮ ಹಮ್ಮಿಕೊಂಡಿರುವ ಕುರಿತು ವಿವರ ನೀಡಿದರಲ್ಲದೆ, ಕಾರ್ಯಕ್ರಮ ಯಶಸ್ಸಿಗೆ ಸಹಕಾರ ಯಾಚಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬಳಿಕ ಕೆಲ ಹೊತ್ತು ಸಮಾಲೋಚನೆ ನಡೆದು ಕಾರ್ಯಕ್ರಮ ಯಶಸ್ಸಿಗೆ ಸಮಿತಿಯನ್ನು ರಚಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಗೌರವಾಧ್ಯಕ್ಷರಾಗಿ, ದಿಲೀಪ್ ಬಾಬ್ಲುಬೆಟ್ಟು ಅಧ್ಯಕ್ಷರಾಗಿ, ವಿಜೇಶ್ ಹಿರಿಯಡ್ಕ ಕಾರ್ಯದರ್ಶಿಯಾಗಿ, ಲೋಹಿತ್ ಬಾಳಿಕಳ ಕೋಶಾಧಿಕಾರಿ ಇರುವ ಸಮಿತಿಯನ್ನು ಮಾಡಲಾಯಿತಲ್ಲದೆ, ಉಪಸಮಿತಿಗಳಿಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು
ಗೌರವಾಧ್ಯಕ್ಷರು- ಕು/ ಭಾಗೀರಥಿ ಮುರುಳ್ಯ
ಅಧ್ಯಕ್ಷರು – ದಿಲೀಪ್ ಬಾಬ್ಲುಬೆಟ್ಟು
ಪ್ರಧಾನ ಕಾರ್ಯದರ್ಶಿ- ವಿಜೇಶ್ ಹಿರಿಯಡ್ಕ
ಜತೆ ಕಾರ್ಯದರ್ಶಿ- ನವೀನ್ ನಾಗತೀರ್ಥ
ಕೋಶಾಧಿಕಾರಿ- ಲೋಹಿತ್ ಬಾಳಿಕಳ
ಉಪಾಧ್ಯಕ್ಷರು- ಕಾರ್ಯಪ್ಪ ಗೌಡ ಚಿದ್ಗಲ್
ಡಾ/ ದೇವಿಪ್ರಸಾದ್ ಕಾನತ್ತೂರ್
ಚಂದ್ರಶೇಖರ ಶಾಸ್ತ್ರೀ ‘ ಚಿರಶ್ಯಾಮಲಾ’
ಚಿನ್ನಪ್ಪ ಗೌಡ ಸಂಕಡ್ಕ
ನಾರಾಯಣ ಕೃಷ್ಣನಗರ
ಸ್ವಾಗತ ಸಮಿತಿ ಸಂಚಾಲಕರು- ಮಾಧವ ಗೌಡ ಜಾಕೆ

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಶಾಸಕಿ ಭಾಗೀರಥಿ ಮುರುಳ್ಯರು ಮಾತನಾಡಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ಯಶಸ್ವಿಯಾಗುತ್ತದೆ.

ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ಗೌಡ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಯುವ ಜನ ಸೇವಾ ಸಂಸ್ಥೆಯ ಅಧ್ಯಕ್ಷರು ದೀಪಕ್ ಕುತ್ತಮೊಟ್ಟೆ, ತಾಲೂಕು ಮಹಿಳಾ ಮಂಡಲಗಳ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ ಪ್ರಸಾದ್ ಕಾನತ್ತೂ‌ರ್, ಯುವ ಜನ ಸಂಯುಕ್ತ ಮಂಡಳಿ ಗೌರವಾಧ್ಯಕ್ಷ ವಿಜಯ ಕುಮಾ‌ರ್, ಕಾರ್ಯದರ್ಶಿ ಮುರಳಿ ನಳಿಯಾರು, ಖಜಾಂಜಿ ಲೋಹಿತ್ ಬಾಳಿಕಳ, ಯುವ ಪರ್ವ ಸಮಿತಿ ಅಧ್ಯಕ್ಷರು ದಿಲೀಪ್ ಬಾಬ್ಲುಬೆಟ್ಟು, ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪವನ್ ಪಲ್ಲತ್ತಡ್ಕ ಇವರು ಸ್ವಾಗತಿಸಿದರು. ವಿಜೇಶ್ ಹಿರಿಯಡ್ಕ ಇವರು ವಂದಿಸಿದರು, ಕಾರ್ಯದರ್ಶಿ ಮುರಳಿ ನಳಿಯಾರು ಇವರು ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top