ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳ ಪಕ್ರತಿಯ ರಮಣೀಯ ಹಸಿರ ಸಿರಿಯ ತಾಣದಲ್ಲಿ ಕಂಗೊಳಿಸುತ್ತಿದೆ. ಇಲ್ಲಿ ಡಿ.16ರಿಂದ ಜ. 14.1. 2026ರ ತನಕ ಧನು ಪೂಜೆ ಶ್ರದ್ದಾ ಭಕ್ತಿಯಿಂದ ನಡೆಯಲಿದೆ.
ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವ ಸ್ಥಾನದಲ್ಲಿ ಅನೇಕ ಜೀರ್ಣೋದ್ಧಾರ ಕಾಮಗಾರಿಗಳು ಯಶಸ್ವಿಯಾಗಿ ಪೂರೈ ಸಿದ್ದು, ಕಳೆದ 2017ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿರುತ್ತದೆ. ಶ್ರೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಶ್ರೀ ದೇವಳದಲ್ಲಿ ಈ ಹಿಂದೆ ನಡೆಯುತ್ತಿದ್ದ ಕೆಲವೊಂದು ಪೂಜಾ ವಿಧಿವಿಧಾನಗಳು ನಿಂತಿರುವ ಬಗ್ಗೆ ತಿಳಿದುಕೊಂಡು ಅವುಗಳಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದ್ದ ಧನುಪೂಜೆಯನ್ನು ಕಳೆದ ಹದಿನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಧನುಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದೆ.ಶ್ರೀ ಕ್ಷೇತ್ರ ತೊಡಿಕಾನದಲ್ಲಿ ನೂರಾರು ವರ್ಷಗಳ ಹಿಂದಿನ ದಾಖಲೆಗಳ ಪ್ರಕಾರ ಧನುಮಾಸದಲ್ಲಿ ಧನುಪೂಜೆಗಳು ನಡೆದ ಬಗ್ಗೆ ಮಾಹಿತಿ ಇದೆ. ಆ ಪ್ರಕಾರ ಇದೆ ಡಿ.16ರಿಂದ ಜ.14ರ ತನಕ ಧನುಪೂಜೆ ನಡೆಯಲಿದೆ. ಸುಳ್ಯ ಸೀಮೆಗೆ ಸಂಬಂಧಪಟ್ಟ ಎಲ್ಲಾ ಭಕ್ತಾಧಿಗಳು ಈ ವಿಶೇಷ ಪೂಜೆಯಲ್ಲಿ ಭಾಗಿಗಳಾಗಿ ದೇವರ ಸಂತೃಪ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಸೇವೆ ಮಾಡಲು ಇಚ್ಚಿಸುವ ಭಕ್ತಾಧಿಗಳು ಶ್ರೀ ದೇವಳದ ಕಚೇರಿಯನ್ನು ಸಂಪರ್ಕಿಸಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ.
ಧನುರ್ ಮಾಸದ ದಿವಸಗಳಲ್ಲಿ ವಿಶೇಷವಾಗಿ ಧನುಪೂಜೆ ಮಾಡಿಸುವವರು ರೂ. 500-00 ತೆತ್ತು ಧನು ಪೂಜೆಗೆ ಬೇಕಾದ ತಮಗೆ ದಿವಸವನ್ನು ಮುಂಚಿತವಾಗಿ ದೇವಳದ ಕಛೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕುಟುಂಬ ಸಮೇತರಾಗಿ ಪೂಜೆಯಲ್ಲಿ ಹಾಜರಾಗಬೇಕು. ಧನು ಪೂಜೆಯಲ್ಲಿ ಭಾಗಿಗಳಾಗುವವರು ಬೆಳಿಗ್ಗೆ 4-45 ಹಾಜರಾಗಬೇಕು.
ಧನುಪೂಜೆಯ ಎಲ್ಲಾ ದಿನಗಳಲ್ಲಿ ಸೀಮೆಯ ಭಜನಾ ತಂಡಗಳಿಂದ ಪೂರ್ವಾಹ್ನ ಗಂಟೆ 4-00ಕ್ಕೆ ಭಜನಾ ಸೇವೆ ಜರುಗಲಿರುವುದು.
ಡಿ.16ರಿಂದ ಜ.14ರ ತನಕ ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಳದಲ್ಲಿ ಧನುಪೂಜೆ

















